ETV Bharat / state

ಸವದಿ ಸಮ್ಮುಖದಲ್ಲಿ ಬಿಜೆಪಿ ಸೇರಿದ ಅಥಣಿ ತಾಲೂಕು ಜೆಡಿಎಸ್ ಮಾಜಿ ಅಧ್ಯಕ್ಷ - ರಾಜ್ಯ ಮುಖ್ಯಮಂತ್ರಿ ಬಿಎಸ್​ವೈ

ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿಎಸ್​ವೈ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ, ಸ್ಥಳೀಯ ಶಾಸಕ ಮಹೇಶ್ ಕುಮಟಳ್ಳಿ ಅವರ ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಅಥಣಿ ಭಾಗದಲ್ಲಿ ಬಿಜೆಪಿ ಸರ್ಕಾರ ಹಲವು ಯೋಜನೆ ಜಾರಿಗೊಳಿಸಿದ್ದು ನಾನು ಬಿಜೆಪಿ ಪಕ್ಷ ಸೇರುವುದಕ್ಕೆ ಪ್ರಮುಖ ಕಾರಣವಾಗಿದೆ ಎಂದಿದ್ದಾರೆ.

Athani Taluk former jds president joins bjp
ಅಥಣಿ ತಾಲೂಕು ಜೆಡಿಎಸ್ ಮಾಜಿ ಅಧ್ಯಕ್ಷ ಸವದಿ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ
author img

By

Published : Jan 2, 2021, 8:50 PM IST

ಅಥಣಿ (ಬೆಳಗಾವಿ): ಡಿಸಿಎಂ ಲಕ್ಷ್ಮಣ್ ಸವದಿ ಅವರ ಸಮ್ಮುಖದಲ್ಲಿ ಅಥಣಿ ತಾಲೂಕು ಜೆಡಿಎಸ್​​ ಮಾಜಿ ಅಧ್ಯಕ್ಷ ಶ್ರೀಶೈಲ ಹಳ್ಳದಮಳ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಮುಂಬರುವ ಪುರಸಭೆ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆ ಅಥಣಿ ಭಾಗದಲ್ಲಿ ಆಪರೇಷನ್ ಕಮಲ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಕುರಿತಂತೆ ಮಾತನಾಡಿದ ಶ್ರೀಶೈಲ ಹಳ್ಳದಮಳ್, ನಾವು ಒಂದು ವರ್ಷದಿಂದ ಜೆಡಿಎಸ್ ಪಕ್ಷದಿಂದ ದೂರವಾಗಿ ಉಳಿದಿದ್ದೇವೆ. ಹಾಗೂ ಪುರಸಭೆ ಸದಸ್ಯನಾಗಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದರಿಂದ ಪಟ್ಟಣದಲ್ಲಿ ಒಳ್ಳೆಯ ಹೆಸರು ಉಳಿದಿದೆ.

ಬಿಜೆಪಿ ಸೇರ್ಪಡೆ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯಸಿದ ಶ್ರೀಶೈಲ ಹಳ್ಳದಮಳ್

ಸಮಾಜಮುಖಿ ಕಾರ್ಯಗಳು, ಮೂಲಭೂತ ಸೌಲಭ್ಯ, ರಸ್ತೆ ಸುಧಾರಣೆ, ಸ್ವಂತ ಖರ್ಚಿನಲ್ಲಿ ಬೇಸಿಗೆಯಲ್ಲಿ ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ, ಜನತೆಯ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದೇನೆ. ಇದನ್ನು ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಗಮನಿಸಿ ಹಾಲಿ ಜಿಲ್ಲಾ ಪಂಚಾಯತ್ ಸದಸ್ಯ ಶಿವಾನಂದ ದಿವಾನಮಳ್ ನೇತೃತ್ವದಲ್ಲಿ ಹಾಗೂ ಡಿಸಿಎಂ ಸವದಿ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷ ಸೇರಿಕೊಂಡೆ ಎಂದರು.

ಇನ್ನು ಕೆಲವೇ ದಿನಗಳಲ್ಲಿ ಪುರಸಭೆ ಚುನಾವಣೆ ನಡೆಯಲಿದ್ದು, ನಾನು ಬಿಜೆಪಿ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದೇನೆ ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಜೆಡಿಎಸ್​​ನಲ್ಲಿ ಹಲವರ ಅಸಮಾಧಾನ: ತೆನೆ ಇಳಿಸುತ್ತಾರೆ ಈ ನಾಯಕರು!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.