ETV Bharat / state

ಬೆಳಗಾವಿಯಲ್ಲಿಲ್ಲ ಹೈಡ್ರೆಂಟ್ ಘಟಕ: ಅಗ್ನಿ ಅವಘಡ ನಿಯಂತ್ರಣ ದೊಡ್ಡ ಸವಾಲು! - fire accidents latest news

ಅಗ್ನಿ ಅವಘಡ ಸಂಭವಿಸಿದರೆ ಅದರ ನಿಯಂತ್ರಣ ಇಲ್ಲಿನ ಸಿಬ್ಬಂದಿಗೆ ಕಷ್ಟವಾಗುತ್ತಿದೆ. ನಗರದ ಪ್ರಮುಖ ಸ್ಥಳಗಳಲ್ಲಿ ಜಲದಾನಿ ಘಟಕಗಳು ಇಲ್ಲದಿರುವುದೇ ಅದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

belgavi district need Hydrant unit to control fire accidents
ಬೆಳಗಾವಿಯಲ್ಲಿಲ್ಲ ಜಲದಾನಿ ಘಟಕ; ಅಗ್ನಿ ಅವವಘಡ ನಿಯಂತ್ರಣಕ್ಕೆ ಎದುರಾಯಿತು ದೊಡ್ಡ ಸವಾಲು!
author img

By

Published : Apr 6, 2021, 6:36 PM IST

Updated : Apr 7, 2021, 12:16 PM IST

ಬೆಳಗಾವಿ: ಅಗ್ನಿ ಸುರಕ್ಷತೆ ಬಗ್ಗೆ ಸಾಕಷ್ಟು ಜಾಗೃತಿ ಹಮ್ಮಿಕೊಳ್ಳುತ್ತಿದ್ದರೂ ಕುಂದಾನಗರಿ ಬೆಳಗಾವಿಯಲ್ಲಿ ಮಾತ್ರ ಅಗ್ನಿ ದುರಂತಗಳು ಸಂಭವಿಸುತ್ತಲೇ ಇವೆ. ಹೀಗೆ ಸಂಭವಿಸುವ ಅಗ್ನಿ ದುರಂತಗಳ ತ್ವರಿತ ನಿಯಂತ್ರಣದಲ್ಲಿ ಜಲದಾನಿ (ಹೈಡ್ರೆಂಟ್) ಘಟಕಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳ ವ್ಯಾಪ್ತಿಗೆ ನಗರ ಒಳಪಟ್ಟಿದ್ದರೂ ಕೂಡ ಇಲ್ಲಿ ಜಲದಾನಿ ಘಟಕ ಮಾತ್ರ ಇಲ್ಲ. ಈ ಕಾರಣಕ್ಕೆ ದೊಡ್ಡ ಪ್ರಮಾಣದ ಅಗ್ನಿ ದುರಂತಗಳು ಸಂಭವಿಸಿದರೆ ಅವುಗಳ ತ್ವರಿತ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಇದರಿಂದ ಅಪಾರ ಪ್ರಮಾಣದ ಆಸ್ತಿ ಹಾನಿಯಾಗುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.

ಬೆಳಗಾವಿಯಲ್ಲಿಲ್ಲ ಜಲದಾನಿ ಘಟಕ - ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಏನಂತಾರೆ?

ಹೆಚ್ಚುತ್ತಿವೆ ಅಗ್ನಿ ಅವಘಡಗಳು:

ದಿನ ಕಳೆದಂತೆ ನಗರಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ನಗರವೂ ವಿಸ್ತಾರಗೊಳ್ಳುತ್ತಿದೆ. ಅದರ ಜತೆಗೆ ಅಗ್ನಿ ದುರಂತಗಳ ಕರೆಗಳ ಪ್ರಮಾಣವೂ ಹೆಚ್ಚುತ್ತಿದೆ. ಅದರಲ್ಲೂ ಅತಿ ಹೆಚ್ಚು ದುರಂತಗಳು ಸಂಭವಿಸುವುದೇ ಬೇಸಿಗೆ ಸಮಯದಲ್ಲಿ. ಸಣ್ಣ ಪ್ರಮಾಣದ ಅಗ್ನಿ ದುರಂತಗಳನ್ನು ಇಲ್ಲಿನ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ನಿಯಂತ್ರಿಸುತ್ತಾರೆ.

ಜಲದಾನಿ ಘಟಕಗಳೇ ಇಲ್ಲ!

