ETV Bharat / state

ಮತ್ತೆ ಗೆಲ್ತಾರಾ ಹೆಬ್ಬಾಳ್ಕರ್, ಜೊಲ್ಲೆ, ನಿಂಬಾಳ್ಕರ್..? ರತ್ನಾ ಕೊರಳಿಗೆ ಬೀಳುತ್ತಾ ವಿಜಯದ ಮಾಲೆ?

ಬೆಳಗಾವಿ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ರಂಗೇರಿದೆ. ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್​ನಿಂದ ನಾಲ್ವರು ಮಹಿಳಾ ಅಭ್ಯರ್ಥಿಗಳು ಕಣದಲ್ಲಿರುವುದು ಕುತೂಹಲ ಹೆಚ್ಚಿಸಿದೆ.

Etv Bharatಲಕ್ಷ್ಮೀ ಹೆಬ್ಬಾಳ್ಕರ್,  ಶಶಿಕಲಾ ಜೊಲ್ಲೆ, ಡಾ. ಅಂಜಲಿ‌ ನಿಂಬಾಳ್ಕರ್,ರತ್ನಕ್ಕ ಮಾಮನಿ
ಲಕ್ಷ್ಮೀ ಹೆಬ್ಬಾಳ್ಕರ್, ಶಶಿಕಲಾ ಜೊಲ್ಲೆ, ಡಾ. ಅಂಜಲಿ‌ ನಿಂಬಾಳ್ಕರ್,ರತ್ನಕ್ಕ ಮಾಮನಿ
author img

By

Published : Apr 23, 2023, 4:03 PM IST

ಬೆಳಗಾವಿ : ಜಿಲ್ಲೆಯಲ್ಲಿ ಕಾಂಗ್ರೆಸ್ ಬಿಜೆಪಿ ರಾಷ್ಟ್ರೀಯ ಪಕ್ಷಗಳಿಂದ ನಾಲ್ವರು ಮಹಿಳೆಯರು ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕಳೆದ ಬಾರಿ ಮೂವರು ಮಹಿಳಾ ನಾಯಕಿಯರು ಜಿಲ್ಲೆಯನ್ನು ಪ್ರತಿನಿಧಿಸಿದ್ದರು.

ಹೌದು, ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಲ್ಲ. ಅವಕಾಶ ಕೊಟ್ಟರೆ ವಿಧಾನಸಭೆಯಲ್ಲಿ ಆಡಳಿತವನ್ನೂ ನಡೆಸಬಲ್ಲರು ಎಂಬುದನ್ನು ಜಿಲ್ಲೆಯ ಮೂವರು ಶಾಸಕಿಯರು ಈಗಾಗಲೇ ನಿರೂಪಿಸಿದ್ದಾರೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಮತ್ತೆ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಖಾನಾಪುರ ಕ್ಷೇತ್ರದಿಂದ ಡಾ ಅಂಜಲಿ ನಿಂಬಾಳ್ಕರ್ ಕಣಕ್ಕಿಳಿದಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿಗಳಾಗಿ ನಿಪ್ಪಾಣಿಯಿಂದ ಮತ್ತೆ ಶಶಿಕಲಾ ಜೊಲ್ಲೆ ಸ್ಪರ್ಧಿಸಿದ್ದರೆ, ಶಾಸಕ ಆನಂದ ಮಾಮನಿ ಅವರ ಅಕಾಲಿಕ ನಿಧನ‌ ಹಿನ್ನೆಲೆ ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ ಆನಂದ ಅವರ ಪತ್ನಿ ರತ್ನಾ ಮಾಮನಿ ಅವರಿಗೆ ಬಿಜೆಪಿ‌ ಹೈಕಮಾಂಡ್ ಮಣೆ ಹಾಕಿದೆ.

ಲಕ್ಷ್ಮೀ ಹೆಬ್ಬಾಳ್ಕರ್
ಲಕ್ಷ್ಮೀ ಹೆಬ್ಬಾಳ್ಕರ್

ಲಕ್ಷ್ಮೀ ಹೆಬ್ಬಾಳ್ಕರ್ ಈಗ ಪವರ್ ಫುಲ್ ಲೀಡರ್: 2013ರ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಮೊದಲ ಸೋಲು ಅನುಭವಿಸಬೇಕಾಯಿತು. ನಂತರ 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲೂ ಸೋಲು ಕಾಣಬೇಕಾಯಿತು. ಸತತ ಎರಡು ಸೋಲುಗಳಿಂದ ಧೃತಿಗೆಡದ ಲಕ್ಷ್ಕೀ ಹೆಬ್ಬಾಳ್ಕರ್ ಗ್ರಾಮೀಣ ಕ್ಷೇತ್ರದಲ್ಲಿ ಹಗಲಿರುಳು ಕಾಂಗ್ರೆಸ್ ಪಕ್ಷ ಸಂಘಟಿಸಿದ ಪರಿಣಾಮ 2018ರ ಚುನಾವಣೆಯಲ್ಲಿ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದರು.

