ETV Bharat / state

ಪ್ರತಿಭಟನೆ ಹಿನ್ನೆಲೆ: ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿದೆ ಬೆಳಗಾವಿ ಎಪಿಎಂಸಿ

author img

By

Published : Jul 28, 2020, 9:53 AM IST

ಎಪಿಎಂಸಿ ಆಹಾರ ವರ್ತಕರ ಸಂಘದಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಪಿಎಂಸಿ ವಹಿವಾಟುಗಳನ್ನು ಬಂದ್ ಮಾಡಲಾಗಿದೆ. ಪರಿಣಾಮ, ಎಪಿಎಂಸಿ ಮಾರುಕಟ್ಟೆ ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿದೆ.

Belgavi Apmc market band
ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿರುವ ಬೆಳಗಾವಿ ಎಪಿಎಂಸಿ

ಬೆಳಗಾವಿ: ರಾಜ್ಯ ಸರ್ಕಾರ ವಿಧಿಸಿರುವ ಎಪಿಎಂಸಿ ಸೆಸ್​ ಕೈಬಿಡುವಂತೆ ಆಗ್ರಹಿಸಿ ಅನಿರ್ದಿಷ್ಟ ಅವಧಿಯವರೆಗೆ ಆಹಾರ ವರ್ತಕರ ಸಂಘದಿಂದ ಪ್ರತಿಭಟನೆ ನಡೆಸಿದ ಹಿನ್ನೆಲೆ ಬೆಳಗಾವಿ ಎಪಿಎಂಸಿ ವಹಿವಾಟು ಬಂದ್ ಆಗಿದೆ.

ಎಪಿಎಂಸಿ ಆಹಾರ ವರ್ತಕರ ಸಂಘದಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಪಿಎಂಸಿ ವಹಿವಾಟುಗಳನ್ನು ಬಂದ್ ಮಾಡಿದ್ದಾರೆ. ಪರಿಣಾಮ, ಎಪಿಎಂಸಿ ಮಾರುಕಟ್ಟೆ ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿದೆ. ಕೇಂದ್ರ ಸರ್ಕಾರ ಎಪಿಎಂಸಿ ಸೆಸ್​ ತೆಗೆದು ಹಾಕಿದಂತೆ ರಾಜ್ಯದಲ್ಲಿಯೂ ಎಪಿಎಂಸಿ ಕಾಯ್ದೆ ಯಥಾವತ್ತಾಗಿ ಜಾರಿಯಾಗಬೇಕು. ರಾಜ್ಯ ಸರ್ಕಾರದವರು 1ರಷ್ಟು ಎಪಿಎಂಸಿ ಸೆಸ್​ ತೆಗೆದುಕೊಳ್ಳಬಾರದು. ಎಪಿಎಂಸಿ ಆವರಣದೊಳಗೆ ನಡೆಯುವ ವಹಿವಾಟಿಗೆ ಯಾವುದೇ ಸೆಸ್​ ವಿಧಿಸಬಾರದು ಎಂದು ಒತ್ತಾಯಿಸಿ ಮಾರುಕಟ್ಟೆ ಸ್ಥಗಿತಗೊಳಿಸಿ ಅನಿರ್ದಿಷ್ಟ ಅವಧಿವರೆಗೆ ಪ್ರತಿಭಟನೆ ಕೈಗೊಂಡಿದ್ದಾರೆ.

ಇನ್ನು ಈ ಪ್ರತಿಭಟನೆಗೆ ಆಹಾರ ಧಾನ್ಯ ವರ್ತಕರ ಸಂಘ, ಉಳ್ಳಾಗಡ್ಡಿ, ಆಲೂಗೆಡ್ಡೆ ವರ್ತಕರ‌ ಸಂಘದವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.