ETV Bharat / state

ಬೆಳಗಾವಿಯಲ್ಲಿ ಸಂಭಾವ್ಯ ಪ್ರವಾಹ ಎದುರಿಸಲು ಜಿಲ್ಲಾಡಳಿತ, ಪೊಲೀಸ್​ ಇಲಾಖೆ ಸನ್ನದ್ಧ

ಬೆಳಗಾವಿಯಲ್ಲಿ ಪ್ರವಾಹ ನಿಯಂತ್ರಣ ಕುರಿತ ಸಭೆ ನಡೆದಿದ್ದು, ಜಿಲ್ಲಾಡಳಿತ, ಪೊಲೀಸ್​ ಇಲಾಖೆ, ಜೊತೆಗೆ ಸೇನೆ ಸಂಭಾವ್ಯ ಪ್ರವಾಹ ಎದುರಿಸಲು ಸಜ್ಜಾಗಿದೆ.

Belgavi is ready to face upcoming flood, ಸಂಭಾವ್ಯ ಪ್ರವಾಹ ಎದುರಿಸಲು ಜಿಲ್ಲಾಡಳಿತ, ಪೊಲೀಸ್​ ಇಲಾಖೆ, ಸೈನ್ಯ ಸಿದ್ಧ
author img

By

Published : Aug 4, 2019, 2:19 PM IST

ಬೆಳಗಾವಿ: ಸಂಭಾವ್ಯ ಪ್ರವಾಹ ಎದುರಿಸುವ ನಿಟ್ಟಿನಲ್ಲಿ, ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಹಾಗೂ ಉನ್ನತ ಅಧಿಕಾರಿ ಎಸಿ ಕರಲಿಂಗನವರ್ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪ್ರವಾಸ ಮಂದಿರದಲ್ಲಿ ಪ್ರವಾಹ ನಿಯಂತ್ರಣ ಕುರಿತ ಸಭೆ ನಡೆಸಿದ್ದಾರೆ. ಜೊತೆಗೆ ಮುಂಜಾಗೃತಾ ಕ್ರಮಗಳ ಬಗ್ಗೆ ಪರಾಮರ್ಶೆ ನಡೆದಿರುವ ಬಗ್ಗೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟನೆ ಹೊರಡಿಸಿದ್ದಾರೆ.

ಸಂಭಾವ್ಯ ಪ್ರವಾಹ ಎದುರಿಸಲು ಜಿಲ್ಲಾಡಳಿತ, ಪೊಲೀಸ್​ ಇಲಾಖೆ, ಸೈನ್ಯ ಸಿದ್ಧ

ಸಭೆಯ ನಂತರ ಮಾಧ್ಯಮದರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ಕೃಷ್ಣಾ ನದಿಗೆ 3 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬರಲಿದೆ. ಚಿಕ್ಕೋಡಿ ಜಿಲ್ಲಾ ವ್ಯಾಪ್ತಿಯಲ್ಲಿ 41 ಗ್ರಾಮಗಳು ಪ್ರವಾಹ ಪಿಡಿತವಾಗುವ ಲಕ್ಷಣವಿದ್ದು, ಈಗಾಗಲೇ 10 ಜನ ವಸತಿ ಪ್ರದೇಶಗಳನ್ನು ಸ್ಥಳಾಂತರಿಸಲಾಗಿದೆ. ರವಿವಾರ ಮಧ್ಯಾಹ್ನದ ವೇಳೆಗೆ 2 ಎನ್​ಡಿಆರ್​ಎಫ್ ತಂಡ ಚಿಕ್ಕೋಡಿಗೆ ಆಗಮಿಸಲಿದೆ. 60 ಸಿಬ್ಬಂದಿಗಳ ಎನ್​ಡಿಆರ್​ಎಫ್ ತಂಡ ರಕ್ಷಣಾ ಕಾರ್ಯಕ್ಕೆ 25 ಬೋಟ್​ಗಳನ್ನು ಬಳಿಸಲಿದೆ. ಜೊತೆಗೆ, ತುರ್ತು ಪರಿಸ್ಥಿತಿ ನಿರ್ವಹಣೆಗೆ 24X7 ಹೆಲ್ಪ್​ಲೈನ್​ ತೆರೆಯಲಾಗಿದೆ. ಭಾರತೀಯ ಸೇನೆ, ರಾಜ್ಯ, ಕೇಂದ್ರ ವಿಪತ್ತು ನಿರ್ವಹಣಾ ತಂಡದಿಂದ ಕಾರ್ಯಾಚರಣೆ ನಡೆಸಲಾಗುವುದೆಂದು ಮಾಹಿತಿ ನೀಡಿದರು.

