ಬೆಳಗಾವಿ: ಐಪಿಎಸ್ ಅಧಿಕಾರಿ, ಬೆಳಗಾವಿ ಎಸ್ಪಿ ಡಾ ಸಂಜೀವ್ ಪಾಟೀಲ್ ಅವರ ಇನ್ಸ್ಟಾಗ್ರಾಂ ಖಾತೆಯನ್ನು ನಕಲಿಯಾಗಿ ಸೃಷ್ಟಿಸಿರುವ ಸೈಬರ್ ಖದೀಮರು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರು ಎಚ್ಚರದಿಂದ ಇರುವಂತೆ ಬೆಳಗಾವಿ ಎಸ್ಪಿ ಮನವಿ ಮಾಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಡಾ ಸಂಜೀವ ಪಾಟೀಲ್ ಅವರು ಈ ಹಿಂದೆ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಆಗಿದ್ದರು. ಅದೇ ಹೆಸರಿನ ಖಾತೆಯನ್ನು ನಕಲಿಯಾಗಿ ಸೃಷ್ಟಿರುವ ಖದೀಮರು ವಂಚನೆಗೆ ಯತ್ನಿಸಿದ್ದಾರೆ. ಎಸ್ಪಿ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಜನರಿಂದ ಹಣಕ್ಕೆ ಬೇಡಿಕೆ ಇಡುತ್ತಿದ್ದು, ಇನ್ಸ್ಟಾಗ್ರಾಂ ಖಾತೆಯ ಫಾಲೋವರ್ಗಳಿಗೆ ಮೊದಲಿಗೆ ನಿಮ್ಮದ್ದು ಗೂಗಲ್ ಪೇ ಇದೆಯಾ ಅಂತ ಸಂದೇಶ ರವಾನಿಸುತ್ತಾರೆ.
ಅವರ ಮೆಸೇಜ್ಗೆ ಯಾರು ರಿಪ್ಲೈ ಮಾಡುತ್ತಾರೋ ಅವರಿಗೆ ಗೂಗಲ್ ಪೇ ಇದ್ದರೇ 7500 ಹಣ ಹಾಕುವಂತೆ ಮೆಸೇಜ್ ಮಾಡುತ್ತಿದ್ದಾರೆ. ನಕಲಿ ಖಾತೆ ಸೃಷ್ಟಿಸಿದ ಹಿನ್ನೆಲೆ ಕಾನೂನು ಕ್ರಮಕ್ಕೆ ಬೆಳಗಾವಿ ಎಸ್ಪಿ ಡಾ ಸಂಜೀವ್ ಪಾಟೀಲ್ ಮುಂದಾಗಿದ್ದಾರೆ. ಸಾರ್ವಜನಿಕರು ಮತ್ತು ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ ಹೊಂದಿರುವವರಿಗೆ ಎಚ್ಚರದಿಂದ ಇರುವಂತೆ ತಿಳಿಸಿದ್ದಾರೆ.
ಇದನ್ನೂ ಓದಿ: ಯುವತಿ ಹೆಸರಿನಲ್ಲಿ ನಕಲಿ ಖಾತೆ ಓಪನ್: ಯುವಕರಿಂದ 19 ಲಕ್ಷ ರೂ. ಹಣ ಎಗರಿಸಿದ ಆರೋಪಿ