ಬೆಳಗಾವಿ: ಅಥಣಿ ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ಶನಿವಾರದಂದು ಜರುಗಬೇಕಾಗಿದ್ದ ಶ್ರೀ ಹನುಮಾನ ದೇವರ ರಥೋತ್ಸವವನ್ನು ಕೊರೊನಾ ವೈರಸ್ ಭೀತಿ ಹಿನ್ನೆಲೆ ಮುಂದೂಡಲಾಗಿದೆ.
ತಾಲೂಕಿನ ನಂದೇಶ್ವರ ಗ್ರಾಮದಲ್ಲಿ 19ರಂದು ಸಂಜೆ ಜರುಗಬೇಕಾಗಿದ್ದ ಶ್ರೀ ಹನುಮಾನ ದೇವರ ರಥೋತ್ಸವವನ್ನು ಲಾಕ್ಡೌನ್ ಆದೇಶ ಜಾರಿಯಿರುವುದರಿಂದ ಮುಂದೂಡಿದ್ದಾರೆ. ಶ್ರೀ ಹನುಮಾನ ದೇವರ ಕಮೀಟಿ ಸದಸ್ಯರು, ಸೇವಕರು ಹಾಗೂ ಭಕ್ತರು ಪರಸ್ಪರ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ.
ಶನಿವಾರ ವಿಜೃಂಭಣೆಯಿಂದ ಜರುಗಬೇಕಾಗಿದ್ದ ಶ್ರೀ ಹನುಮಾನ ದೇವರ ರಥೋತ್ಸವ, ಶ್ರೀ ಬಸವೇಶ್ವರ ದೇವರ ಉಚ್ಛಾಯ, ನೈವೇದ್ಯ ಅರ್ಪಣೆ, ಪಲ್ಲಕ್ಕಿ ಸೇವೆ, ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದೂಡಿದ್ದಾರೆ. ಪ್ರತಿ ವರ್ಷ ವಿಜೃಂಭಣೆಯಿಂದ ಜರಗುತ್ತಿದ್ದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ರಥೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಿದ್ದರು.
ಸದ್ಯ ದೇಶದಲ್ಲಿ ಲಾಕ್ಡೌನ್ ಆದೇಶದಂತೆ ಜಾತ್ರೆ ಮಹೋತ್ಸವ ರದ್ದು ಮಾಡಲಾಗಿದೆ ಸರ್ಕಾದ ನಿರ್ದೇಶನ ಮೇಲೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಜಾತ್ರಾ ಕಮಿಟಿ ಹಿರಿಯರಾದ ಹನುಮಂತ ಚಂಡಕಿ ತಿಳಿಸಿದ್ದಾರೆ.