ಪ್ರವಾಸಿ ಮಂದಿರದಲ್ಲಿಯೇ ಉನ್ನತ ಅಧಿಕಾರಿ ಎಸಿ ಕರಲಿಂಗನವರ್ ನೇತೃತ್ವದಲ್ಲಿ ತುರ್ತು ಸಭೆ ನಡೆದಿದೆ. ಈ ಸಭೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆ, ಕಂದಾಯ ಇಲಾಖೆ, PWD ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಮೀಟಿಂಗ್ ಮಾಡಲಾಗಿದೆ. ಇಂದು ಸೇನೆ ಮತ್ತು ಎನ್​ಡಿಆರ್​ಎಫ್​ ನಿಂದ ಕಾರ್ಯಚರಣೆ ಪ್ರಾರಂಭವಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ. ಈಗಾಗಲೆ ಕೃಷ್ಣಾ ನದಿ ತೀರದ ಇಂಗಳಿ, ಮಾಂಜರಿ, ಅಥಣಿ ಮತ್ತು ಯಡೂರನಲ್ಲಿ 45 ಎನ್​ಡಿಆರ್​ಎಫ್ ಸದಸ್ಯರನ್ನು ನೇಮಿಸಲಾಗಿದೆ. ಜೊತೆಗೆ 90 ಮಂದಿ ಸೈನಿಕರು ಹಾಗೂ ಪ್ರವಾಹ ಪರಿಸ್ಥಿತಿ ಎದುರಿಸಲು ತರಬೇತಿ ಪಡೆದ 75 ಅಗ್ನಿಶಾಮಕ ಅಧಿಕಾರಿಗಳು ಮತ್ತು ಪೊಲೀಸರನ್ನು ಆಯಕಟ್ಟಿನ ಜಾಗದಲ್ಲಿ ನೇಮಿಸಲಾಗಿದೆಯೆಂದು ಎಸ್.ಪಿ ಲಕ್ಷಣ ನಿಂಬರಗಿ ತಿಳಿಸಿದ್ದಾರೆ.

Intro:ಚಿಕ್ಕೋಡಿಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ಜೊತೆ ಸಭೆ
Body:
ಚಿಕ್ಕೋಡಿ :

ಈಗಾಗಲೇ ಮಹಾದ ಸಾತಾರ ಜಿಲ್ಲೆಯ ಕೊಯ್ನಾ ಜಲಾಶಯದಿಂದ ಎಷ್ಟು ನೀರು ಬರುತ್ತಿದೆ ಎಂದು ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿರುವ ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ

ಚಿಕ್ಕೋಡಿ ಪ್ರವಾಸ ಮಂದಿರದಲ್ಲಿ ಪ್ರವಾಹ ನಿಯಂತ್ರಣ ಕುರಿತ ಮೀಟಿಂಗ್ ಅಂತ್ಯದ ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು‌ ಕೃಷ್ಣಾ ನದಿಗೆ 3 ಲಕ್ಷ ಕ್ಯೂಸೆಕ್ಸ ನೀರು ಹರಿದು ಬರಲಿದೆ. ಚಿಕ್ಕೋಡಿ ಜಿಲ್ಲಾ ವ್ಯಾಪ್ತಿಯಲ್ಲಿ 41 ಗ್ರಾಮಗಳು ಪ್ರವಾಹ ಪಿಡಿತವಾಗುತ್ತವೆ ಈಗಾಗಲೇ 10 ಜನ ವಸತಿ ಪ್ರದೇಶಗಳನ್ನು ಸ್ಥಳಾಂತರಿಸಲಾಗಿದೆ.

ರವಿವಾರ ಮಧ್ಯಾನದ ವರೆಗೆ 2 ಎನ್ ಡಿ ಆರ್ ಎಫ್ ತಂಡ ಚಿಕ್ಕೋಡಿಗೆ ಆಗಮಿಸಲಿದೆ 60 ಸಿಬ್ಬಂದಿಗಳ ಎನ್ ಡಿ ಆರ್ ಎಫ್ ತಂಡ ರಕ್ಷಣಾ ಕಾರ್ಯದಲ್ಲಿ 25 ಬೋಟ್ ಗಳನ್ನು ಬಳಿಸಲಾಗಿದೆ.

ತುರ್ತು ಪರಿಸ್ಥಿತಿ ನಿರ್ವಹಣೆಗೆ 24X7 ಹೆಲ್ಪಲೈನ ತೆರೆಯಲಾಗಿದೆ. ಭಾರತೀಯ ಸೇನೆ, ರಾಜ್ಯ, ಕೇಂದ್ರ ವಿಪತ್ತು ನಿರ್ವಹಣಾ ತಂಡದಿಂದ ಕಾರ್ಯಾಚರಣೆ ನಡೆಸಲಾಗುವುದು. ಮಹಾರಾಷ್ಟ್ರದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ ಮಳೆ ಆಗಿರುವ ಎಲ್ಲಾ ನೀರು ಸಹ ಕೃಷ್ಣಾ ನದಿಗೆ ಬರು ಸಾದ್ಯತೆ ಇದೆ. ಇನ್ನು ಕೆಲವು ತಗ್ಗು ತೋಟದ ವಸತಿ ಪ್ರದೇಶದಂದ ಹೊರಗೆ ಬಾರದೆ ಜನರು ಸಹಕಾರ ಕೊಡುತ್ತಿಲ್ಲ. ಎಲ್ಲರು ಸುರಕ್ಷಿತ ಸ್ಥಳಗಳಿಗೆ ತೆರಳಲು ವ್ಯವಸ್ಥೆ ಮಾಡಲಾಗಿದೆ ಎಂದು ಚಿಕ್ಕೋಡಿಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಎಸ್. ಬಿ ಬೊಮ್ಮನಹಳ್ಳಿ ಹೇಳಿದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.