ETV Bharat / state

ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ: ಕಾರ್ಯಕರ್ತರಿಂದ ವಿಜಯೋತ್ಸವ - ಬಿಜೆಪಿ ಗೆಲುವಿನ ಆಚರಣೆ ಬಾಗಲಕೋಟೆ ಸುದ್ದಿ

ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಜಯಭೇರಿ ಗಳಿಸಿದ ಹಿನ್ನೆಲೆಯಲ್ಲಿ, ಚಿಕ್ಕೋಡಿ ಮತ್ತು ಬಾಗಲಕೋಟೆಯಲ್ಲಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

BJP activists celebrating BJP victory
ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ
author img

By

Published : Dec 9, 2019, 11:17 PM IST

ಚಿಕ್ಕೋಡಿ /ಬಾಗಲಕೋಟೆ: ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಜಯಭೇರಿ ಗಳಿಸಿದ ಹಿನ್ನೆಲೆಯಲ್ಲಿ, ಚಿಕ್ಕೋಡಿ ಹಾಗೂ ಬಾಗಲಕೋಟೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ ಆಚರಣೆ

ಬೆಳಗಾವಿ ನಗರದ ಆರ್ ಪಿ ಡಿ ವೃತ್ತದಲ್ಲಿ ಪರಸ್ಪರ ಗುಲಾಲ್ ಎರಚಿಕೊಂಡು ಕೈಯಲ್ಲಿ ಶಾಸಕರ ಭಾವಚಿತ್ರ ಹಿಡಿದು ಹಾಗೂ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದ್ದಾರೆ. ಇನ್ನು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ 18,020 ಬಹು ಅಂತರದ ಮತಗಳನ್ನು ಪಡೆದು ಭರ್ಜರಿ ಜಯಗಳಿಸಿದ್ದು ಇದೀಗ ಕಾಗವಾಡದಲ್ಲಿ ಕೇಸರಿ ಬಾವುಟ ಹಾರಿಸಿದ್ದಾರೆ.

ಇನ್ನು ಶಾಸಕ ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ಬಾಗಲಕೋಟೆ ನಗರದ ಬಸವೇಶ್ವರ ವೃತ್ತದ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವ ನಡೆಸಿದರು. ಈ ಸಂದರ್ಭದಲ್ಲಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ಬಗ್ಗೆ ಸುಳ್ಳು ಆರೋಪ ಮಾಡಿದ್ದರು. ಈಗ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಈ‌ ಮೂಲಕ ರಾಜ್ಯದಲ್ಲಿ ಯಡಿಯೂರಪ್ಪನವರು ಗಟ್ಟಿಯಾಗಿದ್ದು, ಮುಂದೆ ರಾಜ್ಯದ ಅಭಿವೃದ್ಧಿ ಆಗಲಿದೆ ಎಂದರು.

ಇನ್ನು ಈ ಸಮಯದಲ್ಲಿ ಎಲ್ಲಾ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Intro:ಕಾಗವಾಡ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ
Body:
ಚಿಕ್ಕೋಡಿ :

ಕಾಗವಾಡ ಮತಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ 18,020 ಬಹು ಅಂತರದ ಮತಗಳನ್ನು ಪಡೆದು ಭರ್ಜರಿ ಜಯಗಳಿಸಿದ್ದು ಇದೀಗ ಕಾಗವಾಡದಲ್ಲಿ ಕೇಸರಿ ಬಾವುಟ ಹಾರಿಸಿದ್ದಾರೆ

ಗಟಾನು ಗಟಿಗಳೇ ಸ್ಪರ್ಧಿಸಿ ರೊಚಕತೆಯಿಂದ ಕೂಡಿದ ಕಾಗವಾಡ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಅನರ್ಹ ಶಾಸಕರಾಗಿದ್ದ ಶ್ರೀಮಂತ ಪಾಟೀಲ ಅರ್ಹರೆನಿಸಿಕೊಂಡಿದ್ದಾರೆ.

ಮತ ಎಣಿಕೆ ಪ್ರಾರಂಭದಿಂದಲೇ ಶ್ರೀಮಂತನ ಅಭಿಮಾನಿಗಳು ಗುಲಾಲ ಮತ್ತು ಹಾರ ಹಿಡಿದು ಕಾತುರದಿಂದ ಕಾಯುತ್ತಿದ್ದರು. ಫಲಿತಾಂಶ ಹೊರ ಬರುತ್ತಿದ್ದಂತೆಯೇ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಬೆಳಗಾವಿ ನಗರದ ಆರ್ ಪಿ ಡಿ ವೃತ್ತದಲ್ಲಿ ಪರಸ್ಪರ ಗುಲಾಲ್ ಎರಚಿಕೊಂಡು ಕೈಯಲ್ಲಿ ಶಾಸಕರ ಭಾವಚಿತ್ರ ಹಿಡಿದು ಕುಣಿದು ಕುಪ್ಪಳಿಸಿದ್ದಾರೆ.

ಕಾಗವಾಡ ಕ್ಷೇತ್ರದಲ್ಲಿ ತಾತ್ಯಾ ಎಂದೇ ಪ್ರಸಿದ್ದಿ ಪಡೆದಿದ್ದ ಶ್ರೀಮಂತ ಪಾಟೀಲ್ ವಿರುದ್ದ ಈ ಬಾರಿ ಸಮಬಲವಾಗಿ ರಾಜು ಕಾಗೆ ತೊಡೆ ತಟ್ಟಿದ್ದು ಬಿರುಸಿನ ಪೈಪೋಟಿ ಎದ್ದು ಕಾಣುತ್ತಿತ್ತು .ಇದೀಗ ಬಹು ಅಂತರದ ಗೆಲುವಿನಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನ ತೊಳ ಬಲವನ್ನ ಶ್ರೀಮಂತ ಪಾಟೀಲ ಹೆಚ್ಚಿಸಿದ್ದಾರೆ.

ಅದರಂತೆ ಶ್ರೀಮಂತ ‌ಪಾಟೀಲ‌ ಅವರ ಕಟ್ಟಾ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಗುಲಾಲ ಹಂಚುವುದರ ಮೂಲಕ ಶ್ರೀಮಂತ ಪಾಟೀಲ ಗೆದ್ದ ಸಂತೋಷವನ್ನು ಹೊರಹಾಕುತ್ತಿದ್ದಾರೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.