ETV Bharat / state

2ಎ ಮೀಸಲಾತಿ ಅನುಷ್ಠಾನಗೊಳ್ಳದಿದ್ದರೆ ಬೆಂಗಳೂರಲ್ಲಿ ಮತ್ತೆ ಹೋರಾಟ : ಜಯಮೃತ್ಯುಂಜಯ ಶ್ರೀ ಎಚ್ಚರಿಕೆ - ಪಂಚಮಸಾಲಿ ಪ್ರತಿಭಟನೆ

ಒಂದು ವೇಳೆ ನಮ್ಮ ಸಮುದಾಯವನ್ನ ಕಡೆಗಣಿಸಿದರೆ ಮೀಸಲಾತಿ ಹಾಗೂ ಮುಖ್ಯಮಂತ್ರಿ ಸ್ಥಾನ ಎರಡನ್ನು ಕಲ್ಪಿಸದೆ ಸಮಾಜಕ್ಕೆ ಬಿಜೆಪಿ ವರಿಷ್ಠರು ಅಗೌರವ ಮಾಡಿದ್ದಾರೆಂದು ಭಾವಿಸಿ ಮುಂದಿನ ಚುನಾವಣೆಯಲ್ಲಿ ಉತ್ತರಿಸಬೇಕಾಗುತ್ತದೆ ಎಂದಿದ್ದಾರೆ..

ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ
ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ
author img

By

Published : Aug 1, 2021, 4:58 PM IST

ಅಥಣಿ (ಬೆಳಗಾವಿ) : ಕೇಂದ್ರ ಬಿಜೆಪಿ ವರಿಷ್ಠರು ಪಂಚಮಸಾಲಿ ಜನಾಂಗಕ್ಕೆ ಮುಖ್ಯಮಂತ್ರಿ ಸ್ಥಾನದ ಅವಕಾಶ ಕಲ್ಪಿಸಿಕೊಡುತ್ತಾರೆಂದು ನಾಡಿನ ಸಮಾಜ ಬಾಂಧವರು ನಂಬಿದ್ದರು. ಆದರೆ, ಕಾಣದ ಕೈಗಳ ಒತ್ತಡದಿಂದ ಕೈತಪ್ಪಿ ಸಮಾಜಕ್ಕೆ ಅಗೌರವವಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿ ನಮ್ಮ ಸಮಾಜದವರು, ‌ಅವರ ಮೇಲೆ ಸಂಪೂರ್ಣ ವಿಶ್ವಾಸ ಇದೆ. ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹಕ್ಕೊತ್ತಾಯವನ್ನು ಸರ್ಕಾರ ಕೊಟ್ಟ ಕಾಲಾವಕಾಶದೊಳಗೆ ಅನುಷ್ಠಾನಗೊಳ್ಳದಿದ್ದರೆ ಅಕ್ಟೋಬರ್1 ಮಾಜಿ ಸಿಎಂ ದಿ. ಜೆ ಹೆಚ್ ಪಟೇಲ್ ಜಯಂತಿ . ಅಂದೇ ಮತ್ತೆ ಧರಣಿ ಸತ್ಯಾಗ್ರಹ ಮುಂದುವರಿಸಲಾಗುವುದು. ಸರ್ಕಾರ ಇದಕ್ಕೆ ಅವಕಾಶ ನೀಡಬಾರದು ಎಂದರು.

2ಎ ಮೀಸಲಾತಿ ಅನುಷ್ಠಾನಗೊಳ್ಳದಿದ್ದರೆ ಬೆಂಗಳೂರಲ್ಲಿ ಮತ್ತೆ ಹೋರಾಟ

ಪ್ರತಿಜ್ಞಾ ಪಂಚಾಯತ್ ಎಂಬ ಧ್ಯೇಯ ವಾಕ್ಯದೊಂದಿಗೆ ಅಭಿಯಾನವನ್ನು, ಪಂಚಮಸಾಲಿ ಗೌಡ ಹಾಗೂ ದೀಕ್ಷಾ ಪಂಚಮಸಾಲಿ ಸಮಾಜದವರನ್ನು ಒಗ್ಗೂಡಿಸಿಕೊಂಡು ರಾಜ್ಯದ ಪ್ರತಿ ತಾಲೂಕಿನಲ್ಲೂ ಜಾಗೃತಿ ಕೈಗೊಳ್ಳಲು ನಿರ್ಧರಿಸಲಾಗಿದೆ.

ಕೂಡಲೇ ಆಗಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಲಿ, ಜನಸಂಖ್ಯೆಗೆ ಅನುಗುಣವಾಗಿ ಸಮಾಜಕ್ಕೆ ಉನ್ನತ ಅವಕಾಶವನ್ನು ಬಿಜೆಪಿ ವರಿಷ್ಠರು ಕಲ್ಪಿಸಿ ಕೊಡುತ್ತಾರೆಂದು ನಾವು ನಂಬಿದ್ದೇವೆ ಎಂದಿದ್ದಾರೆ.

ಒಂದು ವೇಳೆ ನಮ್ಮ ಸಮುದಾಯವನ್ನ ಕಡೆಗಣಿಸಿದರೆ ಮೀಸಲಾತಿ ಹಾಗೂ ಮುಖ್ಯಮಂತ್ರಿ ಸ್ಥಾನ ಎರಡನ್ನು ಕಲ್ಪಿಸದೆ ಸಮಾಜಕ್ಕೆ ಬಿಜೆಪಿ ವರಿಷ್ಠರು ಅಗೌರವ ಮಾಡಿದ್ದಾರೆಂದು ಭಾವಿಸಿ ಮುಂದಿನ ಚುನಾವಣೆಯಲ್ಲಿ ಉತ್ತರಿಸಬೇಕಾಗುತ್ತದೆ ಎಂದಿದ್ದಾರೆ.

ಓದಿ: ಕಳ್ಳದಾರಿ ಮೂಲಕ ಬೆಳಗಾವಿ ನಗರಕ್ಕೆ ಆಗಮಿಸುತ್ತಿರುವ ಮಹಾರಾಷ್ಟ್ರದ ಜನರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.