ಬೆಳಗಾವಿ : ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಭೂ ದಾಖಲೆಗಳ ನೋಂದಣಾಧಿಕಾರಿಗಳ (ಸಬ್ ರಿಜಿಸ್ಟ್ರಾರ್) ಕಚೇರಿಯ ಓರ್ವ ಕಂಪ್ಯೂಟರ್ ಆಪರೇಟರ್ಗೆ ಕೊರೊನಾ ಸೋಂಕು ಧೃಡವಾದ ಹಿನ್ನೆಲೆ ಸಬ್ ರಿಜಿಸ್ಟ್ರಾರ್ ಆಫೀಸ್ಗೆ ಸ್ಯಾನಿಟೈಸ್ ಮಾಡಿ 2ನೇ ಬಾರಿ ಸೀಲ್ಡೌನ್ ಮಾಡಲಾಗಿದೆ.
ಪಾಸಿಟಿವ್ ಆಗಿರೋ ಸಿಬ್ಬಂದಿ ಜೊತೆಗೆ ಪ್ರಾರ್ಥಮಿಕ ಸಂಪರ್ಕಕ್ಕೆ ಬಂದವರಲ್ಲೂ ಆತಂಕ ಮೂಡಿದೆ. ಈಗಾಗಲೇ ಮುನ್ನಚ್ಚೆರಿಕಾ ಕ್ರಮವಾಗಿ ಕಚೇರಿಯನ್ನು ಸಂಪೂರ್ಣ ಸ್ಯಾನಿಟೈಜೇಷನ್ ಮಾಡಲಾಗಿದೆ.
ಸಾರ್ವಜನಿಕರು ಬರದಂತೆ ಸೀಲ್ಡೌನ್ ಮಾಡಲಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯ ಕೆಲಸಗಳಿಗೆಂದು ತೆರಳುವವರಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ಆದರೆ, ಸೀಲ್ಡೌನ್ ವಿಚಾರ ಗೊತ್ತಿಲ್ಲದ ಕೆಲವರು ಕಚೇರಿಗೆ ಬಂದು ವಾಪಸ್ ತೆರಳುತ್ತಿದ್ದಾರೆ.