ETV Bharat / state

ಭೀಕರ ಅಪಘಾತ: ನಾಗಾಲ್ಯಾಂಡ್ ಗಡಿಯಲ್ಲಿ ಬೆಳಗಾವಿ ಯೋಧ ವಿಧಿವಶ

ಕಳೆದ 18 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ ಅಪ್ಪಣ್ಣ ಗೌಡಣ್ಣವರ, ಮದ್ರಾಸ್ ಎಂಜಿನಿಯರಿಂಗ್‌ ಗ್ರೂಪ್​​ನಲ್ಲಿ ನೇಮಕಗೊಂಡು ಸದ್ಯ ನಾಗಾಲ್ಯಾಂಡ್ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದ್ರೆ ಕರ್ತವ್ಯಕ್ಕೆ ತೆರಳುವಾಗ ಅರಣ್ಯದಲ್ಲಿ ವಾಹನ ಅಪಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.

Belgaum-based warrior died at Nagaland border
ಯೋಧ ಮಂಜುನಾಥ ಅಪ್ಪಣ್ಣ ಗೌಡಣ್ಣವರ ನಿಧನ
author img

By

Published : Jul 11, 2021, 11:30 AM IST

ಬೆಳಗಾವಿ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಿಲ್ಲೆಯ ಯೋಧರೊಬ್ಬರು ನಾಗಾಲ್ಯಾಂಡ್ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿಯೇ ಅಪಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ. ಗೋಕಾಕ್​ ತಾಲೂಕು ಕೊಣ್ಣೂರ ಗ್ರಾಮದ ಮಂಜುನಾಥ ಅಪ್ಪಣ್ಣ ಗೌಡಣ್ಣವರ (38) ಎಂಬುವರು ನಾಗಾಲ್ಯಾಂಡ್​ ಗಡಿಯಲ್ಲಿ ಗಸ್ತು ತಿರುಗುವ ವೇಳೆ ಅವರ ವಾಹನ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.

Belgaum-based warrior died at Nagaland border
ಯೋಧ ಮಂಜುನಾಥ ಅಪ್ಪಣ್ಣ ಗೌಡಣ್ಣವರ ನಿಧನ

ಕಳೆದ 18 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ, ಮದ್ರಾಸ್ ಎಂಜಿನಿಯರಿಂಗ್‌ ಗ್ರೂಪ್​​ನಲ್ಲಿ ನೇಮಕಗೊಂಡು ಸದ್ಯ ನಾಗಾಲ್ಯಾಂಡ್ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಭಾರತೀಯ ಸೇನೆಯಲ್ಲಿ ಚಾಲಕನಾಗಿದ್ದು, ತಮ್ಮ ಕರ್ತವ್ಯಕ್ಕೆ ತೆರಳುವಾಗ ಅರಣ್ಯದಲ್ಲಿ ವಾಹನ ಅಪಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ.

ಯೋಧನ ಪಾರ್ಥಿವ ಶರೀರ ನಾಳೆ (ಜುಲೈ 12) ಸಂಜೆ 6 ಗಂಟೆಯ ಸುಮಾರಿಗೆ ಗೋವಾ ಮಾರ್ಗವಾಗಿ ಸ್ವಗ್ರಾಮಕ್ಕೆ ಬರಲಿದ್ದು, ಬೆಳಗಾವಿಯಲ್ಲಿ ಯೋಧನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಮದ್ಯದ ಅಮಲು: ಧಾರವಾಡದಲ್ಲಿ ಹೆಂಡತಿಯ ಮೂಗನ್ನೇ ಕಚ್ಚಿದ ಭೂಪ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.