ETV Bharat / state

ಬೆಳಗಾವಿ: 20 ವರ್ಷದಿಂದ ಜಮೀನಿನಲ್ಲಿ ಉಳುಮೆ ಮಾಡಲಾಗದೇ ರೈತರು ಕಂಗಾಲು

ಜಮೀನಿನಲ್ಲಿ ಸಂಗ್ರಹವಾದ ಮಳೆ ನೀರು ಸರಿಯಾಗಿ ಹರಿದು ಹೋಗದೇ ನೂರಕ್ಕೂ ಹೆಚ್ಚು ರೈತರು ಕಳೆದ ಇಪ್ಪತ್ತು ವರ್ಷಗಳಿಂದ ಉಳುಮೆ ಇಲ್ಲದೇ ಸಂಕಷ್ಟದಲ್ಲಿದ್ದಾರೆ.

Farmers are troubled by rain water problem
ಮಳೆನೀರಿನ ಸಮಸ್ಯೆಯಿಂದ ರೈತರು ಕಂಗಾಲು
author img

By

Published : Dec 16, 2022, 5:56 PM IST

ಉಳುಮೆ ಇಲ್ಲದೇ ರೈತ ಕಂಗಾಲು

ಚಿಕ್ಕೋಡಿ(ಬೆಳಗಾವಿ): ಜಮೀನಿನಲ್ಲಿ ಸಂಗ್ರಹವಾದ ಮಳೆ ನೀರು ಸರಿಯಾಗಿ ಸರಬರಾಜು ಆಗದೇ ನೂರಕ್ಕೂ ಹೆಚ್ಚು ರೈತರು ಇಪ್ಪತ್ತು ವರ್ಷಗಳಿಂದ ಉಳುಮೆ ಮಾಡಲಾಗದೇ ತೊಂದರೆಗೆ ಸಿಲುಕಿದ್ದಾರೆ. ಇದೀಗ ರೈತರು ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ಜಿಲ್ಲೆಯ ರಾಯಭಾಗ ತಾಲೂಕಿನ ಬಾವನಸೌದತ್ತಿ ಗ್ರಾಮದ ಸರ್ವೇ ನಂಬರ್ 120 ರಿಂದ 196 ವರೆಗೆ 250ಕ್ಕೂ ಹೆಚ್ಚು ಎಕರೆ ಪ್ರದೇಶ ಫಲವತ್ತಾದ ಭೂಮಿಯಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಸರಾಗವಾಗಿ ನೀರು ಹರಿಯದೇ ಕೆರೆಯಂತೆ ಪರಿವರ್ತನೆ ಆಗಿದೆ. ಇದರಿಂದ ಯಾವುದೇ ಕೃಷಿ ಚಟುವಟಿಕೆಗಳು ಸಾಧ್ಯವಾಗುತ್ತಿಲ್ಲ. ರಾಯಭಾಗ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬಾವನಸೌದತ್ತಿ-ದಿಗ್ಗೇವಾಡಿ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುತ್ತಿದ್ದು ಈ ಸಮಸ್ಯೆಗೆ ಕಾರಣವಾಗುತ್ತಿದೆ.

ಪಕ್ಕದಲ್ಲಿ ಕೃಷ್ಣಾ ನದಿ ಹರಿಯುತ್ತಿದ್ದರೂ ನಮಗೆ ಯಾವುದೇ ಬೆಳೆ ಬೆಳೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ತಿಂಗಳುಗಳ ಕಾಲ ಜಮೀನಿನಲ್ಲಿ ನೀರು ನಿಲ್ಲುವುದರಿಂದ ಕಷ್ಟವಾಗುತ್ತಿದೆ. ಆದಷ್ಟು ಬೇಗ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಸವಳು ಜವಳು ಯೋಜನೆಯನ್ನು ತ್ವರಿತಗತಿಯಲ್ಲಿ ನೀಡಲಿ ಎಂದು ರೈತ ಅನೀಲ್ ಹಂಜಿ ಆಗ್ರಹಿಸಿದರು.

2005 ರಿಂದ ಇಲ್ಲಿನ ರೈತರಿಗೆ ಸಮಸ್ಯೆ ಆಗುತ್ತಿದೆ. ಅಧಿಕಾರಿಗಳು ಸರ್ವೇ ಮಾಡುವಾಗ ಕಬ್ಬು ವರ್ಷದ ಬೆಳೆ. ಅದಕ್ಕೆ ಏನೂ ಆಗಲ್ಲ ಅಂತ ಹೇಳಿ ಹೋಗುತ್ತಾರೆ. ಆದರೆ ಕಟಾವು ಸಂದರ್ಭದಲ್ಲೂ ಕೂಡ ಇಲ್ಲಿ ತೇವಾಂಶ ಕಡಿಮೆಯಾಗದೇ ಕಟಾವು ಹಾಗೂ ಸಾಗುವಳಿಗೆ ಹೆಚ್ಚು ಖರ್ಚು ತಗಲುತ್ತದೆ. ನಂತರ ಹಾಳಾದ ಬೆಳೆಗಳಿಗೆ ಎರಡರಿಂದ ಮೂರು ಸಾವಿರ ರೂಪಾಯಿ ಪರಿಹಾರ ಕೊಟ್ಟು, ಮುಂದೆ ನೀರು ಹೋಗುವಂತೆ ಮಾಡಿಕೊಡುವುದಾಗಿ ಭರವಸೆ ನೀಡುತ್ತಾರೆ. ಆದಷ್ಟು ಬೇಗ ಸರ್ಕಾರ ಈ ಸಮಸ್ಯೆಗೆ ಮುಕ್ತಿ ನೀಡಲಿ ಎಂದು ಜನಪ್ರತಿನಿಧಿಗಳನ್ನು ರೈತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಮಾಂಡೌಸ್​​ ಮಳೆಗೆ ಸಾವಿರಾರು ಎಕರೆಯಲ್ಲಿದ್ದ ರಾಗಿಗೆ ಹಾನಿ: ಆತಂಕದಲ್ಲಿ ರೈತರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.