ಬೆಳಗಾವಿ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿದರು.
ನೆರೆ ಪ್ರವಾಹಕ್ಕೆ ತುತ್ತಾಗಿ 11 ತಿಂಗಳು ಕಳೆದರೂ ಇದುವರೆಗೂ ಯಾರಿಗೂ ಪರಿಹಾರ ದೊರೆತ್ತಿಲ್ಲ. ಹೀಗಾಗಿ ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇದೇ ಜೂ.18 ರಂದು ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ, ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘದವರು ಎಚ್ಚರಿಕೆ ನೀಡಿದ್ದಾರೆ.
ಬೇಡಿಕೆಗಳು :
ಪ್ರವಾಹದಿಂದ ಜಿಲ್ಲೆಯಲ್ಲಿ ಬಿದ್ದಿರುವ ಮನೆಗಳ ಜಿಪಿಎಸ್ ಜೊತೆಗೆ ಆರ್ಜಿಎಚ್ಸಿಎಲ್ ಸೈಟ್ ಓಪನ್ ಮಾಡಿಸಿ ಸಂತ್ರಸ್ತರಿಗೆ ಉಳಿದ ಮನೆಗಳ ಹಣ ಜಮಾ ಮಾಡಿಸಬೇಕು. ಪ್ರವಾಹ ಸಂತ್ರಸ್ತರಿಗೆ ಬೆಳೆ ಹಾನಿಯಲ್ಲಿ ತಾರತಮ್ಯವಾಗಿದ್ದು, ಅರ್ಹ ರೈತರಿಗೆ ಜಮಾ ಮಾಡಿಸಬೇಕು. ಪ್ರವಾಹ ಸಂತ್ರಸ್ತರಿಗೆ ಶಾಶ್ವತವಾಗಿ ಪುನರ್ವಸತಿ ಕಲ್ಪಿಸಬೇಕು. ಪ್ರವಾಹದಲ್ಲಿ ಕಳೆದುಕೊಂಡು ಜಾನುವಾರುಗಳಿಗೆ ಸಮರ್ಪಕವಾಗಿ ಪರಿಹಾರ ಸಿಗಬೇಕು. ಗೋವಿನ ಜೋಳ ಬೆಳೆಗೆ ಖರೀದಿ ಕೇಂದ್ರ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಬೆಕೆಂದು ಮನವಿ ಸಲ್ಲಿಸಿದರು.