ETV Bharat / state

ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚಿದ ಯುವಕ: ಸಾಮಾಜಿಕ ಜಾಲತಾಣದಲ್ಲಿ ಫುಲ್​​ ಫೇಮಸ್

ಕುಂಭದ್ರೋಣ ನಿದ್ರೆಯಲ್ಲಿರುವ ಅಧಿಕಾರಿಗಳಿಗೆ ನಿದ್ದೆಗೆಡಿಸಿದ ಈ ಯುವಕ ರಸ್ತೆಯಲ್ಲಿರುವ ಬೃಹತ್ ಪ್ರಮಾಣದ ಗುಂಡಿಗಳನ್ನು ಮುಚ್ಚುವ ಮೂಲಕ ಪರೋಕ್ಷವಾಗಿ ರಾಜಕಾರಣಿ, ಅಧಿಕಾರಿಗಳಿಗೆ ಛೀಮಾರಿ ಹಾಕಿದ್ದಾನೆ. ಅಷ್ಟಕ್ಕೂ ಆ ಯುವಕ ಯಾರು ಅಂತಿರಾ ಈ ಸ್ಟೋರಿ ನೋಡಿ.

author img

By

Published : Nov 11, 2019, 10:21 PM IST

ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚಿದ ಯುವಕ

ಚಿಕ್ಕೋಡಿ: ಯುವಕನೋರ್ವ ತನ್ನ ಸ್ವಂತ ಖರ್ಚಿನಲ್ಲಿ ಬೈಕ್​ ಮುಖಾಂತರ ಇಟ್ಟಿಗೆಗಳನ್ನು ತಂದು ರಸ್ತೆಗುಂಡಿಗಳನ್ನು ಮುಚ್ಚುವ ಮೂಲಕ ಸಮಾಜ ಸೇವೆಗೆ ಮುಂದಾಗಿದ್ದಾನೆ. ಈ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ನಡೆದಿದೆ.

ಯಡೂರ ಗ್ರಾಮದ ಕಿರಣ ಕೋಳಿ ಎಂಬ ಯುವಕ ರಸ್ತೆಗಳಲ್ಲಿ ಬಿದ್ದಂತಹ ಬೃಹತ್ ಪ್ರಮಾಣದ ತಗ್ಗು ಗುಂಡಿಗಳನ್ನು ಮುಚ್ಚುತ್ತಿರುವ ಯುವಕ. ಈ‌ ಮೂಲಕ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಪರೋಕ್ಷವಾಗಿ ಛೀಮಾರಿ ಹಾಕಿದ್ದಾನೆ. ಸದ್ಯ ಕಿರಣ ಕೋಳಿ ಎಂಬ ಯುವಕ ಗುಂಡಿಗಳನ್ನು ಮುಚ್ಚುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಪೋಟೋಗಳನ್ನು ನೋಡಿದ ಚಿಕ್ಕೋಡಿ ಪಟ್ಟಣದ ಸಮಾಜಸೇವಕರಾದ ಚಂದ್ರಕಾಂತ ಹುಕ್ಕೇರಿ ಅವರು ಇಂತಹ ಯುವಕರು ಮುಂದೆ ಬರಬೇಕು ಎಂದು ಪ್ರಶಂಸಿದ್ದಾರೆ.

ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚಿದ ಯುವಕ

ಇನ್ನೂ ಚಿಕ್ಕೋಡಿ ಮಿರಜ ರಸ್ತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಇಂತಹ ಗಂಭಿರ ಸಮಸ್ಯೆಯನ್ನು ಅರಿತಂತಹ ಯುವಕ ಕಿರಣ ಕೋಳಿಯು ಖಾಸಗಿ ಬ್ಯಾಂಕಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದು. ನಿನ್ನೆ ಕೆಲಸಕ್ಕೆ ರಜೆ ಇದ್ದ ಕಾರಣ ಸ್ವಂತ ಖರ್ಚಿನಲ್ಲಿ ಇಟ್ಟಿಗೆಗಳನ್ನು ಖರೀದಿಸಿ ರಸ್ತೆಗಳ ಮೇಲೆ ಬಿದ್ದಂತಹ ಗುಂಡಿಗಳನ್ನು ಮುಚ್ಚುವ ಮೂಲಕ ಪ್ರಯಾಣಿಕರಿಗೆ ಸುಖಕರ ಪ್ರಯಾಣ ಹಾಗೂ ಗುಂಡಿಗಳಿಂದ ಆಗುವ ಸ್ಯಮಸ್ಯೆಗಳನ್ನು ತೆಡೆಯಲು ಮುಂದಾಗಿದ್ದಾನೆ.

Intro:ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆದ ಯುವಕ
Body:
ಚಿಕ್ಕೋಡಿ :

ಕುಂಭದ್ರೋಣ ನಿದ್ರೆಯಲ್ಲಿರುವ ಅಧಿಕಾರಿಗಳಿಗೆ ನಿದ್ದೆಗೆಡಿಸಿದ ಈ ಯುವಕ ರಸ್ತೆಯಲ್ಲಿರುವ ಬೃಹತ್ ಪ್ರಮಾಣ ತೆಗ್ಗು ಗುಂಡಿಗಳನ್ನು ಮುಚ್ಚುವ ಮೂಲಕ ಪರೂಕ್ಷವಾಗಿಯೇ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಛಿಮಾರಿ ಹಾಕಿದ್ದಾನೆ. ಅಷ್ಟಕ್ಕೂ ಆ ಯುವಕ ಯಾರು ಅಂತಿರಾ ಹಾಗಾದರೆ ಈ ಸ್ಟೋರಿ ನೋಡಿ....

ರಸ್ತೆಗಳಲ್ಲಿ ಬ್ರಹತ್ ತೆಗ್ಗು ಗುಂಡಿಗಳು ಜೀವವನ್ನು ಕೈಯಲ್ಲಿ ಹಿಡಿದು ಪ್ರಯಾಣಿಸುತ್ತಿರುವ ಗಡಿ ಭಾಗದ ಪ್ರಯಾಣಿಕರು. ಇಟ್ಟಿಗೆಗಳ ಮೂಲಕ ಗುಂಡಿಗಳನ್ನು ಮುಚ್ಚುತ್ತಿರುವ ಯುವಕ ಹೌದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಕಿರಣ ಕೋಳಿ ಎಂಬ ಯುವಕ ರಸ್ತೆಗಳಲ್ಲಿ ಬಿದ್ದಂತಹ ಬೃಹತ್ ಪ್ರಮಾಣದ ತೆಗ್ಗುಗಳಿಂದ ಪ್ರಯಾಣಿಕರಿಗೆ ಜೀವಹಾನಿ ಆಗಬಾರದು ಹಾಗೂ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಗಮನ ಸೆಳೆಯಲು ಸ್ಚಖರ್ಚಿನಲ್ಲಿ ಬೈಕನ ಮುಖಾಂತರ ಇಟ್ಟಿಗೆಗಳನ್ನು ತಂದು ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚುವ ಮೂಲಕ ಸಮಾಜಸೇವೆಗೆ ಮುಂದಾಗಿದ್ದಾನೆ.

ಈ‌ ಮೂಲಕ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಪರೋಕ್ಷವಾಗಿ ಛಿಮಾರಿ ಹಾಕಿದ್ದಾನೆ. ಸದ್ಯ ಕಿರಣ ಕೋಳಿ ಎಂಬ ಯುವಕ ಗುಂಡಿಗಳನ್ನು ಮುಚ್ಚುವ ಪೋಟೋಸಗನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಈ ಪೋಟೋಗಳನ್ನು ನೋಡಿದ ಚಿಕ್ಕೋಡಿ ಪಟ್ಟಣದ ಸಮಾಸೇವಕರಾದ ಚಂದ್ರಕಾಂತ ಹುಕ್ಕೇರಿ ಅವರು ಇಂತಹ ಯುವಕರು ಮುಂದೆ ಬರಬೇಕು ಎಂದು ಪ್ರಶಂಶಿಸಿದ್ದಾರೆ.

