ETV Bharat / state

ಅಹೋರಾತ್ರಿ ಧರಣಿಗೆ ಮುಂದಾದ ಬೆಳಗಾವಿ ಸಾರಿಗೆ ಸಿಬ್ಬಂದಿ

ಸಾರಿಗೆ ಒಕ್ಕೂಟದ ಮುಖಂಡರೊಂದಿಗೆ ಇಂದು ಸಂಜೆ ಬೆಂಗಳೂರಿನಲ್ಲಿ ‌ನಡೆದ ಸಂಧಾನ ಸಭೆ ಮತ್ತೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲು ಬೆಳಗಾವಿ ನಗರ ಸಾರಿಗೆ ಸಿಬ್ಬಂದಿ ನಿರ್ಧರಿಸಿದ್ದಾರೆ.

author img

By

Published : Dec 13, 2020, 10:26 PM IST

Belgaum Transport Staff To continue the strike
ಅಹೋರಾತ್ರಿ ಧರಣಿಗೆ ಮುಂದಾದ ಬೆಳಗಾವಿ ಸಾರಿಗೆ ಸಿಬ್ಬಂದಿ

ಬೆಳಗಾವಿ: ಸರ್ಕಾರದೊಂದಿಗೆ ಸಾರಿಗೆ ಇಲಾಖೆ‌ ಮುಖಂಡರ ಸಂಧಾನ ವಿಫಲವಾದ ಪರಿಣಾಮ, ಇಂದೂ ಸಹ ಅಹೋರಾತ್ರಿ ಪ್ರತಿಭಟನೆ ನಡೆಸಲು ನಗರ ಸಾರಿಗೆ ಸಿಬ್ಬಂದಿ ತೀರ್ಮಾನಿಸಿದ್ದಾರೆ. ಭಜನೆ ಮಾಡುವ ಮೂಲಕ ರಾತ್ರಿಯಿಡೀ ಧರಣಿ ಮುಂದುವರೆಸುತ್ತಿದ್ದಾರೆ.

ಓದಿ: ನೌಕರರ ಸಂಘದ ಮುಖಂಡರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ: ಸಿಎಂ

ಇದಕ್ಕೂ ಮುನ್ನ ಸಂಧಾನ ಸಕ್ಸಸ್ ಆಗಿದೆ ಎಂಬ ಮಾಹಿತಿ ಮೇರೆಗೆ ಸಾರಿಗೆ ಸಿಬ್ಬಂದಿ ಮೊಬೈಲ್ ಟಾರ್ಚ್ ಹಚ್ಚಿ‌ ಹರ್ಷ ವ್ಯಕ್ತಪಡಿಸಿದ್ದರು. ಜೊತೆಗೆ ಬಸ್ ಸಂಚಾರ ಆರಂಭಿಸಲು ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಬಸ್​​ಗಳು ಸಂಚಾರ ಆರಂಭ ಮಾಡುತ್ತಿವೆ ಎನ್ನುವಷ್ಟರಲ್ಲಿ ಸಾರಿಗೆ ಒಕ್ಕೂಟದ ಮುಖಂಡರು ಹಾಗೂ ಸರ್ಕಾರದ ನಡುವೆ ಹೈಡ್ರಾಮ ನಡೆದಿದೆ.

ಪ್ರತಿಭಟನಾಕಾರರು ಗಣೇಶ, ದುರ್ಗಾದೇವಿ ಸ್ತೋತ್ರ ಸೇರಿದಂತೆ ವಿವಿಧ ದೇವರುಗಳ ಸ್ತೋತ್ರಗಳನ್ನು ಪಠಿಸುವ ಮುಖೇನ ಹೋರಾಟ ಮುಂದುವರೆಸಿದ್ದಾರೆ. ಸಾರಿಗೆ ಸಿಬ್ಬಂದಿಗೆ ರೈತಪರ, ಕನ್ನಡಪರ ಸಂಘಟನೆಗಳ ಸಾಥ್ ನೀಡಿವೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವವರೆಗೂ ಧರಣಿ ಮುಂದುವರಿಯಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.