ಬೆಳಗಾವಿ: ಟಿವಿ, ಬೈಕ್, ಫ್ರಿಡ್ಜ್ ಇದ್ದರೆ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುವುದು ಎಂಬ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಬೆಳಗಾವಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಸಚಿವರ ಹೇಳಿಕೆ ಕುರಿತಂತೆ ಅವರ ತವರು ಜಿಲ್ಲೆ ಬೆಳಗಾವಿಯಲ್ಲಿ ಜನರು ತೀವ್ರ ಆಕ್ರೊಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಈಟಿವಿ ಭಾರತದೊಂದಿಗೆ ರುಕ್ಮಿಣಿ ನಗರದ ಮಹಿಳೆಯರು ಮಾತನಾಡಿದ್ದು, ಸಚಿವರು ತಮ್ಮ ಹೇಳಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದು, ಕಾರ್ಡ್ ರದ್ದು ಮಾಡಿದರೆ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಓದಿ: ಸಾಮಾನ್ಯ ಜನರಿಗೆ ಬಿಗ್ ಶಾಕ್.. ಟಿವಿ, ಫ್ರಿಡ್ಜ್, ಬೈಕ್ ಇದ್ರೆ ಬಿಪಿಎಲ್ ಕಾರ್ಡ್ ರದ್ದು!
ಸರ್ಕಾರ ಆನ್ಲೈನ್ ಪಾಠ ಶುರು ಮಾಡಿದಕ್ಕೆ ಸಾಲಸೋಲ ಮಾಡಿ ಟಿವಿ ತೆಗೆದುಕೊಂಡಿದ್ದೇವೆ. ನಮ್ಮ ಮನೆಯ ಗಂಡು ಮಕ್ಕಳು ಕೆಲಸಕ್ಕೆ ಹೊರಗೆ ಹೋಗ್ತಾರೆ. ಆಟೋ, ಬಸ್ ಅಲ್ಲಿ ಹೋದ್ರೆ ಸಮಯ ಪಾಲನೆ ಸಾದ್ಯವಾಗಲ್ಲ. ಹೀಗಾಗಿ ಬೈಕ್ ತೆಗೆದುಕೊಂಡಿದ್ದೇವೆ. ಟಿವಿ, ಬೈಕ್ ಇದ್ದವರ ಬಿಪಿಎಲ್ ಕಾರ್ಡ್ ಯಾವುದೇ ಕಾರಣಕ್ಕೂ ರದ್ದು ಮಾಡಬೇಡಿ ಎಂದು ಮಹಿಳೆಯರು ಸರ್ಕಾರವನ್ನು ಒತ್ತಾಯಿಸಿದರು.