ETV Bharat / state

ಕೃಷ್ಣಾ ಒಳ ಹರಿವಿನ ಪ್ರಮಾಣ ಇಳಿಮುಖ: ನದಿ ತೀರದ ಜನರಿಗೆ ಸಂತಸ - ಕೃಷ್ಣಾ ನದಿ ಒಳ ಹರಿವು

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 69,000 ಕ್ಯೂಸೆಕ್, ದೂಧ್​ಗಂಗಾ ನದಿಯಿಂದ 7,040 ಕ್ಯೂಸೆಕ್, ಒಟ್ಟು 76,000 ಕ್ಯೂಸೆಕ್​ಗೂ ಅಧಿಕ ನೀರು ಕೃಷ್ಣಾಗೆ ಹರಿದು ಬರುತ್ತಿದೆ ಎಂದು ಚಿಕ್ಕೋಡಿ ತಹಶೀಲ್ದಾರ್​ ಮಾಹಿತಿ ನೀಡಿದ್ದಾರೆ.

krishna river inflow decreased
ಕೃಷ್ಣಾ ನದಿ ಒಳ ಹರಿವಿನ ಪ್ರಮಾಣ ಇಳಿಮುಖ
author img

By

Published : Oct 18, 2020, 4:11 PM IST

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಕೃಷ್ಣಾ, ವೇದಗಂಗಾ ಮತ್ತು ದೂಧ್ ಗಂಗಾ ನದಿಗಳ ಒಳ ಹರಿವಿನಲ್ಲಿ ಇಳಿಕೆಯಾಗಿದೆ. ಸದ್ಯ ಕೃಷ್ಣಾ ನದಿ ಒಳ ಹರಿವಿನ ಪ್ರಮಾಣ 76,000 ಕ್ಯೂಸೆಕ್​ಗಿಂತ ಹೆಚ್ಚಿದೆ ಎಂದು ಚಿಕ್ಕೋಡಿ ತಹಶೀಲ್ದಾರ್ ಶುಭಾಷ್​ ಸಂಪಗಾಂವಿ ಮಾಹಿತಿ ನೀಡಿದ್ದಾರೆ.

ಕೃಷ್ಣಾ ನದಿ ಒಳ ಹರಿವಿನ ಪ್ರಮಾಣ ಇಳಿಮುಖ

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 69,000 ಕ್ಯೂಸೆಕ್, ದೂಧ್​ಗಂಗಾ ನದಿಯಿಂದ 7,040 ಕ್ಯೂಸೆಕ್ ಸೇರಿ ಒಟ್ಟು 76,000 ಕ್ಯೂಸೆಕ್​ಗೂ ಅಧಿಕ ನೀರು ಕೃಷ್ಣಾಗೆ ಹರಿದು ಬರುತ್ತಿದೆ. ಮಹಾರಾಷ್ಟ್ರ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಮಳೆ ಕಡಿಮೆಯಾಗಿರುವ ಬಗ್ಗೆ ವರದಿಯಾಗಿದೆ‌.

ಸದ್ಯ ಕೊಯ್ನಾ ಜಲಾಶಯ 98.78 ರಷ್ಟು, ವಾರಣಾ ಜಲಾಶಯ, ರಾಧಾನಗರಿ ಜಲಾಶಯ, ಕಣೇರ ಜಲಾಶಯ, ಧೂಮ್​ ಜಲಾಶಯ, ಪಾಟಗಾಂವ್​, ದೂಧ್​ಗಂಗಾ ಜಲಾಶಯ ಸಂಪೂರ್ನ ಭರ್ತಿಯಾಗಿದೆ. ಹಿಪ್ಪರಗಿ ಬ್ಯಾರೇಜ್‌ನಿಂದ 1,04,000 ಹಾಗೂ ಆಲಮಟ್ಟಿ ಜಲಾಶಯದಿಂದ 1,30,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.