ಚಿಕ್ಕೋಡಿ: ಮರಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಕೃಷ್ಣಾ ನದಿಗೆ ನೀರನ್ನು ಹರಿಬಿಡಲಾಗಿದೆ. ಹೀಗಾಗಿ ನದಿಪಾತ್ರದ ಜನರಿಗೆ ಗ್ರಾಮಗಳನ್ನು ತೊರೆಯುವಂತೆ ಕಾಗವಾಡ ತಹಶಿಲ್ದಾರ್ ಪ್ರಮೀಳಾ ದೇಶಪಾಂಡೆ ಮನವಿ ಮಾಡಿದ್ದಾರೆ.
ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮಕ್ಕೆ ಭೇಟಿ ನೀಡಿದ ಅವರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಲು ಡಂಗೂರ ಸಾರುವ ಮೂಲಕ ಜನರಲ್ಲಿ ಮನವಿ ಮಾಡಿದ್ರು. 15 ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಈ ಗ್ರಾಮದ ಜನರು ತಮ್ಮ ತಮ್ಮ ಬೀಗರ ಮನೆಗಳಲ್ಲಿ ಆಶ್ರಯ ಪಡೆದಿದ್ದರು. ಆದರೆ ಈಗ ಎಲ್ಲಿಗೆ ಹೋಗುವುದು ಎಂದು ಜನರು ಕೇಳಿದ ಪ್ರಶ್ನೆಗೆ ತಾಳ್ಮೆಯಿಂದ ಉತ್ತರಿಸಿದ ತಕಶಿಲ್ದಾರ್ ಪ್ರಮೀಳಾ ಅವರು ಸರ್ಕಾರದ ಆದೇಶ ಬಂದರೆ ಗಂಜಿ ಕೇಂದ್ರ ತೆರೆಯಲಾಗುವುದು. ಅಲ್ಲಿಯವರೆಗೂ ನೀವು ಸುರಕ್ಷಿತ ಸ್ಥಳಗಳಿಗೆ ತೆರಳಲೇಬೇಕು ಎಂದು ಮನವಿ ಮಾಡಿದ್ರು. ಗ್ರಾಮಗಳಲ್ಲಿ ಡಂಗೂರ ಸಾರುವ ಮುಖಾಂತರ ಊರು ಬಿಟ್ಟು ತೆರಳುವಂತೆ ಡಂಗೂರ ಸಾರಲಾಯಿತು.