ETV Bharat / state

ಎಮ್ಮೆಗಳಿಗಾಗಿಯೇ ಒಂದು ವಿಶೇಷ ಬ್ಯೂಟಿ ಪಾರ್ಲರ್ ; ಸಂಪೂರ್ಣ ಉಚಿತ ಸೇವೆ

ಈ ಪಾರ್ಲರ್​​​ನಲ್ಲಿ ಉಚಿತ ಸೇವೆ ಒದಗಿಸುತ್ತಿರುವ ವಿಜಯ ಸೂರ್ಯವಂಶಿ ಅವರು, ರೈತರಿಂದ ಯಾವುದೇ ಹಣ ಪಡೆಯುತ್ತಿಲ್ಲ. ಬದಲಾಗಿ ಎಮ್ಮೆಗಳು ಹಾಕುವ ಸಗಣಿ, ಅವುಗಳ ಸ್ನಾನಕ್ಕೆ ಬಳಸುವ ನೀರನ್ನು ಹೊಲಗದ್ದೆಗಳಿಗೆ ಬಳಕೆ ಮಾಡ್ತಿದ್ದಾರೆ..

beauty parlor for Buffalo's
ಎಮ್ಮೆಗಳಿಗಾಗಿಯೇ ಒಂದು ವಿಶೇಷ ಬ್ಯೂಟಿ ಪಾರ್ಲರ್; ಸಂಪೂರ್ಣ ಉಚಿತ ಸೇವೆ
author img

By

Published : Dec 29, 2020, 11:10 AM IST

Updated : Dec 29, 2020, 11:32 AM IST

ಚಿಕ್ಕೋಡಿ : ಮಹಿಳೆಯರು, ಯುವತಿಯವರು ಹಾಗೂ ಸಿನಿಮಾ ನಟ-ನಟಿಯರು ತಮ್ಮ ಸೌಂದರ್ಯ ವರ್ಧನೆಗೋಸ್ಕರ ಬ್ಯೂಟಿ ಪಾರ್ಲರ್​ಗಳ ಮೊರೆ ಹೋಗೋದು ಸಾಮಾನ್ಯ. ಆದ್ರೆ, ಇಲ್ಲಿ ಎಮ್ಮೆಗಳಿಗಾಗಿಗೇ ಒಂದು ವಿಶೇಷ ಬ್ಯೂಟಿ ಪಾರ್ಲರ್ ಆರಂಭವಾಗಿದೆ.

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಎಮ್ಮೆಗಳಿಗಾಗಿಯೇ ಒಂದು ಪಾರ್ಲರ್ ಶುರುವಾಗಿದೆ‌.‌ ಎಮ್ಮೆಗಳಿಗೆ ಹೇರ್ ಕಟ್, ಸ್ನಾನ, ಎಣ್ಣೆ ಮಸಾಜ್ ಮಾಡಲಾಗುತ್ತದೆ. ದಿನವೊಂದಕ್ಕೆ 25 ರಿಂದ 30 ಎಮ್ಮೆಗಳಿಗೆ ಈ ಪಾರ್ಲರ್ ಸೇವೆ ಸಿಗುತ್ತಿದೆ.

ಎಮ್ಮೆಗಳಿಗಾಗಿಯೇ ಒಂದು ವಿಶೇಷ ಬ್ಯೂಟಿ ಪಾರ್ಲರ್

ನದಿಗಳಲ್ಲಿ ಎಮ್ಮೆಗಳನ್ನು ತೊಳೆಯುವುದರಿಂದ ನದಿ ನೀರು ಕಲುಷಿತವಾಗುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಹೀಗಾಗಿ, ನಾನು ಸರ್ಕಾರದಿಂದ ಅನುದಾನ ಪಡೆದು ಈ ಪಾರ್ಲರ್ ಓಪನ್ ಮಾಡಿದ್ದೇನೆ. ಸದ್ಯ ನಮ್ಮಲ್ಲಿ ದಿನಕ್ಕೆ 30 ಎಮ್ಮೆಗಳು ಬರ್ತಿವೆ.

