ಅಥಣಿ: ವಾರದ ಹಿಂದೆ ಅಥಣಿ ಹೊರವಲಯದಲ್ಲಿ ವೆಂಕಟೇಶ್ವರ ಬಾರ್ ಕಳ್ಳತನ ಪ್ರಕರಣದ ಜಾಡು ಹಿಡಿದ ಅಥಣಿ ಪೊಲೀಸರು ಹತ್ತು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ರಾಜು, ಸಂಜು, ಉಮೇಶ್, ರಾಮಚಂದ್ರ, ಶಿದ್ದರಾಮ್, ಜಯವಂತ್, ಆಕಾಶ, ಸುನಿಲ್, ಮಾಂತೇಶ್, ಶಿವಾನಂದ ಎಂಬ ಹತ್ತು ಜನ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಥಣಿ, ಕುಡಚಿ, ಹಾರೂಗೇರಿ ಮತ್ತು ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮದ್ಯ ಕಳ್ಳತನದ ಏಳು ಪ್ರಕರಣಗಳು ದಾಖಲಾಗಿದ್ದು, ಆರೋಪಿತರಿಂದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳುವಾದ ಒಟ್ಟು ಸುಮಾರು ರೂ. 145000/- ಬೆಲೆ ಬಾಳುವ ಸರಾಯಿ, ಒಂದು ಕಾರು, ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಳಗಾವಿ ಎಸ್ಪಿ ಲಕ್ಷ್ಮಣ್ ನಿಂಬರಗಿ ಮಾರ್ಗದರ್ಶನದಲ್ಲಿ ಅಥಣಿ ಡಿವೈಎಸ್ಪಿ ಎಸ್.ವಿ.ಗಿರೀಶ್, ಸಿಪಿಐ ಶಂಕರಗೌಡ ಬಸವನಗೌಡರ, ಪಿಎಸ್ಐ ಕುಮಾರ್ ಹಾಡ್ಕರ ಮತ್ತು ಶಿವರಾಜ್ ನಾಯಕವಾಡೆ ಹಾಗೂ ಸಿಬ್ಬಂದಿ ವರ್ಗದವರನ್ನೊಳಗೊಂಡ ತನಿಖಾ ತಂಡದ ಕಾರ್ಯವನ್ನು ಶ್ಲಾಘಿಸಿ ಬೆಳಗಾವಿ ಆರಕ್ಷಕ ಅಧೀಕ್ಷಕರು ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿದ್ದಾರೆ.