ETV Bharat / state

ಸ್ಟ್ರಾಂಗ್ ರೂಮ್ ಸುತ್ತಲೂ ಬಿಗಿ ಭದ್ರತೆ, ಸಿಸಿಟಿವಿ ಕ್ಯಾಮರಾ ಕಣ್ಗಾವಲು: ಚುನಾವಣಾಧಿಕಾರಿ

ಎಲ್ಲ ಮತಗಟ್ಟೆಗಳಿಂದ ಮಂತ್ರಯಂತ್ರ ಮತ್ತು ಮತಪೆಟ್ಟಿಗೆಗಳನ್ನು ನಗರದ ಆರ್​ಪಿಡಿ ಕಾಲೇಜಿನಲ್ಲಿ ಬಿಗಿ ಪೊಲೀಸ್ ಭದ್ರತಾ ವ್ಯವಸ್ಥೆಯೊಂದಿಗೆ ಇರಿಸಲಾಗಿದೆ. 58 ಸಿಐಎಸ್ಎಫ್​​ ಸಿಬ್ಬಂದಿ ಮತ್ತು 40 ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿದೆ. ಕೇಂದ್ರದ ಸುತ್ತಲೂ ಸಿಸಿಟಿವಿ ಕ್ಯಾಮರಾ ವ್ಯವಸ್ಥೆ ಮಾಡಲಾಗಿದೆ.

belgavi by election :  police alert around strong room
ಸ್ಟ್ರಾಂಗ್ ರೂಮ್ ಸುತ್ತಲೂ ಬಿಗಿ ಭದ್ರತೆ, ಸಿಸಿಟಿವಿ ಕ್ಯಾಮರಾ ಕಣ್ಗಾವಲು: ಚುನಾವಣಾಧಿಕಾರಿ
author img

By

Published : Apr 18, 2021, 7:37 PM IST

ಬೆಳಗಾವಿ: ಇಲ್ಲಿನ ಆರ್​ಪಿಡಿ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್ ರೂಮ್​ಗೆ ಭೇಟಿ ನೀಡಿದ ಚುನಾವಣಾಧಿಕಾರಿ ಡಾ. ಕೆ.ಹರೀಶಕುಮಾರ್, ಮತ ಪೆಟ್ಟಿಗಳ ಸ್ಥಿತಿಗತಿ ಮತ್ತು ಸ್ಟ್ರಾಂಗ್ ರೂಂ ಭದ್ರತಾ ವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.

ಡಿಸಿ, ಚುನಾವಣಾಧಿಕಾರಿ ಡಾ. ಕೆ.ಹರೀಶಕುಮಾರ್

ನಿನ್ನೆ (ಏ. 17ರಂದು) ಉಪಚುನಾವಣೆಯ ಮತದಾನ ನಡೆದಿದ್ದು, ಎಲ್ಲ ಮತಗಟ್ಟೆಗಳಿಂದ ಮಂತ್ರಯಂತ್ರ ಮತ್ತು ಮತಪೆಟ್ಟಿಗೆಗಳನ್ನು ನಗರದ ಆರ್​ಪಿಡಿ ಕಾಲೇಜಿನಲ್ಲಿ ಬಿಗಿ ಪೊಲೀಸ್ ಭದ್ರತಾ ವ್ಯವಸ್ಥೆಯೊಂದಿಗೆ ಇರಿಸಲಾಗಿದೆ. 58 ಸಿಐಎಸ್ಎಫ್​​ ಸಿಬ್ಬಂದಿ ಮತ್ತು 40 ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿದೆ.

ದಿ. ಸುರೇಶ್​ ಅಂಗಡಿ ಅಕಾಲಿಕ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದು, ಮತದಾನ ಕಡಿಮೆ ಪ್ರಮಾಣದಲ್ಲಿ ಆಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ಶೇಕಡಾ 56.02ರಷ್ಟು ಮತದಾನ ಆಗಿದ್ದು, ಇದ್ರಲ್ಲಿ ಗೋಕಾಕ್ ಅತಿ ಹೆಚ್ಚು ಪ್ರಮಾಣದಲ್ಲಿ ಅಂದರೆ 60.47ರಷ್ಟು ಮತದಾನ ಆಗಿದೆ. ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 48.18ರಷ್ಟು ಅಂದರೆ ಅತಿ ಕಡಿಮೆ ಮತದಾನ ಆಗಿದೆ.

ಕಳೆದ ಬಾರಿ 69.72ರಷ್ಟು ಮತದಾನ ಆಗಿ ಬಿಜೆಪಿಯ ಸುರೇಶ್ ಅಂಗಡಿ ಹೆಚ್ಚು ಲೀಡ್​ನಿಂದ ಗೆದ್ದು ಬಂದಿದ್ದರು. ಆದ್ರೆ ಈ ಬಾರಿ ಕೊರೊನಾ ಆತಂಕದ ಹಿನ್ನೆಲೆ ಮತ್ತು ಉಪಚುನಾವಣೆ ಎಂಬ ಕಾರಣಕ್ಕೆ ಮತದಾನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಮತದಾರರು ಬಾರದಿರುವುದು ಯಾರಿಗೆ ಪ್ಲಸ್, ಯಾರಿಗೆ ಮೈನಸ್ ಎಂಬ ಲೆಕ್ಕಾಚಾರ ಕೂಡ ಜಿಲ್ಲೆಯಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: ಮತದಾನದ ಮುಗಿದ್ಮೇಲೆ ರಿಲ್ಯಾಕ್ಸ್​ಗೆ ಮೂಡ್‌ಗೆ ಜಾರಿದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ

ಮಾಧ್ಯಮದರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಆಗಿರುವ ಚುನಾವಣಾಧಿಕಾರಿ ಡಾ. ಕೆ.ಹರೀಶಕುಮಾರ್, ಶಾಂತಿಯುತ ಚುನಾವಣೆಗೆ ಸಹಕರಿಸಿದ ಬೆಳಗಾವಿ ಜನತೆಗೆ, ಅಧಿಕಾರಿಗಳಿಗೆ ಹಾಗೂ ರಾಜಕೀಯ ಪಕ್ಷದ ನಾಯಕರಿಗೆ ಕೃತಜ್ಞತೆ ತಿಳಿಸಿದರು. ಮತ ಎಣಿಕೆಗೆ ಸಂಬಂಧಿಸಿದಂತೆ ‌ಎಲ್ಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಎಲ್ಲ ವಿಧಾನಸಭೆ ಮತ ಕ್ಷೇತ್ರಗಳಿಂದ ತಂದಿರುವ ಎಲ್ಲ ಮತಯಂತ್ರಗಳನ್ನು ಸಿಆರ್​ಪಿಎಫ್ ಅಧೀನಕ್ಕೆ ಕೊಡಲಾಗಿದೆ. ಕೇಂದ್ರದ ಸುತ್ತಲೂ ಸಿಸಿಟಿವಿ ಕ್ಯಾಮರಾ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮತಪೆಟ್ಟಿಗೆಗಳಿಗೂ ಸೀಲ್‍ಗಳಿದ್ದು, ಅಭ್ಯರ್ಥಿಗಳು ಅವರ ಬೆಂಗಲಿಗರು ಯಾವಾಗ ಬೇಕಾದರೂ ಪರಿಶೀಲಿಸಲು ಅವಕಾಶವಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.