ETV Bharat / state

ಮಹಾ ಡಿಸಿಎಂ ಅಜಿತ್​​ ಪವಾರ್​​​ ಮಾನಸಿಕ ಸ್ಥಿಮಿತ ಇಲ್ಲ : ಶಾಸಕ ಪಿ.ರಾಜೀವ

ಅಖಂಡ ಕರ್ನಾಟಕ ಛಿದ್ರಗೊಳಿಸುತ್ತೇನೆ ಎಂದು ಹೇಳಿಕೆ ನೀಡಿರುವ ಮಹಾರಾಷ್ಟ್ರ ಡಿಸಿಎಂ ಅಜಿತ್​ ಪವಾರ್​​ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ..

p rajeev
ಶಾಸಕ ಪಿ.ರಾಜೀವ ಹೇಳಿಕೆ
author img

By

Published : Nov 18, 2020, 2:28 PM IST

ಚಿಕ್ಕೋಡಿ : ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್​​ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಕುಡಚಿ ಶಾಸಕ ಪಿ. ರಾಜೀವ ಲೇವಡಿ ಮಾಡಿದ್ದಾರೆ.

ಶಾಸಕ ಪಿ.ರಾಜೀವ ಹೇಳಿಕೆ

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಕರ್ನಾಟಕದ ಕಿರೀಟ ಇದ್ದ ಹಾಗೆ. ಅಂತಹುದರಲ್ಲಿ ಪವಾರ್​ ತರಹದ ಎಷ್ಟೋ ಹೇಳಿಕೆಗಳನ್ನು ಕೊಟ್ಟ ವ್ಯಕ್ತಿಗಳು ಅಸ್ತಿತ್ವವೇ ಇಲ್ಲದ ಹಾಗೆ ಕೊನೆಯಾಗಿದ್ದಾರೆ ಎಂದು ಕುಡಚಿ ಶಾಸಕ ಹಾಗೂ ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಪಿ.ರಾಜೀವ್ ಹೇಳಿದರು.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್​​ ಹೇಳಿಕೆ ವಿಚಾರವಾಗಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೋಗೆರಿಯಲ್ಲಿ ಪ್ರತಿಕ್ರಿಯಿಸಿದ ಅವರು, ಅಖಂಡ ಕರ್ನಾಟಕ ಛಿದ್ರಗೊಳಿಸುತ್ತೇನೆ ಎಂದು ಹೇಳುವ ಮುನ್ನ, ಕರ್ನಾಟಕದಲ್ಲಿ ರಾಜಾಹುಲಿ ಯಡಿಯೂರಪ್ಪನವರ ಸರ್ಕಾರ ಇದೆ ಎನ್ನುವುದನ್ನ ಅಜಿತ್​ ಪವಾರ್​​ ಪ್ರಜ್ಞೆಯಲ್ಲಿ ಇಟ್ಟುಕೊಳ್ಳಬೇಕು, ಇಂತಹ ಹೇಳಿಕೆಗಳಿಗೆ ನಾವು ಪ್ರಾಮುಖ್ಯತೆಯನ್ನು ಕೊಡಲ್ಲ ಎಂದಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.