ETV Bharat / state

ವಿಧಾನಸಭೆ: ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣದ ಗದ್ದಲ - etv bharat karnataka

Belagavi winter session-BJP protest: ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣ ಸಂಬಂಧ ಗೃಹ ಸಚಿವರು ಉತ್ತರ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.

Etv Bharatprotest-by-bjp-mlas-for-home-minister-reply-about-attack-on-bjp-worker
ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆ ಪ್ರಕರಣ: ಗೃಹ ಸಚಿವರ ಉತ್ತರಕ್ಕಾಗಿ ಬಿಜೆಪಿಯಿಂದ ಪ್ರತಿಭಟನೆ
author img

By ETV Bharat Karnataka Team

Published : Dec 6, 2023, 5:14 PM IST

Updated : Dec 6, 2023, 6:00 PM IST

ಸಿಎಂ ಸಿದ್ದರಾಮಯ್ಯ ಹೇಳಿಕೆ

ಬೆಳಗಾವಿ: ವಿಧಾನಸಭೆಯಲ್ಲಿ ಇಂದು ಬೆಳಗಾವಿಯ ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಮೇಲಿನ ಹಲ್ಲೆ ಪ್ರಕರಣ ಸದ್ದು ಮಾಡಿತು.‌ ಈ ಕುರಿತು ಗೃಹ ಸಚಿವರು ಉತ್ತರ ನೀಡಬೇಕೆಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದು, ಸದನದ ಬಾವಿಗಿಳಿದು ಧರಣಿ ನಡೆಸಿದ್ದಾರೆ. ಶೂನ್ಯ ವೇಳೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಷಯ ಪ್ರಸ್ತಾಪಿಸಿದರು.

ಮನೆಯಿಂದ ಹೊರಗೆ ಕರೆತಂದು ಚಾಕುವಿನಿಂದ ಹೊಟ್ಟೆ, ಕೈ ಹಾಗು ಬೆನ್ನಿಗೆ ಇರಿದಿದ್ದಾರೆ. ಸಿಸಿಟಿವಿಯಲ್ಲಿ ಘಟನೆ ದಾಖಲಾಗಿದೆ. ಅಧಿವೇಶನದ ಸಂದರ್ಭದಲ್ಲಿ ಘಟನೆ ನಡೆದಿದ್ದು ಅಚ್ಚರಿ ತಂದಿದೆ. ಪೃಥ್ವಿ ಸಿಂಗ್ ಅವರಿಂದ ದಾಖಲೆ ಪಡೆಯಲು ‌ನನ್ನ ಸಹಚರರು ಹೋಗಿದ್ದು ನಿಜ. ಆದರೆ ಹಲ್ಲೆಗೆ ನನಗೂ ಸಂಬಂಧ ಇಲ್ಲ. ಫೋನ್ ಮೂಲಕ ಪ್ರಥ್ವಿ ಸಿಂಗ್​ಗೆ ಬೆದರಿಕೆ ಹಾಕಿದ್ದಾರೆ. ನಮ್ಮ ಒತ್ತಾಯದ ಮೇರೆಗೆ ಎಫ್​ಐಆರ್ ದಾಖಲಾಗಿದೆ. ಆದರೆ ಪ್ರಮುಖ ಸೆಕ್ಷನ್​ಗಳನ್ನು ಹಾಕಿಲ್ಲ.‌ ಹಾಗಾಗಿ, ಗೃಹ ಸಚಿವರು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸ್ಪೀಕರ್, ಗೃಹ ಸಚಿವರು ಬಂದ ಬಳಿಕ ಉತ್ತರ ಕೊಡಿಸುವ ಭರವಸೆ ನೀಡಿದರು. ಇದಕ್ಕೆ ಬಗ್ಗದ ಬಿಜೆಪಿ ಶಾಸಕರು ಉತ್ತರ ನೀಡುವಂತೆ ಒತ್ತಾಯಿಸಿದರು. ಈ ವೇಳೆ ತಾವೇ ಎದ್ದು ನಿಂತ ಸಿಎಂ ಸಿದ್ದರಾಮಯ್ಯ, ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ್ದೀರಿ. ನಾವು ಈ ವಿಷಯಕ್ಕೆ ಉತ್ತರ ಕೊಡಲ್ಲ ಅಂತ ಹೇಳಿಲ್ಲ. ಅವರು ಬಂದ ಮೇಲೆ ಕೊಡ್ತೇವೆ ಅಂದಿದ್ದೇವೆ. ಶೂನ್ಯವೇಳೆಯಲ್ಲಿ ಪ್ರಸ್ತಾಪವಾದರೆ ಸಮಯ ಇರುತ್ತೆ. ಎರಡು ದಿನದೊಳಗೆ ಉತ್ತರ ಕೊಡಬಹುದು ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದೆ.‌ ನಿನ್ನೆಯಿಂದ ಚರ್ಚೆ ಶುರುವಾಗಿದೆ.‌ ಬರದ ಮೇಲೆ ಎಲ್ಲರೂ ಚರ್ಚೆಯಲ್ಲಿ ಭಾಗವಹಿಸಬೇಕು. ಮೊನ್ನೆಯ ಘಟನೆ ಗಂಭೀರವಾದ ವಿಚಾರ. ಗೃಹ ಸಚಿವರು ಬಂದ ಮೇಲೆ ಉತ್ತರ ಕೊಡೋಣ. ಇವರು ಧರಣಿ ಮಾಡ್ತೇವೆ ಅಂದರೆ ಸರಿಯಲ್ಲ. ನಾವು ಸರ್ಕಾರದ ಪರ ಉತ್ತರ ಕೊಡ್ತೇವೆ. ಉತ್ತರ ಕರ್ನಾಟಕದ ಸಮಸ್ಯೆ ಚರ್ಚೆಯಾಗಲಿ. ಇವರು ಅದು ಬಿಟ್ಟು ಧರಣಿ ಮಾಡ್ತಿದ್ದಾರೆ ಇದು ಸರಿಯಲ್ಲ. ನಿಯಮಾವಳಿಗಳನ್ನು ರಚನೆ ಮಾಡಿದವರು ಯಾರು?. ನೋಟಿಸ್ ಕೊಟ್ಟ ಮೇಲೆ ಅವಕಾಶ ಕೊಟ್ಟಿದ್ದೇವೆ. ಸಮರ್ಥವಾದ ಉತ್ತರವನ್ನೇ ಕೊಡ್ತೇವೆ. ನಾನು ಇಲ್ಲಿ ಕುಳಿತಿರುವುದು ಯಾಕೆ?. ವಿಪಕ್ಷ ನಾಯಕರು ಬರ ಚರ್ಚೆ ಮಾಡ್ತಾರೆಂದು. ಆದರೆ ನೀವು ಧರಣಿ ಮಾಡುವುದು ಸರಿಯಲ್ಲ. ನೀವು ಉ.ಕರ್ನಾಟಕ ಅಭಿವೃದ್ಧಿ ವಿರೋಧಿಗಳು ಎಂದು ಸಿಎಂ ವಾಗ್ದಾಳಿ ನಡೆಸಿದರು.