ಆದರೆ ದೊಡ್ಡ ಪ್ರಮಾಣದ ಅಗ್ನಿ ಅವಘಡ ಸಂಭವಿಸಿದರೆ ಅದರ ನಿಯಂತ್ರಣ ಇಲ್ಲಿನ ಸಿಬ್ಬಂದಿಗೆ ಕಷ್ಟವಾಗುತ್ತಿದೆ. ನಗರದ ಪ್ರಮುಖ ಸ್ಥಳಗಳಲ್ಲಿ ಜಲದಾನಿ ಘಟಕಗಳು ಇಲ್ಲದಿರುವುದೇ ಅದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಪಾಲಿಕೆಯ ಬಾವಿಯೇ ಆಸರೆ:

ಜಿಲ್ಲಾ ಕೇಂದ್ರದಲ್ಲಿರುವ ಅಗ್ನಿಶಾಮಕ ಠಾಣೆಯ ಜಲ ವಾಹನಗಳಿಗೆ ಪಾಲಿಕೆ ವ್ಯಾಪ್ತಿಯ ಬಾವಿಯಿಂದಲೇ ನೀರು ತುಂಬಿಸಲಾಗುತ್ತಿದೆ. ಕಳೆದೆರಡು ವರ್ಷಗಳಿಂದ ನಗರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈ ಬಾವಿಯಲ್ಲಿ ನೀರಿನ ಅಭಾವ ಎದುರಾಗಿಲ್ಲ. ಆದರೆ ಸತತ ಬರಗಾಲ ಎದುರಾದರೆ ಈ ಬಾವಿಯಲ್ಲೂ ನೀರಿನ ಅಭಾವ ಎದುರಾಗುವ ಸಾಧ್ಯತೆ ಇದೆ.

ಇನ್ನು ಐನಾಕ್ಸ್ ಹಾಗೂ ನ್ಯೂಕ್ಲಿಯಸ್ ಮಾಲ್‍ಗಳ ಬಳಿ ಹೈಡ್ರೆಂಟ್ ಘಟಕಗಳಿದ್ದು, ಅನಿವಾರ್ಯ ಸಂದರ್ಭಗಳಲ್ಲಿ ಇಲ್ಲಿನ ನೀರನ್ನು ಜಲ ವಾಹನಗಳಿಗೆ ತುಂಬಿಸಲಾಗುತ್ತಿದೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಜಲದಾನಿ ಘಟಕಗಳನ್ನು ತೆರೆದರೆ ಅಗ್ನಿ ದುರಂತಗಳ ನಿಯಂತ್ರಣಕ್ಕೆ ತ್ವರಿತವಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಇಲ್ಲಿನ ಅಧಿಕಾರಿಗಳು.

ಸಮಯ ವ್ಯರ್ಥ:

ಗುಡ್‍ಶೆಡ್ ರಸ್ತೆಯಲ್ಲಿರುವ ಪಾಲಿಕೆಯ ಬಾವಿಯನ್ನೇ ಇಲ್ಲಿನ ಅಗ್ನಿಶಾಮಕ ಠಾಣೆ ಸಿಬ್ಬಂದಿ ಅವಲಂಬಿಸಿದ್ದಾರೆ. ಆದರೆ ದೊಡ್ಡ ಪ್ರಮಾಣದ ಅಗ್ನಿ ದುರಂತಗಳು ಸಂಭವಿಸಿದರೆ ಜಲ ವಾಹನಗಳು ಘಟನಾ ಸ್ಥಳದಿಂದ ನೀರು ತುಂಬಿಸಿಕೊಳ್ಳಲು ಅದೇ ಬಾವಿ ಬಳಿ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಸಮಯವೂ ವ್ಯರ್ಥವಾಗುವ ಜತೆಗೆ ತಕ್ಷಣಕ್ಕೆ ಅಗ್ನಿ ದುರಂತವನ್ನು ನಿಯಂತ್ರಣಕ್ಕೆ ತರುವುದು ಕೂಡ ಇಲ್ಲಿನ ಸಿಬ್ಬಂದಿಗೆ ಸವಾಲಾಗಿದೆ. ಹೀಗಾಗಿ ದೊಡ್ಡ ಪ್ರಮಾಣದ ಅಗ್ನಿ ದುರಂತಗಳು ಸಂಭವಿಸಿದರೆ ನೆರೆಯ ತಾಲೂಕುಗಳಲ್ಲಿರುವ ಅಗ್ನಿಶಾಮಕ ಠಾಣೆಯ ಜಲ ವಾಹನಗಳನ್ನು ಕರೆಯಿಸಿಕೊಳ್ಳುವ ಪರಿಸ್ಥಿತಿ ಇದೆ. ಜಲದಾನಿ ಘಟಕಗಳು ಎಲ್ಲಡೆ ಸ್ಥಾಪನೆಯಾದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಪ್ರಸ್ತಾವನೆ ಸಲ್ಲಿಕೆ, ಸಕಾರಾತ್ಮಕ ಸ್ಪಂದನೆ:

