ETV Bharat / state

146 ಜನರಿಗೆ ಕೋವಿಡ್‌ ಸೋಂಕು: ಖಾನಾಪೂರ ತಾಲೂಕಿನ ಅಬನಾಳಿ ಗ್ರಾಮ‌ ಸೀಲ್​ಡೌನ್

author img

By

Published : Apr 21, 2021, 12:04 PM IST

ಖಾನಾಪೂರ ತಾಲೂಕು ವ್ಯಾಪ್ತಿಗೆ ಒಳಪಟ್ಟಿರುವ ಕಾಡಂಚಿನ ಅಬನಾಳಿ ಗ್ರಾಮವೀಗ ಕೊರೊನಾ ಹಾಟ್‌ಸ್ಪಾಟ್ ಆಗಿ ಬದಲಾಗಿದೆ. ಈ ಗ್ರಾಮದಲ್ಲಿ 146 ಜನರಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ.

Belgavi District Abanali  village  seal down
ಅಬನಾಳಿ ಗ್ರಾಮ‌ ಸೀಲ್​ಡೌನ್

ಬೆಳಗಾವಿ: ಖಾನಾಪೂರ ತಾಲೂಕಿನ ಅಬನಾಳಿ ಗ್ರಾಮದಲ್ಲಿ 146 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಸಂಪೂರ್ಣ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಗ್ರಾಮದ ಹೊರಗೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ.

ಮಹಾರಾಷ್ಟ್ರದಿಂದ ಆಗಮಿಸಿದ್ದ ಕಾರ್ಮಿಕರು:

ಮಹಾರಾಷ್ಟ್ರದಿಂದ ಹೋಳಿ ಹುಣ್ಣಿಮೆ ನಿಮಿತ್ತ ಕೆಲವು ವಲಸೆ ಕಾರ್ಮಿಕರು ಅಬನಾಳಿ ಗ್ರಾಮಕ್ಕೆ ಬಂದಿದ್ದರು‌. ಹೀಗೆ ಬಂದವರು ಏ.6ರಂದು ಅಬನಾಳಿ ಗ್ರಾಮದಲ್ಲಿ ಸಾತೇರಿ ದೇವಿ ಜಾತ್ರೆಯಲ್ಲಿ ಭಾಗವಹಿಸಿದ್ದಾರೆ‌. ಜಾತ್ರೆಯ ನಿಮಿತ್ತ ಊರಲ್ಲಿ ನಾಟಕ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಇದಾದ ಮೂರು ದಿನಗಳಲ್ಲಿ ಅಂದರೆ ಏ. 9ರಂದು ಅಬನಾಳಿ ಗ್ರಾಮದ ಕೆಲವರಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದಿದೆ. ಆಗ ಸಮೀಪದ ಆರೋಗ್ಯ ಕೇಂದ್ರದಲ್ಲಿ ರ್ಯಾಂಡಮ್‌ ಟೆಸ್ಟ್‌ ಮಾಡಿಸಿಕೊಂಡಾಗ ಸೋಂಕು ದೃಢಪಟ್ಟಿದೆ.

ಟಿಹೆಚ್‌ಒ ಡಾ.ಸಂಜೀವ್ ನಾಂದ್ರೆ ಹೇಳಿಕೆ

ಏ.10, 11ರಂದು ಅಬನಾಳಿ ಗ್ರಾಮದ 350 ಜನರ ಪೈಕಿ 249 ಜನರ ಗಂಟಲು ದ್ರವ ಸಂಗ್ರಹಿಸಿದ್ದು, ಏ.20ರಂದು ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯಲ್ಲಿ 146 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಅಧಿಕಾರಿಗಳಿಂದ ನಿಗಾ

ಗ್ರಾಮಕ್ಕೆ ಖಾನಾಪುರ ತಹಶೀಲ್ದಾರ್ ರೇಷ್ಮಾ ತಾಳಿಕೋಟಿ, ಟಿಹೆಚ್‌ಒ ಡಾ.ಸಂಜೀವ್ ನಾಂದ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮದ ಹೊರವಲಯದಲ್ಲಿ ಮರದ ಕೊಂಬೆಗಳನ್ನು ಹಾಕಿ ಸೀಲ್‌ಡೌನ್ ಮಾಡಿದ್ದಾರೆ.

ಅನಗತ್ಯವಾಗಿ ಗ್ರಾಮದ ಹೊರಗೆ ಹೋಗದಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ. ಸೋಂಕಿತರನ್ನು ಊರ ಹೊರಗೆ ಕರೆಯಿಸಿ ಮುಂಜಾಗ್ರತೆ ಕ್ರಮದ ಬಗ್ಗೆ ಖಾನಾಪೂರ ತಹಶೀಲ್ದಾರ್ ತಿಳಿಸಿದ್ದಾರೆ.

ಡಿಹೆಚ್‌ಒ ಮಾಹಿತಿ

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಟಿಹೆಚ್‌ಒ ಡಾ.ಸಂಜೀವ್ ನಾಂದ್ರೆ, ಅಬನಾಳಿ ಗ್ರಾಮದಲ್ಲಿ ಮೊದಲು ಏಳೆಂಟು ಐಎಲ್ಐ ಕೇಸ್ ಪತ್ತೆಯಾಗಿದ್ದವು. ಬಳಿಕ ಗ್ರಾಮದ ಎಲ್ಲರ ಗಂಟಲು ದ್ರವ ಪಡೆಯಲು ಆರೋಗ್ಯಾಧಿಕಾರಿಗೆ ಸೂಚಿಸಿದ್ದೆ.

ಏ.10 ಹಾಗೂ 11 ಎರಡು ದಿನ 249 ಜನರ ಥ್ರೋಟ್ ಸ್ವ್ಯಾಬ್ ಪಡೆಯಲಾಗಿದೆ.‌ ಐಎಲ್ಐ ಕೇಸ್ ಪತ್ತೆಯಾದಾಗ ಔಷಧಿ ಕೊಟ್ಟು ಕ್ವಾರಂಟೈನ್‌ನಲ್ಲಿರಲು ಹೇಳಲಾಗಿತ್ತು. ಯಾರೂ ಸಹ ಊರಿನಿಂದ ಹೊರಗೆ ಹೋಗಿಲ್ಲ ಎಂದು ಹೇಳುತ್ತಿದ್ದಾರೆ. ಅಬನಾಳಿ ಗ್ರಾಮದಿಂದ ಐವರು ವಿದ್ಯಾರ್ಥಿಗಳು ಪಕ್ಕದ ಶಿರೋಳಿ ಗ್ರಾಮದ ಶಾಲೆಗೆ ಹೋಗುತ್ತಿದ್ದರು. ಆ ಶಾಲೆಯ ವಿದ್ಯಾರ್ಥಿ, ಸಿಬ್ಬಂದಿ ಸೇರಿ 50 ವಿದ್ಯಾರ್ಥಿಗಳ ಥ್ರೋಟ್ ಸ್ವ್ಯಾಬ್ ಪಡೆದಿದ್ದೇವೆ. ಅಬನಾಳಿ ಗ್ರಾಮದ ಪಕ್ಕದ ಗ್ರಾಮದಲ್ಲೂ ರ್ಯಾಂಡಮ್ ಟೆಸ್ಟ್ ಮಾಡಿದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಹೊಸಪೇಟೆ: ಒಂದೇ ಗ್ರಾಮದ 57 ಜನರಿಗೆ ಕೊರೊನಾ ಸೋಂಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.