ಇದೇ ವೇಳೆ ಸ್ಪೀಕರ್ ನೀವು ಇದೇ ರೀತಿ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತೆ. ನಿಮ್ಮ ರಾಜಕೀಯ ಅಜೆಂಡಾ ಹೊರಗಿಡಿ. ಇಲ್ಲಿ ತೋರಿಸೋಕೆ ಹೋಗಬೇಡಿ. ಗೃಹ ಸಚಿವರು ಉತ್ತರ ಕೊಡುತ್ತಾರೆ. ಈಗ ಬರದ ಬಗ್ಗೆ ಚರ್ಚೆಗೆ ಅವಕಾಶ ಕೊಡಿ ಎಂದು ಒತ್ತಾಯಿಸಿದರು. ಆದರೆ ಬಿಜೆಪಿ ಸದಸ್ಯರು ಪಟ್ಟು ಬಿಡದೆ ಸದನ‌ ಬಾವಿಗಿಳಿದು ಪ್ರತಿಭಟನೆ ಮುಂದುವರಿಸಿದರು. ಬಳಿಕ ಸ್ಪೀಕರ್ ಕಲಾಪವನ್ನು ಕೆಲಕಾಲ ಮುಂದೂಡಿದರು.

ಇದನ್ನೂ ಓದಿ: ಮುಸ್ಲಿಂ ಸಮುದಾಯಕ್ಕೆ ಸಿಎಂ ಅನುದಾನ ಘೋಷಣೆ ವಿಚಾರ: ವಿಧಾನಸಭೆಯಲ್ಲಿ ಗದ್ದಲ, ಬಿಜೆಪಿ ಸಭಾತ್ಯಾಗ

Last Updated : Dec 6, 2023, 6:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.