ಬೆಳಗಾವಿ : ಒಂದೇ ಆ್ಯಂಬುಲೆನ್ಸ್ನಲ್ಲಿ ಕುರಿ ಮಂದೆಯನ್ನು ತುಂಬಿದಂತೆ ಸೋಂಕಿತರನ್ನು ತುಂಬಿದ್ದಲ್ಲದೇ, ಸೋಂಕಿತ ತಾಯಿಯ ಜೊತೆ ಆರೋಗ್ಯವಂತ ಮಗಳನ್ನು ಸಹ ಆ್ಯಂಬುಲೆನ್ಸ್‌ನಲ್ಲೇ ಕೂರಿಸುವ ಮೂಲಕ ಬಿಮ್ಸ್ ಸಿಬ್ಬಂದಿ ಎಡವಟ್ಟು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದರೂ ಜಿಲ್ಲಾಡಳಿತವಾಗಲಿ, ಬಿಮ್ಸ್ ಆಡಳಿತ ಮಂಡಳಿಯಾಗಲಿ ಎಚ್ಚೆತ್ತುಕೊಂಡಿಲ್ಲ. ಇನ್ನು, ನಗರದ ಬಿಮ್ಸ್ ತುರ್ತು ಚಿಕಿತ್ಸಾ ವಿಭಾಗದಿಂದ ಬೇರೆ ಕಟ್ಟಡಕ್ಕೆ ಸೋಂಕಿತರನ್ನು ಶಿಫ್ಟ್ ಮಾಡುತ್ತಿದ್ದಾರೆ.
ಈ ವೇಳೆ ಅದೇ ಆ್ಯಂಬ್ಯುಲೆನ್ಸ್ನಲ್ಲಿ ಸೋಂಕಿತ ವೃದ್ಧೆ ತಾಯಿಯ ಜೊತೆ ಆರೋಗ್ಯವಂತ ಮಗಳನ್ನು ಕೂರಿಸಿದ್ದಾರೆ. ಈ ಮೂಲಕ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ.
ಇದೊಂದೇ ಪ್ರಕರಣವಲ್ಲದೆ, ಕೊರೊನಾ ಸೋಂಕಿತ ಗಂಡನ ಜೊತೆಗೆ ಪತ್ನಿಯನ್ನು ಕೂರಿಸುವ ಮೂಲಕ ಮತ್ತೊಂದು ಬೇಜವಾಬ್ದಾರಿ ಕೆಲಸ ಮಾಡಿದ್ದಾರೆ. ಈ ರೀತಿ ಮಾಡಿದಲ್ಲಿ ಸೋಂಕಿತರಿಂದ ಸಂಬಂಧಿಕರಿಗೂ ಕೊರೊನಾ ವೈರಸ್ ಹರಡುವ ಸಾಧ್ಯತೆ ಇದೆ.
ಬಿಮ್ಸ್ ಸಿಬ್ಬಂದಿ ಬೇಜವಾಬ್ದಾರಿ ವರ್ತನೆ ಬಿಟ್ಟು ಮುಂಜಾಗ್ರತಾ ಕ್ರಮಕ್ಕೆ ಮುಂದಾಗಬೇಕಿದೆ ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.