ಬೈಟ್ 1 : ಚಂದ್ರಕಾಂತ ಹುಕ್ಕೇರಿ - ಸಮಾಜ ಸೇವಕರು ಚಿಕ್ಕೋಡಿ

ಇನ್ನೂ ಚಿಕ್ಕೋಡಿ ಮಿರಜ ರಸ್ತೆಯ ಮೇಲೆ ಸಾಕಷ್ಟು ಪ್ರಮಾಣದಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಇತ್ತೀಚಿಗೆ ಕೃಷ್ಣಾನದಿಗೆ ಪ್ರವಾಹದಿಂದ ತಗ್ಗುಗಳ ಸಂಖ್ಯೆ ಹೆಚ್ಚಾಗಿವೆ. ಆದರೆ, ಅಧಿಕಾರಿಗಳು ಹಾಗೂ ಜನಪ್ರನಿಧಿಗಳಿಗೆ ನಿರ್ಲಕ್ಷಕ್ಕೆ ಹಿಡಿದ ಕನ್ನಡಿಯಾಗಿದೆ. ಇಂತಹ ಗಂಭಿರ ಸಮಸ್ಯೆಯನ್ನು ಅರಿತಂತಹ ಯುವಕ ಕಿರಣ ಕೋಳಿಯು ಖಾಸಗಿ ಬ್ಯಾಂಕಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದು. ನಿನ್ನೆ ಕೆಲಸಕ್ಕೆ ರಜೆ ಇದ್ದ ಕಾರಣ ಸ್ವಂತ ಖರ್ಚಿನಲ್ಲಿ ಇಟ್ಟಿಗೆಗಳನ್ನು ಖರೀದಿಸಿ ರಸ್ತೆಗಳ ಮೇಲೆ ಬಿದ್ದಂತಹ ಗುಂಡಿಗಳನ್ನು ಮುಚ್ಚುವ ಮೂಲಕ ಪ್ರಯಾಣಿಕರಿಗೆ ಸುಖಕರ ಪ್ರಯಾಣ ಹಾಗೂ ಗುಂಡಿಗಳಿಂದ ಆಗುವ ಸ್ಯಮಸ್ಯೆಗಳನ್ನು ತೆಡೆಯಲು ಮುಂದಾಗಿದ್ದಾನೆ.

ಬೈಟ್ - ಕಿರಣ ಕೋಳಿ - ರಸ್ತೆ ಗುಂಡಿಗಳನ್ನು ಮುಚ್ಚಿದ ಯುವಕ

ಒಟ್ಟಿನಲ್ಲಿ ಇಂದಿನ ಯುವಕರು ಫೇಸಬುಕ್, ವಾಟ್ಸಾಪ್ ಸೇರಿದಂತೆ ಸದಾ ಮೊಬೈಲ್ ಬ್ಯುಸಿಯಾಗಿರುವ ಇನ್ನಿತರಿಗೆ ಯುವಕರಿಗೆ ಕಿರಣ ಕೋಳಿ ಎಂಬ ಯುವಕ ಮಾದರಿಯಾಗಿದ್ದಾನೆ. ಇಂತಹ ಕೆಲಸ ಪ್ರತಿಯೊಬ್ಬ ಯುವಕ ಮೈಗೂಡಿಸಿಹೊಂಡರೆ ಭಾರತ ಸಮೃದ್ಧ ರಾಷ್ಟ್ರವಾಗುವು ನಿಶ್ಛಿತ.. ಹೀಗೆ ಕಿರಣ ಕೋಳಿ ಅವರು ಮಾಡಿದ ಒಳ್ಳೆಯ ಕೆಲಸಕ್ಕೆ ಸಾಮಾಜಿಕ‌ ಜಾಲತಣಗಳಲ್ಲಿ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.