ನಾವು ರೈತರಿಂದ ದುಡ್ಡು ಪಡೆಯುವುದಿಲ್ಲ, ಬದಲಾಗಿ ಎಮ್ಮೆಗಳು ಇಲ್ಲಿಗೆ ಬಂದಾಗ ಅವುಗಳು ಹಾಕುವ ಸಗಣಿ ಹಾಗೂ ಮೈತೊಳೆದ ನೀರನ್ನು ನಮ್ಮ ಗದ್ದೆಗೆ ಬಳಸಿಕೊಳ್ಳುತ್ತೇವೆಂದು ಎಮ್ಮೆಗಳ ಪಾರ್ಲರ್ ಮಾಲೀಕ ವಿಜಯ ಸೂರ್ಯವಂಶಿ ತಿಳಿಸಿದರು.

ಎಮ್ಮೆಗಳ ಪಾರ್ಲರ್ ತೆರೆಯಲು ಕಾರಣ : ಕೊಲ್ಹಾಪುರ ಜಿಲ್ಲೆಯಲ್ಲಿ ಹರಿಯುವ ಮುಖ್ಯ ನದಿ ಅಂದರೆ ಅದು ಪಂಚಗಂಗಾ.. ಈಗಾಗಲೇ ಕೊಲ್ಹಾಪುರದ ಅನೇಕ ಕಾರ್ಖಾನೆಗಳ ತ್ಯಾಜ್ಯ ನದಿಗೆ ಮಿಶ್ರಿತವಾಗಿ ಅದು ಹಾಳಾಗುತ್ತಿದೆ. ಇದರ ಜೊತೆಗೆ ಕೊಲ್ಹಾಪುರ ಹೈನೋದ್ಯಮಿಗಳೂ ಸಹ ಎಮ್ಮೆಗಳನ್ನು ಹೊಳೆಯಲ್ಲಿ ತೊಳೆಯೋದ್ರಿಂದ ನೀರು ಮತ್ತಷ್ಟು ಕಲುಷಿತಗೊಳ್ಳಬಾರದು ಅನ್ನೋ ಕಾರಣಕ್ಕೆ ವಿಜಯ್ ಸೂರ್ಯವಂಶಿ ಈ ನಿರ್ಧಾರ ಮಾಡಿದ್ದಾರೆ.

ಇದಕ್ಕಾಗಿ ಮಾಹಾರಾಷ್ಟ್ರ ಸರ್ಕಾರದಿಂದ 15 ಲಕ್ಷ ರೂ. ಸಹಾಯ ಪಡೆದಿದ್ದಾರೆ. ಇದು ಕರ್ನಾಟಕದ ಗಡಿ ಭಾಗದ ರೈತರು ಹಾಗೂ ಸಮಾಜಸೇವಕರ ಗಮನ ಸೆಳೆದಿದೆ. ಹೀಗಾಗಿ, ಇಂತಹ ವ್ಯವಸ್ಥೆ ನಮ್ಮ ಭಾಗಕ್ಕೂ ಬರಲಿ ಅಂತಿದ್ದಾರೆ ಕನ್ನಡಿಗರು.

ಈ ಸುದ್ದಿಯನ್ನೂ ಓದಿ: ಎಂಜಿಆರ್ ಗ್ರೂಪ್ ಸಂಸ್ಥೆಯಿಂದ 800 ಮಂದಿಗೆ ₹1 ಕೋಟಿ‌ ಧನ ಸಹಾಯ

ಈ ಪಾರ್ಲರ್​​​ನಲ್ಲಿ ಉಚಿತ ಸೇವೆ ಒದಗಿಸುತ್ತಿರುವ ವಿಜಯ ಸೂರ್ಯವಂಶಿ ಅವರು, ರೈತರಿಂದ ಯಾವುದೇ ಹಣ ಪಡೆಯುತ್ತಿಲ್ಲ. ಬದಲಾಗಿ ಎಮ್ಮೆಗಳು ಹಾಕುವ ಸಗಣಿ, ಅವುಗಳ ಸ್ನಾನಕ್ಕೆ ಬಳಸುವ ನೀರನ್ನು ಹೊಲಗದ್ದೆಗಳಿಗೆ ಬಳಕೆ ಮಾಡಲಾಗ್ತಿದೆ.

Last Updated : Dec 29, 2020, 11:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.