ಚಿಕ್ಕೋಡಿ: ಗುಟ್ಕಾ ಜಗಿದು ರಸ್ತೆಯಲ್ಲಿ ಉಗುಳಿದ ಸಾಗರ್ ಎಂಬ ಯುವಕನಿಗೆ ನಿಪ್ಪಾಣಿ ಪೌರಾಯುಕ್ತ ಮಹಾವೀರ ಬೊರನ್ನವರ ಅವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು, ಬಟ್ಟೆ ಬಿಚ್ಚಿಸಿ ಆತನ ಕೈಯಲ್ಲೇ ಅದನ್ನು ಸ್ವಚ್ಛಗೊಳಿಸಿದ್ದಾರೆ.
ಕೊರೊನಾ ವೈರಸ್ ತಡೆಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ರಸ್ತೆಯಲ್ಲಿ ಯಾರೂ ಏನನ್ನೂ ಉಗುಳಬಾರದು ಎಂದು ಕಟ್ಟಾಜ್ಞೆ ವಿಧಿಸಿದೆ. ಆದರೂ ಕೆಲವರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ವರ್ತಿಸುತ್ತಿರುವುದು ಬೇಸರದ ಸಂಗತಿ.
ರಸ್ತೆಯಲ್ಲಿ ಉಗುಳಿದ ಮತ್ತೊಬ್ಬನಿಗೂ ಪೌರಾಯುಕ್ತರು ಅದೇ ರೀತಿ ಶಿಕ್ಷೆ ವಿಧಿಸಿದರು. ಮತ್ತೊಮ್ಮೆ ಎಲ್ಲಿಯಾದರೂ ಗುಟ್ಕಾ ಅಥವಾ ಎಂಜಲು ಉಗುಳಿದರೆ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಇಬ್ಬರಿಗೂ ಎಚ್ಚರಿಕೆ ನೀಡಿದರು.