ಬೆಳಗಾವಿ: ಜಿಲ್ಲೆಯ ಮತ್ತೋರ್ವ ಕೊರೊನಾ ಸೋಂಕಿತ ಗುಣಮುರಾಗಿ ಬೆಳಗಾವಿ ಬೀಮ್ಸ್ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ರೋಗಿ ನಂಬರ್ 150 ಗುಣಮುಖರಾಗಿ ಬೀಮ್ಸ್‌ನಿಂದ ಡಿಸ್ಚಾರ್ಜ್ ಆದರು. ಕೊರೊನಾ ವಿರುದ್ಧ ಹೋರಾಡಿ ಗೆದ್ದ ವ್ಯಕ್ತಿಯನ್ನು ಬೀಮ್ಸ್ ಸಿಬ್ಬಂದಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು. ಆ್ಯಂಬುಲೆನ್ಸ್‌ನಲ್ಲಿ ಕುಡಚಿಗೆ ಕಳುಹಿಸಲಾಯಿತು.
2 ಬಾರಿ ಗಂಟಲು ದ್ರವದ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಬಂದ ಹಿನ್ನೆಲೆ ಡಿಸ್ಚಾರ್ಜ್ ಮಾಡಲಾಯಿತು. ಬೀಮ್ಸ್ ಆಸ್ಪತ್ರೆಯಿಂದ ಈವರೆಗೆ ನಾಲ್ವರು ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಓರ್ವ ವೃದ್ಧೆ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸದ್ಯ 40 ಕೊರೊನಾ ಸಕ್ರಿಯ ಪ್ರಕರಣಗಳಿವೆ.