ಚಿಕ್ಕೋಡಿ : ಕೊರಾನಾ ದೃಢಪಟ್ಟ ಮಹಿಳೆಯ ಸಂಪರ್ಕದಲ್ಲಿದ್ದವರನ್ನೆಲ್ಲ ಕ್ವಾರಂಟೈನ್ ಮಾಡಬೇಕು ಎಂದು ಒತ್ತಾಯಿಸಿ ಜೈಹೋ ಜನತಾ ವೇದಿಕೆಯ ಚಾಲಕರ ಸಂಘದ (ಕೊಣ್ಣೂರು ಘಟಕ) ಕಾರ್ಯಕರ್ತರು ಕೊಣ್ಣೂರ ಪುರಸಭೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೊಣ್ಣೂರಲ್ಲಿ ಮೃತ ಮಹಿಳೆಗೆ ಸೋಂಕು ತಗುಲಿದ ಹಿನ್ನೆಲೆ ಮೃತರ ಆರೈಕೆ ಮಾಡುತಿದ್ದ ಸಂಪರ್ಕಿತರನ್ನು ತಪಾಸಣೆಯೇ ಮಾಡಲಿಲ್ಲ. ಈ ಮೂಲಕ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ. ಇದರಿಂದ ನಿವಾಸಿಗಳಲ್ಲಿ ಆತಂಕ ಶುರುವಾಗಿದೆ. ಕೆಲವರು ಕುಟುಂಬ ಸಮೇತ ಬೇರೆ ಊರಿಗೆ ಹೋಗುತ್ತಿದ್ದಾರೆ ಎಂದರು.
ಹೀಗಾಗಿ, ಸಂಪರ್ಕಿತರನ್ನು ಗುರುತಿಸಿ ಕ್ವಾರಂಟೈನ್ಗೆ ಒಳಪಡಿಸಬೇಕು. ಮಳೆಗಾಲ ಪ್ರಾರಂಭವಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿದೆ. ಎಲ್ಲ ಕಡೆ ಸಾನಿಟೈಸರ್ ಸಿಂಪಡಿಸಿ ರೋಗ ಹರಡದಂತೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.