ಅಥಣಿ(ಬೆಳಗಾವಿ): ರಮೇಶ್ ಜಾರಕಿಹೊಳಿ ಅವರು ಆದಷ್ಟು ಬೇಗನೆ ಸಚಿವರಾಗಲೆಂದು ನಾನು ಬಯಸುತ್ತೇನೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ರು.
ರಾಯಬಾಗ ಪಟ್ಟಣದಲ್ಲಿ ಹಾಲು ಸಂಸ್ಕರಣಾ ಘಟಕ ಉದ್ಘಾಟನೆ ಸಮಾರಂಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸಚಿವನಾಗುವುದಿಲ್ಲ. ಕೆಎಂಎಫ್ ಅಧ್ಯಕ್ಷನಾಗಿ ಆರಮಾಗಿದ್ದೇನೆ. ಸಚಿವ ಸ್ಥಾನದ ಆಸೆ ನನಗೆ ಇಲ್ಲ ಎಂದರು.
ಲಕ್ಷ್ಮಣ ಸವದಿ ಅವರು ಡಿ. ಕೆ ಶಿವಕುಮಾರ್ ಅವರ ಸಂಪರ್ಕದಲ್ಲಿದ್ದಾರೆ: ಯಾರು ಯಾರ ಸಂಪರ್ಕದಲ್ಲಿ ಇದ್ದಾರೆ ಎಂಬುದು ಗೊತ್ತಿಲ್ಲ. ಈ ವಿಚಾರ ಮಾಧ್ಯಮಗಳಿಂದ ಗೊತ್ತು. ಸಚಿವ ಉಮೇಶ್ ಕತ್ತಿ, ನಾನು ಸ್ನೇಹಿತರು. ನಮ್ಮ ಮಧ್ಯದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಮುಖಂಡರು ಕುಳಿತುಕೊಂಡು ಸಭೆ ಮಾಡಿದರೆ ಎಲ್ಲವೂ ಅಸಮಾಧಾನ ಬಗೆಹರಿಯುತ್ತದೆ ಎಂದು ಪ್ರತಿಕ್ರಿಯೆ ನೀಡಿದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ದಿನನಿತ್ಯ ವದಂತಿಗಳು ಹಬ್ಬುತ್ತಿವೆ. ಅವರು ಆ ಪಕ್ಷಕ್ಕೆ ಹೋಗುತ್ತಾರೆ. ಇವರು ಈ ಪಕ್ಷಕ್ಕೆ ಹೋಗುತ್ತಾರೆ ಎಂಬುದು ಎಲ್ಲವೂ ಊಹಾಪೋಹ. ಎಲ್ಲವೂ ವದಂತಿಗಳು. ಭಾರತೀಯ ಜನತಾ ಪಕ್ಷದ ಕಟ್ಟಲು ಮುಖಂಡರು ಮುಂದಾಗಬೇಕು. ನಮ್ಮ ಮಧ್ಯದಲ್ಲಿ ಜಗಳ ಬೇಡ ಎಂದು ಕರೆ ನೀಡಿದರು.
ಓದಿ: ಯುಪಿ ವಿಧಾನಸಭೆ ಚುನಾವಣೆಯಿಂದ 'ಭಾರತದ ಭವಿಷ್ಯ ನಿರ್ಧಾರ': ಅಮಿತ್ ಶಾ