ETV Bharat / state

ಪ್ಯಾರಾ ಕ್ಲೈಂಬಿಂಗ್ ವಿಶ್ವ ಚಾಂಪಿಯನ್‌ಶಿಪ್: ಬೆಳಗಾವಿ ರೈತನ ಮಗಳಿಗೆ ಕಂಚಿನ ಪದಕ - paraclimbing world championship

ಪ್ಯಾರಾ ಕ್ಲೈಂಬಿಂಗ್ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಬೆಳಗಾವಿ ಜಿಲ್ಲೆಯ ರೈತನ ಮಗಳು ಕಂಚಿನ ಪದಕ ಗೆದ್ದು, ದೇಶಕ್ಕೆ ಕೀರ್ತಿ ತಂದಿದ್ದಾರೆ.

belagavi-girl-won-bronze-medal-in-paraclimbing-world-championship
ಪ್ಯಾರಾ ಕ್ಲೈಂಬಿಂಗ್ ವಿಶ್ವ ಚಾಂಪಿಯನ್‌ಶಿಪ್: ಬೆಳಗಾವಿ ರೈತನ ಮಗಳಿಗೆ ಕಂಚಿನ ಪದಕ
author img

By

Published : Sep 18, 2021, 1:44 PM IST

Updated : Sep 18, 2021, 2:21 PM IST

ಬೆಳಗಾವಿ: ರಷ್ಯಾದ ಮಾಸ್ಕೋದಲ್ಲಿ ನಡೆಯುತ್ತಿರುವ ಪ್ಯಾರಾಕ್ಲೈಂಬಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ ರೈತನ ಮಗಳು ಅಪೂರ್ವ ಸಾಧನೆ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ಪ್ಯಾರಾಕ್ಲೈಂಬಿಂಗ್ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಕಿತ್ತೂರು ತಾಲೂಕಿನ ತೋಲಗಿ ಗ್ರಾಮದ ಸುನಿತಾ ದುಂಡಪ್ಪನವರ್‌ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಸಮರ್ಥನಂ ಅಂಗವಿಕಲ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಸುನಿತಾ ದುಂಡಪ್ಪನವರ್ ತೋಲಗಿ ಗ್ರಾಮದ ರೈತ ನೀಲಕಂಠ ಬಸಪ್ಪ ದುಂಡಪ್ಪನವರ್ ಹಾಗೂ ಸಾವಿತ್ರಿ ದಂಪತಿಯ ಕಿರಿಯ ಪುತ್ರಿಯಾಗಿದ್ದಾರೆ.

belagavi-girl-won-bronze-medal-in-paraclimbing-world-championship
ಬೆಳಗಾವಿ ರೈತನ ಮಗಳಿಗೆ ಪ್ಯಾರಾ ಕ್ಲೈಂಬಿಂಗ್ ಕಂಚಿನ ಪದಕ

ನೀಲಕಂಠ ದುಂಡಪ್ಪನವರ್‌ಗೆ ನಾಲ್ವರು ಹೆಣ್ಣುಮಕ್ಕಳಿದ್ದು, ಇವರಲ್ಲಿ ಸುನಿತಾ ದುಂಡಪ್ಪನವರ್ ಕೊನೆಯ ಮಗಳು. ಇದೇ ಮೊದಲ ಬಾರಿಗೆ ಅರೆ ದೃಷ್ಟಿದೋಷವುಳ್ಳವರ ವಿಭಾಗ (ಬಿ3 ಅಥವಾ ಅರೆ ದೃಷ್ಟಿದೋಷ) ದ ಪ್ಯಾರಾ ವಾಲ್ ಕ್ಲೈಂಬಿಂಗ್​ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದ ಅವರಿಗೆ ಕಂಚಿನ ಪದಕ ಲಭಿಸಿದೆ.

ಸುನಿತಾ ದುಂಡಪ್ಪನವರ್ ಸಾಧನೆಗೆ ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಹಾಂತೇಶ ಕಿವಡಸಣ್ಣವರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ಯಾರಾಕ್ಲೈಂಬಿಂಗ್ ವಿಶ್ವ ಚಾಂಪಿಯನ್​ಶಿಪ್‌ನಲ್ಲಿ ಸಮರ್ಥನಂ ಸಂಸ್ಥೆಯ ಮೂವರು ಆಟಗಾರರು ಭಾರತವನ್ನು ಪ್ರತಿನಿಧಿಸಿದ್ದರು.

ಕಂಚಿನ ಪದಕ ವಿಜೇತೆ ಸುನಿತಾ ದುಂಡಪ್ಪನವರ್‌ ಪ್ರತಿಕ್ರಿಯೆ

ಸಮರ್ಥನಂ ಸಂಸ್ಥೆಯ ಕ್ರೀಡಾ ಸಂಯೋಜಕಿ ಶಿಖಾ ಜೊತೆ ಮೂವರು ಕ್ರೀಡಾಪಟುಗಳು ಮಾಸ್ಕೋಗೆ ತೆರಳಿದ್ದರು. ಮೂವರ ಪೈಕಿ ಬೆಳಗಾವಿಯ ಸುನಿತಾ ದುಂಡಪ್ಪನವರ್‌ಗೆ ಕಂಚಿನ ಪದಕ ಸಿಕ್ಕಿದೆ.

ಇದನ್ನೂ ಓದಿ: ಹಣ-ಆಸ್ತಿ ಎಲ್ಲವೂ ಇತ್ತು.. ಮಾನಸಿಕ ನೆಮ್ಮದಿ ಮರೆಯಾಗಿತ್ತು: ಮಕ್ಕಳ ದಾಂಪತ್ಯದ ಬಿರುಕಿಗೆ ಇಡೀ ಕುಟುಂಬ ಬಲಿ

Last Updated : Sep 18, 2021, 2:21 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.