ETV Bharat / state

ಅಥಣಿ: ಹಣ ದ್ವಿಗುಣಗೊಳಿಸುವುದಾಗಿ ವಂಚಿಸಿದ್ದ ಆರೋಪಿ ಬಂಧನ

author img

By

Published : Dec 6, 2020, 3:30 PM IST

Updated : Dec 6, 2020, 3:37 PM IST

ಹಣ ದ್ವಿಗುಣಗೊಳಿಸುವುದಾಗಿ ವಂಚಿಸಿ 20,000 ರೂ. ಪಡೆದು ಪರಾರಿಯಾಗಿದ್ದ ಆರೋಪಿಯನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ.

Muttanna Basarikodi
ಮುತ್ತಣ್ಣ ಬಸರಿಕೋಡಿ

ಅಥಣಿ: ಹಣ ದ್ವಿಗುಣಗೊಳಿಸುವುದಾಗಿ ವಂಚಿಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ತಾಲೂಕಿನ ಪೊಲೀಸರು ಯಶಸ್ವಿಯಾಗಿದ್ದಾರೆ.

ಅವರಕೋಡ ಗ್ರಾಮದ ಶಂಕರ ಕೋಳಿ ಎಂಬುವರಿಗೆ ಘಟನಟ್ಟಿ ಗ್ರಾಮದ ಮುತ್ತಣ್ಣ ಬಸರಿಕೋಡಿ ಎಂಬ ವ್ಯಕ್ತಿ ಸ್ವಾಮೀಜಿ ಗಾಳಿಯಲ್ಲಿ ಕೈ ಬೀಸುವಾಗ ಎರಡುಸಾವಿರ ಮುಖಬೆಲೆಯ ನೋಟುಗಳು ಮೇಲಿನಿಂದ ಬೀಳುವ ದೃಶ್ಯ ಇರುವ ವಿಡಿಯೋ ಮೊಬೈಲಿಗೆ ಕಳಿಸಿ ಒಂದು ಲಕ್ಷ ರೂಪಾಯಿ ಕೊಟ್ಟರೆ ಐದು ಲಕ್ಷ ರೂಪಾಯಿ ಕೊಡುವುದಾಗಿ ಹೇಳಿ ಶಂಕರ ಕೋಳಿ ಅವರಿಂದ 20,000 ಹಣ ಪಡೆದು ಹಣ ಮರಳಿಸದೆ ಪರಾರಿಯಾಗಿದ್ದ ಎನ್ನಲಾಗ್ತಿದೆ. ಹಣ ದ್ವಿಗುಣ ಹೆಸರಲ್ಲಿ ವಂಚನೆಗೆ ಒಳಗಾಗಿದ್ದನ್ನು ತಿಳಿದ ಶಂಕರ ಅಥಣಿ ಪೊಲೀಸ್ ಠಾಣೆಯಲ್ಲಿ ಡಿ. 4ರಂದು ರಂದು ದೂರು ನೀಡಿದ್ದರು.

Accused  Muthanna Basarikodi arrested by Athani police
ಪತ್ರಿಕಾ ಪ್ರಕಟಣೆ

ಇದನ್ನೂ ಓದಿ: ಊಟ ಕೊಡಿಸ್ತೀನೆಂದು ಆಕೆಯನ್ನೇ ತಿಂದುಂಡರು.. ಜಿಲ್ಲಾಸ್ಪತ್ರೆ ಕಾಮುಕ ಮತ್ತವನ ಗ್ಯಾಂಗ್‌ನ ರಾಕ್ಷಸಿ ಕೃತ್ಯ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಥಣಿ ಪಿಎಸ್​ಐ ಕುಮಾರ ಹಾಡಕಾರ ಅವರು ಐಪಿಸಿ 420, 504, 506 ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಮುತ್ತಣ್ಣ ಬಸರಿಕೋಡಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯ ಪತ್ತೆಗಾಗಿ ಬೆಳಗಾವಿ ಪೊಲೀಸ್​ ಅಧೀಕ್ಷಕರು ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್​ ಅಧೀಕ್ಷಕರು ಅಮರನಾಥ ರೆಡ್ಡಿ, ಅಥಣಿ ಡಿಎಸ್​ಪಿ ಎಸ್.ವಿ ಗಿರೀಶ್ ಮತ್ತು ಸಿಪಿಐ ಶಂಕರಗೌಡ ಬಸನಗೌಡರ ಅವರ ಮಾರ್ಗದರ್ಶನದ ಮೇರೆಗೆ ಪಿಎಸ್ ಐ ಕುಮಾರ ಹಾಡಕಾರ ಮತ್ತು ಸಿಬ್ಬಂದಿಗಳಾದ ಎಸ್​ಜಿಜಿ ಮನ್ನಾಪೂರ, ಆರ್ ಸಿ ಹಾದಿಮನಿ, ಕೆ ಬಿ ಸಿರಗೂರ ಇವರ ತಂಡ ರಚಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Last Updated : Dec 6, 2020, 3:37 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.