ETV Bharat / state

ಬಿಮ್ಸ್​ಗೆ ರೋಗಿಗಳ‌ ಸಹಾಯಕರು ಹಾಗೂ ಅನಧಿಕೃತ ವಾಹನಗಳ ಪ್ರವೇಶಕ್ಕೆ ನಿರ್ಬಂಧ - ಬೆಳಗಾವಿಯಲ್ಲಿ ಕೋವಿಡ್​ ಹೆಚ್ಚಳ

ಕೋವಿಡ್-19 ಉಪಚಾರ ವಾರ್ಡ್​ನಲ್ಲಿ ರೋಗಿಗಳ ಸಹಾಯಕರು ಅನಧಿಕೃತವಾಗಿ ಪ್ರವೇಶ ಪಡೆಯುತ್ತಿರುವ ಮಾಹಿತಿ ಬಂದ ಕಾರಣ ಬಿಮ್ಸ್​​, ಇದನ್ನು ತಡೆಯಲು ರೋಗಿಗಳ ಸಹಾಯಕರ ವಾಹನಗಳ ಅನಧಿಕೃತ ಪ್ರವೇಶಕ್ಕೆ ಬ್ರೇಕ್​ ಹಾಕಿದೆ..

bims
bims
author img

By

Published : May 21, 2021, 10:32 PM IST

ಬೆಳಗಾವಿ : ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯಲ್ಲಿ ಕೋವಿಡ್-19 ಉಪಚಾರ ವಾರ್ಡ್​ನಲ್ಲಿ ರೋಗಿಗಳ ಸಹಾಯಕರು ಅನಧಿಕೃತವಾಗಿ ಪ್ರವೇಶಿಸುತ್ತಿರುವ ಹಿನ್ನೆಲೆ ಅವರ ವಾಹನಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ತಿಳಿಸಿದ್ದಾರೆ.

ಇಂತಹ ಅನಧಿಕೃತ ಪ್ರವೇಶದಿಂದಾಗಿ ರೋಗಿಗಳ ಸಹಾಯಕರು ಕೋವಿಡ್-19ಕ್ಕೆ ತುತ್ತಾಗಿ ಅವರು ಯಾವುದೇ ಶಿಷ್ಟಾಚಾರ ಪಾಲಿಸದೇ ಇರುವುದರಿಂದ ಇತರರಿಗೂ ಸೋಂಕು ಹರಡುತ್ತಿದೆ. ಇದರಿಂದಾಗಿ ಯಾವುದೇ ನಿಯಂತ್ರಣ ಸಾಧಿಸಲು ಆಗುತ್ತಿಲ್ಲ‌ ಎಂದು ಅವರು ತಿಳಿಸಿದ್ದಾರೆ.

ಪ್ರವೇಶಕ್ಕೆ ಪೂರ್ವಾನುಮತಿ ಕಡ್ಡಾಯ : ರೋಗಿಗಳ ಸಹಾಯಕರು ಒಳಗೆ ಹೋಗಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಬಿಮ್ಸ್‌ನ ಸಮನ್ವಯ ಅಧಿಕಾರಿಗಳ ಬಳಿ ಪೂರ್ವಭಾವಿ ಅನುಮತಿ ಪಡೆಯಬೇಕು ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

ಅಹಿತಕರ ವಿಷಯಗಳಲ್ಲಿ ಸಂಸ್ಥೆಯ ಸಿಬ್ಬಂದಿ ಭಾಗಿಯಾಗಿರುವುದಿಲ್ಲ: ಸಂಸ್ಥೆಯ ಆವರಣದಲ್ಲಿ ಕೆಲವೊಂದು ಅನಧಿಕೃತ ಆ್ಯಂಬುಲೆನ್ಸ್, ಶವವಾಹನಗಳು ಹಾಗೂ ಆಟೋಗಳು ಪ್ರವೇಶವಾಗುತ್ತಿವೆ. ಅನಾವಶ್ಯಕವಾಗಿ ಹೊರರೋಗಿ ವಿಭಾಗ, ತುರ್ತು ಚಿಕಿತ್ಸಾ ವಿಭಾಗ ಹಾಗೂ ಶವಾಗಾರದ ಹತ್ತಿರ ಗೊಂದಲ ಮಾಡುತ್ತಿದ್ದು ಇದರಿಂದ ಸಾರ್ವಜನಿಕರಲ್ಲಿ ತಪ್ಪು ತಿಳುವಳಿಕೆ ಉಂಟಾಗುತ್ತಿದೆ.

ಕೋವಿಡ್​ನಿಂದ ಸಾವನ್ನಪ್ಪಿದ್ದ ಮೃತದೇಹ ಇತ್ಯಾದಿಗಳನ್ನು ಸಾಗಿಸಲು ಹೆಚ್ಚುವರಿ ಮೊತ್ತ ಪಡೆಯುತ್ತಿರುವ ಕುರಿತು ಸಾಕಷ್ಟು ದೂರುಗಳು ದಾಖಲಾಗಿರುತ್ತವೆ. ಇದರಿಂದಾಗಿ ಸಾರ್ವಜನಿಕರಲ್ಲಿ ಸಂಸ್ಥೆಯ ಸಿಬ್ಬಂದಿಯ ಬಗ್ಗೆ ತಪ್ಪು ಅಭಿಪ್ರಾಯ ಮೂಡಿದೆ.

ಇಂತಹ ಅಹಿತಕರ ವಿಷಯಗಳಲ್ಲಿ ಸಂಸ್ಥೆಯ ಸಿಬ್ಬಂದಿ ಭಾಗಿಯಾಗಿರುವುದಿಲ್ಲ ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಸಾರ್ವಜನಿಕರಿಗೆ ಸ್ಪಷ್ಟನೆ‌ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.