ಬಳಿಕ ಲಕ್ಷ್ಮೀ ಹೆಬ್ಬಾಳ್ಕರ್ ಹಿಂತಿರುಗಿ ನೋಡಿದ್ದೇ ಇಲ್ಲ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಪ್ರಭಾವಿಯಾಗಿ ಬೆಳೆಯುತ್ತಿರುವ ಲಕ್ಷ್ಮೀ ಹೆಬ್ಬಾಳ್ಕರ್ ಕಾಂಗ್ರೆಸ್ ಪಕ್ಷದ ಬಹುದೊಡ್ಡ ಶಕ್ತಿಯಾಗಿ ಹೊರ ಹೊಮ್ಮಿದ್ದಾರೆ. ಮಾಜಿ ಸಚಿವ ರಮೇಶ್​ ಜಾರಕಿಹೊಳಿ ವಿರುದ್ಧವೇ ಜಿದ್ದಿಗೆ ಬಿದ್ದು ಬೆಳಗಾವಿಯಲ್ಲಿ ರಾಜಕಾರಣ ಮಾಡುತ್ತಿರುವ ಲಕ್ಷ್ಮೀ ಹೆಬ್ಬಾಳ್ಕರ್ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮುನ್ನುಗ್ಗುತ್ತಿದ್ದಾರೆ. ಇನ್ನು, ಇತ್ತೀಚಿಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಲ್ಲೂ ಹೆಬ್ಬಾಳ್ಕರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಂತ್ರಿಯಾಗುವ ನಿರೀಕ್ಷೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಇದ್ದಾರೆ.

ಶಶಿಕಲಾ ಜೊಲ್ಲೆ
ಶಶಿಕಲಾ ಜೊಲ್ಲೆ

ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಶಶಿಕಲಾ ಜೊಲ್ಲೆ: ನಿಪ್ಪಾಣಿ ಕ್ಷೇತ್ರದಲ್ಲಿ ಸತತವಾಗಿ ಮೂರು ಬಾರಿ ಗೆದ್ದು ಬೀಗಿದ್ದ ಕಾಂಗ್ರೆಸ್​ನ ಕಾಕಾಸಾಹೇಬ ಪಾಟೀಲ್​ಗೆ ಸೋಲಿನ ರುಚಿ ತೋರಿಸುವ ಮೂಲಕ 2013ರಲ್ಲಿ ಗೆದ್ದಿದ್ದ ಶಶಿಕಲಾ ಜೊಲ್ಲೆ, ನಂತರ 2018ರಲ್ಲೂ ಕಾಕಾಸಾಹೇಬ ವಿರುದ್ಧ ಗೆಲುವು ಸಾಧಿಸಿದ್ದರು. ಕೇವಲ ಶಾಸಕಿ‌ ಆಗುವುದಷ್ಟೇ ಅಲ್ಲದೇ ಯಡಿಯೂರಪ್ಪ ಸರ್ಕಾರ ಮತ್ತು ಬೊಮ್ಮಾಯಿ ಸರ್ಕಾರದಲ್ಲೂ ಸಚಿವೆಯಾಗಿ ಕೆಲಸ ಮಾಡಿದ್ದಾರೆ. ಜಿಲ್ಲೆಯಲ್ಲಿ ಘಟಾನುಘಟಿ ನಾಯಕರಿದ್ದರೂ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡಿದ್ದು ಜೊಲ್ಲೆ ಹೆಗ್ಗಳಿಕೆ. ಇದೀಗ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಶಶಿಕಲಾ ಕ್ಷೇತ್ರದಾಧ್ಯಂತ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.

