ಚಿಕ್ಕೋಡಿ/ಅಥಣಿ : ಅಯೋಧ್ಯಾ ತೀರ್ಪಿನ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಸೂಚನೆ ಮೇರೆಗೆ ಸಾರಿಗೆ ಇಲಾಖೆ, ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ಅಥಣಿ, ಗೋಕಾಕ್ಗೆ ಹೋಗುವ ಬಸ್‌ಗಳ ಸಂಖ್ಯೆಯಲ್ಲಿ ಕಡಿತ ಮಾಡಿದೆ.
ಅಯೋಧ್ಯಾ ತೀರ್ಪಿನ ಹಿನ್ನೆಲೆಯಲ್ಲಿ ಸಾಧಕ ಬಾದಕ ಅರಿತ ತಾಲೂಕು ಆಡಳಿತ ಮುಂಜಾಗ್ರತ ಕ್ರಮವಾಗಿ ಬಸ್ ಸಂಚಾರ ಬಂದ್ ಮಾಡಲಾಗಿದ್ದು, ಮಹಾರಾಷ್ಟ್ರ ಕಡೆ ಹೋದ ಬಸ್ಗಳನ್ನ ಆಯಾ ಬಸ್ಟ್ಯಾಂಡ್ಗಳಲ್ಲಿ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ ಎಂದು ಅಥಣಿ ಕೆಎಸ್ಆರ್ಟಿಸಿ ಡಿಪೋ ಅಧಿಕಾರಿ ಬಸವರಾಜ ಜಗದಾಳ ಈ ಟಿವಿ ಭಾರತ ಜೊತೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಸುಮಾರು 350ಕ್ಕೂ ಹೆಚ್ಚು ಬಸ್ಗಳನ್ನು ಡಿಪೋದಲ್ಲೇ ತಡೆ ಹಿಡಿದ ಸಾರಿಗೆ ಇಲಾಖೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಹಿಸಿದೆ. ಈಗಾಗಲೇ ಎಂದಿನಂತೆ ಮಹಾರಾಷ್ಟ್ರದ ಪುಣೆ, ಸಾಂಗ್ಲಿ, ಕೊಲ್ಹಾಪುರಕ್ಕೆ ಹೊರಟಿರುವ ರಾಜ್ಯ ಸಾರಿಗೆ ಬಸ್‌ಗಳ ಪರಿಸ್ಥಿತಿ ನೋಡಿಕೊಂಡು ಅವುಗಳನ್ನು ಸಹ ಮಹಾರಾಷ್ಟ್ರದಲ್ಲೇ ತಡೆ ಹಿಡಿಯುವ ಮಾಹಿತಿಯನ್ನು ಡಿವಿಜನ್ ಕಂಟ್ರೋಲರ್ ಶಶಿಧರ ನೀಡಿದ್ದಾರೆ.
ಇನ್ನು ಚಿಕ್ಕೋಡಿಯಿಂದ ಹೊರ ಹೋಗುವ ಬಸ್‌ಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಪ್ರಯಾಣಿಕರು ಪರದಾಟ ಪಡುವಂತಾಗಿದೆ.