ಬೆಳಗಾವಿ : ನ್ಯೂ ಗಾಂಧಿನಗರದಲ್ಲಿ ಗಾಂಜಾ ಮತ್ತಿನಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಗಾಂಜಾ ಮತ್ತಿನಲ್ಲಿ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಮದ್ ಕೈಫ್ ಎಂಬಾತನ ಮೇಲೆ ತಲ್ವಾರ್, ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು.
ಸಲ್ಮಾನ್ ಅಲಿಯಾಸ್ ಬಗ್ಗಾ ಸನದಿ, ಅಫ್ಜಲ್ ಅಲಿಯಾಸ್ ಪಿಟ್ಯಾ ಸಯ್ಯದ್, ಶಾಹೀದ್ ಅಲಿಯಾಸ್ ಹಂಡಿ ಬೀಡಿವಾಲೆ, ಮುಷ್ತಾಕ್ ಅಲಿಯಾಸ್ ಬಿಲ್ಡರ್ ದಾವಣಗೆರೆ ಎಂಬಾತನನ್ನು ಬಂಧಿಸಿದ್ದು ತನಿಖೆ ಮುಂದುವರಿಸಿದ್ದಾರೆ. ರೌಡಿ ಮುಷ್ತಾಕ್ ಹಾಗೂ ಸಹಚರರು ಕ್ಯತ್ಯ ನಡೆಸಿದ್ದಾರೆ ಅಂತಾ ಆರೋಪಿಸಲಾಗಿತ್ತು.
ಇದನ್ನೂ ಓದಿ : ಬೆಳಗಾವಿ: ಗಾಂಜಾ ವ್ಯಸನಿಗಳಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ರಾಷ್ಟ್ರೀಯ ಹೆದ್ದಾರಿ ನಾಲ್ಕರ ಪಕ್ಕದಲ್ಲಿಯೇ ಇರುವ ಬೆಳಗಾವಿಯ ನ್ಯೂ ಗಾಂಧಿನಗರ, ಉಜ್ವಲ ನಗರದಲ್ಲಿ ಗಾಂಜಾ ಹಾವಳಿ ಹೆಚ್ಚಾಗುತ್ತಿದ್ದು, ಇದನ್ನ ತಡೆಗಟ್ಟುವಂತೆ ಆಗ್ರಹಿಸಿ ಮಹಿಳೆಯರು ಪ್ರತಿಭಟನೆ ನಡೆಸಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಅವರಿಗೆ ಮನವಿ ಮಾಡಿದ್ದರು. ಇದಾದ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಮಹ್ಮದ್ ಕೈಫ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಆರೋಪದಡಿ ನಾಲ್ವರನ್ನು ಬಂಧಿಸಿದ್ದಾರೆ.