ETV Bharat / state

ಬೆಳಗಾವಿಯಲ್ಲಿ ಮಳೆ ಅವಾಂತರ: ಸೇತುವೆಯಲ್ಲಿ ಬಿರುಕು, ಮತ್ತೋರ್ವ ಸಾವು - ಕೃಷ್ಣ ನದಿ ಸೇತುವೆ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಳ್ಯಾಳ-ದರೂರ ಸೇತುವೆಯಲ್ಲಿ ಬಿರುಕು ಬಿಟ್ಟಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಇನ್ನೊಂದೆಡೆ ಜಿಲ್ಲೆಯಲ್ಲಿ ಮಳೆಯ ಅವಾಂತರಕ್ಕೆ ಮತ್ತೋರ್ವ ಬಲಿಯಾಗಿದ್ದಾನೆ.

ಬೆಳಗಾವಿಯಲ್ಲಿ ಮಳೆ
author img

By

Published : Aug 6, 2019, 11:32 AM IST

Updated : Aug 6, 2019, 12:01 PM IST

ಚಿಕ್ಕೋಡಿ: ಮಹಾ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಹಲವೆಡೆ ಅವಾಂತರ ಸೃಷ್ಟಿಯಾಗಿದ್ದು, ಈ ನಡುವೆ ಉಕ್ಕಿ ಹರಿಯುತ್ತಿರುವ ಕೃಷ್ಣ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಳ್ಯಾಳ-ದರೂರ ಸೇತುವೆ ಬಿರುಕು ಬಿಟ್ಟಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಳ್ಯಾಳ-ದರೂರ ಸೇತುವೆ ಮೇಲೆ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ಈಗ ಈ ಸೇತುವೆ ಮಧ್ಯದಲ್ಲಿ ಬಿರುಕು ಬಿಟ್ಟು, ಗುಂಡಿಗಳು ಬಿದ್ದಿದ್ದು ಪ್ರಯಾಣಿಕರಲ್ಲಿ ಆತಂಕ ಉಂಟು ಮಾಡಿದೆ.

ಹಳ್ಯಾಳ-ದರೂರ ಸೇತುವೆಯಲ್ಲಿ ಬಿರುಕು

ಗುತ್ತಿಗೆದಾರರ ನಿರ್ಲಕ್ಷ್ಯವೇ ಸೇತುವೆಯ ಇಂದಿನ ಸ್ಥಿತಿಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೇತುವೆ ಮೇಲಿನ ಏರ್ ​​ಹೋಲ್ ಮುಚ್ಚಿಸಿರುವುದೇ ಬಿರುಕು ಬಿಡಲು ಕಾರಣವಾಗಿದೆ. ಗುತ್ತಿಗೆದಾರರು ಉದ್ಧಟತನ ಮೆರೆದು ಹೋಲ್​​ ಮುಚ್ಚಿಸಿದ್ದರ ಪರಿಣಾಮ ನದಿಗೆ ಮಹಾಪೂರ ಬಂದು ಹವಾ ಪಾಸ್​​ ಆಗದೆ ಸೇತುವೆ ಬಿರುಕು ಬಿಟ್ಟಿದೆ ಈ ಕುರಿತು ತಾಲೂಕು ದಂಡಾಧಿಕಾರಿಗಳಿಗೆ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಳೆಗೆ ಮತ್ತೊಂದು ಬಲಿ:

ಬೆಳಗಾವಿ ಜಿಲ್ಲೆಯಾದ್ಯಂತ ಮಹಾಮಳೆಗೆ ಮತ್ತೋರ್ವ ಬಲಿಯಾಗಿದ್ದಾನೆ. ನಿರಂತರ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ವ್ಯಕ್ತಿ ಸಾವನ್ನಪ್ಪಿದ್ದಾನೆ. ಬೈಲಹೊಂಗಲ ತಾಲೂಕಿನ ಹೊಸಕೋಟೆ ಗ್ರಾಮದ ನಾಗಪ್ಪ ಮಾದರ (40) ಮೃತ ವ್ಯಕ್ತಿ. ನೇಸರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಒಟ್ಟಾರೆ ಮಳೆಗೆ ಜಿಲ್ಲೆಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

Intro:ಅಪಾಯದ ಹಂತದಲ್ಲಿರುವ ಹಳ್ಯಾಳ - ದರೂರ ಸೇತುವೆBody:

ಚಿಕ್ಕೋಡಿ :

ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಬಿರೂಕು ಬಿಟ್ಟು ಜನರಿಗೆ ಬಯದ ವಾತಾವರಣ ಸ್ವಷ್ಟಿಯಾಗಿರುವ ಘಟನೆ ಹಳ್ಯಾಳ - ದರೂರ ಸೇತುವೆ ಮೇಲೆ ನಿರ್ಮಾಣವಾಗಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಳ್ಯಾಳ - ದರೂತ ಸೇತುವೆ ಮೇಲೆ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ಈಗ ಈ ಸೇತುವೆ ಮಧ್ಯದಲ್ಲಿ ಗುಂಡಿಗಳು ಬಿದಿದ್ದು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದೆ.

ಇದಕ್ಕೆ ಮುಖ್ಯವಾಗಿ ಕಾರಣ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಪ್ರಾರಂಭವಾದ ಜತ್ತ ಜಾಂಬೊಟಿ ಗುತ್ತಗೆದಾರ, ದರೂರ ಸೇತುವೆ ಮೇಲೆ ಇರುವಂತಹ ಏರ್ ಹೊಲ್ ಗಳನ್ನು ಮುಚ್ಚಿದ್ದಾರೆ. ಇಲ್ಲಿನ ಸ್ಥಳೀಯರು ಎಷ್ಟು ಮನವಿ ಮಾಡಿದರು ಕೇಳದ ಗುತ್ತಿಗೆದಾರ ತನ್ನ ಉದ್ದಟತನ ಮೇರೆದು ಹೊಲುಗಳ ಮುಚ್ಚಿದ್ದರ ಪರಿಣಾಮವಾಗಿ ಇವತ್ತಿನ ದಿನ ಕೃಷ್ಣಾ ನದಿಗೆ ಮಹಾಪೂರ ಬಂದು ಸೇತುವೆ ಮೇಲೆ ಇರುವ ಹೊಲ್ ಗಳ ಮುಖಾಂತರ ಹವಾ ಪಾಸ ಆಗದೆ ಸಂಪೂರ್ಣವಾಗಿ ಬಿರುಕು ಬಿಟ್ಟಿದೆ ಎಂದು ಸಂಜೀವ ಕಾಂಬಳೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಾಲ್ಲೂಕಾ ದಂಡಾಧಿಕಾರಿಗಳಿಗೆ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಕೂಡಾ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲಾ ಎಂದು ಹೇಳಿದರು

ಬೈಟ್ 1 : ಸಂಜೀವ ಕಾಂಬಳೆ (ಡಿ ಎಸ್ ಎಸ್ ಜಿಲ್ಲಾ ಸಂಚಾಲಕ)

Conclusion:ಸಂಜಯ ಕೌಲಗಿ
ಚಿಕ್ಕೋಡಿ
Last Updated : Aug 6, 2019, 12:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.