ಬೆಳಗಾವಿ: ಕೊರೊನಾ ಸೋಂಕು ತೀವ್ರಗತಿಯಲ್ಲಿ ವ್ಯಾಪಿಸುತ್ತಿದ್ದರೂ ಡೋಂಟ್ ಕೇರ್ ಅನ್ನುತ್ತಿದೆ ಬಿಮ್ಸ್ ಆಡಳಿತ ಮಂಡಲಿ. ಎಷ್ಟೇ ಎಚ್ಚರಿಸಿದರೂ ಬಿಮ್ಸ್ ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳದೇ ಸೋಂಕಿತರಿದ್ದ ಆ್ಯಂಬುಲೆನ್ಸ್‌ನಲ್ಲೇ ಆರೋಗ್ಯವಂತ ಸಂಬಂಧಿಕರನ್ನು ಕುರಿ ಹಿಂಡಿನಂತೆ ಕೂರಿಸಿ ಸ್ಥಳಾಂತರ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ನಗರದ ಬಿಮ್ಸ್ ಆಸ್ಪತ್ರೆ ತುರ್ತು ಚಿಕಿತ್ಸಾ ವಿಭಾಗದಿಂದ ಕೋವಿಡ್ ವಾರ್ಡ್‌ಗೆ ಸ್ಥಳಾಂತರ ಮಾಡುವ ವೇಳೆ ಬಿಮ್ಸ್ ಸಿಬ್ಬಂದಿ ಪದೇ ಪದೆ ಹಳೆಯ ತಪ್ಪುಗಳನ್ನೇ ರಿಪೀಟ್ ಮಾಡ್ತಿದ್ದು, ಕೋವಿಡ್ ಸೋಂಕಿತರ ಸ್ಥಳಾಂತರ ವೇಳೆ ದಿವ್ಯ ನಿರ್ಲಕ್ಷ್ಯ ವಹಿಸುತ್ತಿದೆ. ಸೋಂಕಿತರಿದ್ದ ಆ್ಯಂಬುಲೆನ್ಸ್‌ನಲ್ಲೇ ಆರೋಗ್ಯವಂತ ಸಂಬಂಧಿಕರನ್ನೂ ಸಹ ಒಂದೇ ಆ್ಯಂಬುಲೆನ್ಸ್‌ನಲ್ಲೇ ಸ್ಥಳಾಂತರ ಮಾಡುತ್ತಿದ್ದಾರೆ. ಬಿಮ್ಸ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ ರೋಗಿಗಳ ಸಂಬಂಧಿಕರಿಗೂ ಸೋಂಕು ಹರಡುವ ಭೀತಿ ಎದುರಾಗಿದೆ.
ಸೋಂಕಿತ ಸಂಬಂಧಿ ಜೊತೆಗೆ ಆಶಾ ಕಾರ್ಯಕರ್ತೆ ಆ್ಯಂಬುಲೆನ್ಸ್‌ನಲ್ಲೇ ತೆರಳಿದರು. ಈ ವೇಳೆ ಆಶಾ ಕಾರ್ಯಕರ್ತೆಗೆ ನಿಮಗೆ ಸೋಂಕು ಹರಡಲ್ವಾ ಅಂತಾ ಮಾಧ್ಯಮದವರು ಪ್ರಶ್ನಿಸಿದಾಗ, ವಯಸ್ಸಾದ ಸಂಬಂಧಿ ಜೊತೆ ಯಾರೂ ಇಲ್ಲ. ಹೀಗಾಗಿ ಜೊತೆಗೆ ಹೊರಟಿದ್ದೇನೆ ಎಂದು ಆಶಾ ಕಾರ್ಯಕರ್ತೆ ಅಸಹಾಯಕತೆ ವ್ಯಕ್ತಪಡಿಸಿದರು.
ಇತ್ತ ಆ್ಯಂಬುಲೆನ್ಸ್‌ಗಳಿದ್ದರೂ ಒಂದೇ ಆ್ಯಂಬುಲೆನ್ಸ್‌ನಲ್ಲೇ ಸೋಂಕಿತರನ್ನ ಶಿಫ್ಟ್ ಮಾಡ್ತಿರೋದೇಕೆ? ಜನರನ್ನು ಎಚ್ಚರಿಸಬೇಕಾದ ಬಿಮ್ಸ್ ಸಿಬ್ಬಂದಿಯೇ ಹೀಗೆ ಮಾಡಿದ್ರೆ ಹೇಗೆ ಎಂದು ಬಿಮ್ಸ್ ಆಡಳಿತ ಮಂಡಳಿ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.
ಓದಿ: 'ಟೆಸ್ಟ್ ರಿಪೋರ್ಟ್ ಕೇಳಿ ಚಿಕಿತ್ಸೆಗೆ ನಿರ್ಲಕ್ಷ್ಯ': ಕೊಪ್ಪಳದಲ್ಲಿ ಕಾರಿನಲ್ಲೇ ಕೊನೆಯುಸಿರೆಳೆದ ಮಹಿಳೆ