ಡಾ. ಅಂಜಲಿ‌ ನಿಂಬಾಳ್ಕರ್
ಡಾ. ಅಂಜಲಿ‌ ನಿಂಬಾಳ್ಕರ್

ಮತ್ತೆ ಗೆಲ್ಲುವ ತವಕದಲ್ಲಿ ಡಾ ಅಂಜಲಿ‌ ನಿಂಬಾಳ್ಕರ್: 2013ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಖಾನಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಾ. ಅಂಜಲಿ ನಿಂಬಾಳ್ಕರ್ ಮೊದಲ ಚುನಾವಣೆಯಲ್ಲೆ‌ ಪರಾಭವಗೊಂಡಿದ್ದರು.‌ ಇದರಿಂದ ಧೃತಿಗೆಡದ ಅಂಜಲಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. ಖಾನಾಪುರ ಅಭಿವೃದ್ಧಿಗೋಸ್ಕರ ಸದನದಲ್ಲಿ ಸರ್ಕಾರದ ಗಮನ ಸೆಳೆದಿರುವ ಅಂಜಲಿ, ಹೊರಗೆ ಪಾದಯಾತ್ರೆ ಕೈಗೊಳ್ಳುವ ಮೂಲಕವೂ ಗುರುತಿಸಿಕೊಂಡಿದ್ದಾರೆ. ಈಗ ಮತ್ತೆ ಗೆಲ್ಲುವ ತವಕದಲ್ಲಿರುವ ಅಂಜಲಿಗೆ ಖಾನಾಪುರ ಮತದಾರ ಪ್ರಭುಗಳು ಆಶೀರ್ವಾದ ಮಾಡುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

ರತ್ನಕ್ಕ ಮಾಮನಿ
ರತ್ನಕ್ಕ ಮಾಮನಿ

ರತ್ನಾ ಮಾಮನಿಗೆ ಸಿಗುತ್ತಾ ಯಲ್ಲಮ್ಮದೇವಿ ಆಶೀರ್ವಾದ: ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದು ಉಪ ಸಭಾಪತಿಯಾಗಿ ಕಾರ್ಯ ನಿರ್ವಹಿಸುತ್ತಿರುವಾಗಲೇ ಅಕಾಲಿಕವಾಗಿ ಆನಂದ ಮಾಮನಿ ಮೃತರಾದ ಹಿನ್ನೆಲೆ ಅವರ ಪತ್ನಿ ರತ್ನಾ ಮಾಮನಿ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದೆ. ಪತಿ ಅಗಲಿದ ಬಳಿಕ ಮನೆ ಹಿಡಿದು ಕುಳಿತುಕೊಳ್ಳದೇ ಕ್ಷೇತ್ರದಾಧ್ಯಂತ ಮಿಂಚಿನ ಸಂಚಾರ ಮಾಡುತ್ತಿರುವ ರತ್ನಾ ಅವರು ಪತಿಯ ಗೆಲುವಿನ ನಾಗಾಲೋಟ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ‌. ಇನ್ನು ನಾಮಪತ್ರ ಸ್ವೀಕೃತ ವಿಚಾರದಲ್ಲಿ ಗೊಂದಲ ಏರ್ಪಟ್ಟರೂ ಧೃತಿಗೆಡದೆ ವಿರೋಧಿಗಳಿಗೆ ತಮ್ಮ ಮಾತಿನ ಬಾಣದ ಮೂಲಕ ಟಕ್ಕರ್ ಕೊಟ್ಟಿರುವ ರತ್ನಾ ಮಾಮನಿ ಮನೆತನದ ರಾಜಕೀಯ ಪಟ್ಟು ಪ್ರದರ್ಶಿಸಿದ್ದಾರೆ.

ಒಟ್ಟಾರೆ ಬೆಳಗಾವಿ ಜಿಲ್ಲೆಯಲ್ಲಿ ನಾಲ್ವರು ಮಹಿಳಾ ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದು, ಅಂತಿಮವಾಗಿ ಮತದಾರ ಪ್ರಭುಗಳು ಇವರಿಗೆ ಆಶೀರ್ವಾದ ಮಾಡುತ್ತಾರಾ? ಎಂಬುದು ಮೇ 13ಕ್ಕೆ ಬಹಿರಂಗವಾಗಲಿದೆ.

ಇದನ್ನೂ ಓದಿ : ಕಾಂಗ್ರೆಸ್ ತೆಕ್ಕೆಗೆ ಬಿಜೆಪಿ ಬಂಡಾಯ ಅಭ್ಯರ್ಥಿ: ಜಾರಕಿಹೊಳಿ ಸಮ್ಮುಖದಲ್ಲಿ ಕೈ ಸೇರ್ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.