ETV Bharat / state

ರಾಜಕೀಯ ದ್ವೇಷದಿಂದ ಕಿರುಕುಳ ಆರೋಪ: ಗ್ರಾಪಂ ಸದಸ್ಯನ ಹೇಳಿಕೆ ತಳ್ಳಿ ಹಾಕಿದ ಶಾಸಕ ರಾಜು ಕಾಗೆ - ಈಟಿವಿ ಭಾರತ ಕನ್ನಡ

ಶಾಸಕ ರಾಜು ಕಾಗೆ ವಿರುದ್ಧ ಗ್ರಾಮ ಪಂಚಾಯಿತಿ ಸದಸ್ಯ ಮಾಡಿದ್ದ ಆರೋಪವನ್ನು ಶಾಸಕರು ತಳ್ಳಿ ಹಾಕಿದ್ದಾರೆ.

ಶಾಸಕ ರಾಜು ಕಾಗೆ
ಶಾಸಕ ರಾಜು ಕಾಗೆ
author img

By

Published : Jun 6, 2023, 2:19 PM IST

ಚಿಕ್ಕೋಡಿ: ಹಳೆಯ ರಾಜಕೀಯ ದ್ವೇಷವನ್ನು ಇಟ್ಟುಕೊಂಡು ಕಾಗವಾಡ ಶಾಸಕ ರಾಜು ಕಾಗೆ ಅವರು ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ರೂಪಿಸಿ ನಮಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಮಾಡಲಾದ ಆರೋಪವನ್ನ ಶಾಸಕ ರಾಜು ಕಾಗೆ ತಳ್ಳಿ ಹಾಕಿದ್ದಾರೆ.

ತಮ್ಮ ವಿರುದ್ಧದ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಕಾಗೆ, ’’ನನ್ನ ವಿರುದ್ಧ ಅವರೇ ರಾಜಕೀಯ ಷಡ್ಯಂತ್ರ ರೂಪಿಸಿ ತಮ್ಮ ಮಾನ ಕಳೆಯುವ ಕೆಲಸ ಮಾಡುತ್ತಿದ್ದಾರೆ. ಅವರು ನನ್ನ ಹಳೆಯ ಸ್ನೇಹಿತ. ಈಗ ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನಾನು ಅವರಿಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ. ಒಂದು ವೇಳೆ ತೊಂದರೆ ಕೊಟ್ಟಿದ್ದರೆ ಹಾಗೂ ಆ ಬಗ್ಗೆ ಸೂಕ್ತ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ದಾಖಲೆ ಇದ್ದರೆ ನನ್ನ ವಿರುದ್ಧ ಪ್ರಕರಣವನ್ನೂ ದಾಖಲಿಸಲಿ‘‘ ಎಂದು ಹೇಳಿದ್ದಾರೆ.

ಇನ್ನು ಮುಂದುವರೆದು ಮಾತನಾಡಿರುವ ಶಾಸಕರು, ’’ರಾಮುಗೌಡ ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಕರೆ ಮಾಡಿ ನಮ್ಮ ಮನೆ ಮುಂದೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ನಾನು ಅವರಿಗೆ ಕಿರುಕುಳ ನೀಡಿದ್ದೇ ಆದಲ್ಲಿ ಅವರು ನನ್ನ ವಿರುದ್ಧ ಪ್ರಕರಣ ದಾಖಲಿಸಬಹುದು. ನಾನು ಅವರಿಗೆ ಕಿರುಕುಳ ನೀಡಿರುವುದು ಸುಳ್ಳು ಆರೋಪವಾಗಿದೆ. ಬದಲಾಗಿ ನನ್ನನ್ನೇ ತೇಜೋವಧೆ ಮಾಡಲಾಗುತ್ತಿದೆ. ಯಾವ ಕಾರಣಕ್ಕೆ ಈ ಮಾತು ಆಡುತ್ತಿದ್ದಾರೆ ಎಂಬುದು ನನಗೂ ಗೊತ್ತಿಲ್ಲ ಎಂದರು.

ಏನಿದು ಘಟನೆ ? : ರಾಜಕೀಯ ದ್ವೇಷದಿಂದಾಗಿ ಶಾಸಕ ರಾಜು ಕಾಗೆ ತಮ್ಮ ಮೇಲೆ ಹಗೆ ಸಾಧಿಸುತ್ತಿದ್ದಾರೆ ಎಂದು ಶಿರಗುಪ್ಪಿ ಗ್ರಾಮ ಪಂಚಾಯತಿ ಸದಸ್ಯ ರಾಮುಗೌಡ ಪಾಟೀಲ್ ಆರೋಪಿಸಿದ್ದರು. ತಮ್ಮ ಗ್ರಾಮದಲ್ಲಿ ನಡೆಯುತ್ತಿರುವ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಶಾಸಕರು ನಿಲ್ಲಿಸಿದ್ದಾರೆ. ಜೊತೆಗೆ ತಮಗೆ ಸೇರಿದ ಎರಡು ಮಧ್ಯ ಮಾರಾಟ ಮಳಿಗೆಯ ವ್ಯಾಪಾರಕ್ಕೆ ಅಧಿಕಾರಿಗಳನ್ನು ಬಳಸಿಕೊಂಡು ಶಾಸಕರು ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ರಾಮುಗೌಡ ಆರೋಪಿಸಿದ್ದರು. ಅಲ್ಲದೇ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ರಾಮುಗೌಡ ಶಾಸಕರಿಗೆ ಕರೆ ಮಾಡಿ ಹೇಳಿದ ಘಟನೆ ನಡೆದಿತ್ತು.

ರಾತ್ರಿ ಈ ಹೇಳಿಕೆ ನೀಡುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ರಾಮುಗೌಡ ಪಾಟೀಲ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಅತ್ತ ರಾಮುಗೌಡ ಅವರನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದಂತೆ ಮಾಧ್ಯಮಗಳ ಮುಂದೆ ರಾಮಗೌಡ ಪಾಟೀಲ್ ಕುಟುಂಬಸ್ಥರು ಕಾಗವಾಡ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಅವಾಚ್ಯ ಶಬ್ದಗಳಿಂದ ಜೆಡಿಎಸ್​ ಶಾಸಕಿ ಕರೇಮ್ಮಗೆ ನಿಂದನೆ ಆರೋಪ: 8 ಜನರ ವಿರುದ್ಧ ಪ್ರಕರಣ ದಾಖಲು

ಇದನ್ನೂ ಓದಿ: ಬಾಡಿಗೆದಾರರಿಗೂ 200 ಯೂನಿಟ್​ ವಿದ್ಯುತ್​ ಉಚಿತ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.