ETV Bharat / state

ಮಳೆ ಅಬ್ಬರಕ್ಕೆ ನೆಲಕ್ಕುರುಳಿದ ಬೆಳಗಾವಿ ಎಪಿಎಂಸಿ ಮಾರುಕಟ್ಟೆ ಕಾಂಪೌಂಡ್ ಗೋಡೆ - Belgum latest news

ಎಡೆಬಿಡೆದೆ ಸುರಿಯುತ್ತಿರುವ ಮಳೆಗೆ ಎಪಿಎಂಸಿ ಮಾರುಕಟ್ಟೆಯ ಗೋಡೆ ನೆಲಕ್ಕೆ ಉರುಳಿದೆ.

Belgum
Belgum
author img

By

Published : Aug 5, 2020, 2:55 PM IST

ಬೆಳಗಾವಿ: ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ನಗರದ ಎಪಿಎಂಸಿ ಮಾರುಕಟ್ಟೆ ಪ್ರದೇಶದ ಅಂದಾಜು 150 ಮೀಟರ್ ಉದ್ದದ ಕಾಂಪೌಂಡ್ ಗೋಡೆ ನೆಲಕ್ಕುರುಳಿದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ.

ಬೆಳಗಾವಿ ನಗರ ಸೇರಿ ಜಿಲ್ಲೆಯ ಹಲವೆಡೆ‌ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದ್ದು, ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದರಿಂದ ಹಲವೆಡೆ ರಸ್ತೆ ಸಂಚಾರ ಬಂದ್ ಆಗಿದೆ. ಮಳೆ ಅಬ್ಬರಕ್ಕೆ ಎಪಿಎಂಸಿ ಮಾರುಕಟ್ಟೆ ಪ್ರದೇಶದ 150 ಮೀಟರ್ ಉದ್ದದ ಗೋಡೆ ನೆಲಕ್ಕೆ ಉರುಳಿದ ಪರಿಣಾಮ ಜ್ಯೋತಿ ನಗರಕ್ಕೆ ತೆರಳುವ ಸಂಚಾರ ಮಾರ್ಗ ಸಂಪೂರ್ಣ ಬಂದ್ ಆಗಿದೆ.

ಗೋಡೆ ಕುಸಿದು ಅದರ ಕಲ್ಲುಗಳು ರಸ್ತೆ ಮೇಲೆಯೇ ಬಿದ್ದಿರುವುದರಿಂದ ಟ್ರಾಫಿಕ್ ಸಮಸ್ಯೆ ಜೊತೆಗೆ ಜ್ಯೋತಿ ನಗರಕ್ಕೆ ತೆರಳುವ ಜನತೆ ಸಂಚಾರಕ್ಕೆ ಪರ್ಯಾಯ ಮಾರ್ಗವಿಲ್ಲದೆ ಪರದಾಡುವಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.