58 ವಾರ್ಡ್ ಹೊಂದಿರುವ ಬೆಳಗಾವಿ ಮಹಾನಗರ ಪಾಲಿಕೆಯ 10 ವಾರ್ಡ್‍ಗಳಲ್ಲಿ ಪ್ರಾಯೋಗಿಕವಾಗಿ ನಿರಂತರ ಕುಡಿಯುವ ನೀರು ಯೋಜನೆ ಜಾರಿಯಲ್ಲಿದೆ. ಇದೀಗ ವಿಶ್ವಬ್ಯಾಂಕ್ ನೆರವಿನೊಂದಿಗೆ ಉಳಿದ ವಾರ್ಡ್‍ಗಳಿಗೆ ನಿರಂತರ ಕುಡಿಯುವ ನೀರು ಯೋಜನೆ ವಿಸ್ತರಿಸಲಾಗುತ್ತಿದೆ. ಈಗಾಗಲೇ ಕಾಮಗಾರಿಯೂ ಆರಂಭವಾಗಿ ಮೂರು ವರ್ಷಗಳಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ. ಜಲ ವಾಹನಗಳಿಗೆ ನೀರು ತುಂಬಲು ಅನುಕೂಲವಾಗುವಂತೆ ಪ್ರಮುಖ ಕಡೆಗಳಲ್ಲಿ ಜಲದಾನಿ ಘಟಕ ನಿರ್ಮಿಸುವಂತೆ ಬೆಳಗಾವಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಿವಕುಮಾರ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಕವಿವಿಯಲ್ಲಿ ವಿದೇಶಿ ಭಾಷಾ ಕಲಿಕೆಗೆ ಇದೆ ಪೂರಕ ವಾತಾವರಣ

ಬೆಳಗಾವಿಯ ಉಪನಗರಗಳಾದ ಅನಗೋಳ, ವಡಗಾಂವ, ಖಾಸಭಾಗ, ಹಿಂದವಾಡಿ, ಶಿವಬಸವ ನಗರ, ಮಹಾಂತೇಶನಗರ, ಆಟೋನಗರ, ಹನುಮಾನನಗರ, ಗಣಪತಿ ಗಲ್ಲಿ, ಸಂಭಾಜೀ ವೃತ್ತ, ಉದ್ಯಮಭಾಗ, ಕೇಂದ್ರ ಬಸ್ ನಿಲ್ದಾಣ, ಕೋಟೆಕೆರೆ ಹಾಗೂ ನೆಹರು ನಗರ ಸೇರಿದಂತೆ ಇತರ ಕಡೆಗಳಲ್ಲಿ ನಿರಂತರ ಕುಡಿಯುವ ನೀರು ಯೋಜನೆ ಜಾರಿ ವೇಳೆ ಪ್ರಮುಖ ಸ್ಥಳಗಳಲ್ಲಿ ಹೈಡ್ರೆಂಟ್ ಘಟಕ ತೆರೆಯುವಂತೆ ಮನವಿ ಮಾಡಲಾಗಿದೆ. ಇದಕ್ಕೆ ವಾಟರ್ ಬೋರ್ಡ್ ಹಾಗೂ ಜಲ ಮಂಡಳಿಯಿಂದಲೂ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಜಲದಾನಿ ಘಟಕ ಆರಂಭವಾದರೆ ಎಂತಹದ್ದೇ ಅಗ್ನಿ ದುರಂತಗಳನ್ನು ನಿಯಂತ್ರಣಕ್ಕೆ ತ್ವರಿತವಾಗಿ ಸ್ಪಂದಿಸಲು ಇಲ್ಲಿನ ಸಿಬ್ಬಂದಿಗೆ ಸಾಧ್ಯವಾಗಲಿದೆ.

Last Updated : Apr 7, 2021, 12:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.