ಬೆಳಗಾವಿ: ಕೃಷಿ ಕಾಯ್ದೆ ತಿದ್ದುಪಡಿ ಹಾಗೂ ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಇಂದು ಕರೆ ನೀಡಿರುವ ಭಾರತ್ ಬಂದ್ ಗೆ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಗಿದ್ದು, ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಬಸ್ ಸಂಚಾರ ಸ್ಥಗಿತದಿಂದ ಚಿಕ್ಕಮ್ಮನ ಮದುವೆಗೆ ಹೋಗಲಾಗದೇ ಬಾಲಕನೋರ್ವ ಕಣ್ಣೀರು ಹಾಕಿದ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಇಲ್ಲಿನ ವಡಗಾಂವ್ ನಿವಾಸಿ ವಿದ್ಯಾ ಸಚಿನ್ ಗೋವೇಂಕರ್ ಎಂಬುವರು ತಮ್ಮ ಸಂಬಂಧಿಕರ ಮದುವೆಗೆ ತೆರಳಲು ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಬೆಳಗ್ಗೆ 6ಕ್ಕೆ ಬಸ್ ನಿಲ್ದಾಣಕ್ಕೆ ಬಂದಿದ್ದರು. ಆದ್ರೆ, ಭಾರತ ಬಂದ್ ಹಿನ್ನೆಲೆ ರೈತರು ಪ್ರತಿಭಟನೆ ನಡೆಸುತ್ತಿದ್ದು, ಬಸ್ ಸಂಚಾರ ಸ್ಥಗಿತವಾದ ಕಾರಣ, ಯಾವುದೇ ಬಸ್ಗಳು ಸಂಚರಿಸುತ್ತಿಲ್ಲ.
ಓದಿ :ಕೇಂದ್ರದ ನೂತನ ಕೃಷಿ ಕಾಯ್ದೆ ವಿರೋಧಿಸಿ ಭಾರತ್ ಬಂದ್ : ಎಲ್ಲೆಲ್ಲೂ ಖಾಕಿ ಸರ್ಪಗಾವಲು
ಈ ವೇಳೆ ಮಾತನಾಡಿದ ಪ್ರಯಾಣಿಕರು ಲಾಕ್ ಡೌನ್ ವೇಳೆ ಹೊರಗಡೆ ಎಲ್ಲಿಯೂ ಹೋಗಲು ಸಾಧ್ಯವಾಗಿರಲಿಲ್ಲ. ನಾಳೆ ನಮ್ಮ ಸಂಬಂಧಿಕರ ಮದುವೆ ಇದ್ದ ಕಾರಣ ಇಂದು ಬೆಳಗಾವಿಯಿಂದ ಮಹಾರಾಷ್ಟ್ರದ ಪುಣೆಗೆ ಹೊರಟ್ಟಿದ್ದೆವು. ಆದ್ರೆ, ಬಸ್ಗಳಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.