ETV Bharat / state

ಜಾನುವಾರು ರಕ್ಷಣೆ ಮಾಡಲು ಹೋದ ವ್ಯಕ್ತಿ ಕೃಷ್ಣ ನದಿಪಾಲು

ಹುಲಗಬಾಳ ಗ್ರಾಮದ ಮಧ್ಯೆ ಕೃಷ್ಣ ನದಿ ನೀರಿನ ಪ್ರವಾಹಕ್ಕೆ ಸಿಲುಕಿ ವ್ಯಕ್ತಿವೋರ್ವ ಸಾವನ್ನಪ್ಪಿದ್ದಾನೆ. ಮೃತನ ಶವ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿ ವರ್ಷ ಇಂತಹ ಅವಘಡಗಳು ಸಂಭವಿಸುತ್ತವೆ. ಆದ್ರೆ ನಮ್ಮ ಗೋಳನ್ನು ಯಾರೂ ಕೇಳುತ್ತಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

author img

By

Published : Aug 5, 2019, 6:07 PM IST

ಜಾನುವಾರು ರಕ್ಷಣೆ ಮಾಡಲು ಹೋದ ವ್ಯಕ್ತಿ ನೀರು ಪಾಲು

ಚಿಕ್ಕೋಡಿ: ಕೃಷ್ಣಾ ನದಿಯ ಪ್ರವಾಹಕ್ಕೆ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ವ್ಯಕ್ತಿವೋರ್ವ ಸಾವನ್ನಪ್ಪಿದ್ದಾನೆ.

ಮಾರುತಿ ಹರಿಬಾ ಜಾಧವ್ (52) ಮೃತ ವ್ಯಕ್ತಿ. ನಿನ್ನೆ ಪ್ರವಾಹ ಹೆಚ್ಚಾಗಿದ್ದರಿಂದ ತನ್ನ ಕುಟುಂಬವನ್ನು ಬೇರೆಡೆಗೆ ಸ್ಥಳಾಂತರಿಸಿದ್ದ. ಆದರೆ, ಜಾನುವಾರುಗಳನ್ನು ಸ್ಥಳಾಂತರಿಸಲಿಲ್ಲ. ಈ ಕಾರಣಕ್ಕೆ ಮತ್ತೆ ಜಾನುವಾರುಗಳನ್ನು ಕಾಪಾಡಲು ಜಲಾವೃತವಾಗಿದ್ದ ತನ್ನ ತೋಟಕ್ಕೆ ಈಜಿಕೊಂಡು ಹೋಗುತ್ತಿರುವಾಗ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದ.

ಜಾನುವಾರು ರಕ್ಷಣೆ ಮಾಡಲು ಹೋದ ವ್ಯಕ್ತಿ ನೀರು ಪಾಲು

ಇಂದು ಮೃತದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕೃಷ್ಣಾ ನದಿಯಿಂದ ಹೊರತೆಗೆದಿದ್ದಾರೆ. ಇನ್ನು ಹುಲಗಬಾಳ ಗ್ರಾಮದ ಮಧ್ಯೆದಲ್ಲಿ ಮಾರುತಿಯ ಶವ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿ ವರ್ಷ ಇಂತಹ ಅವಘಡಗಳು ಸಂಭವಿಸುತ್ತಲೇ ಇವೆ. ಇದಕ್ಕೆ ಯಾರು ಜವಾಬ್ದಾರರು. ನಮಗೆ ಪರಿಹಾರ ಕೊಡಿ ಎಂದು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Intro:ಕೃಷ್ಣೆಯ ಪ್ರವಾಹ ಪ್ರಹಾರಕ್ಕೆ ಮೊದಲ ಬಲಿ : ಡಿಸಿ ಬರೊವರಿಗೂ ಹೆಣ ಮುಟ್ಟಲು ಬಿಡುವುದಿಲ್ಲ
Body:
ಚಿಕ್ಕೋಡಿ :

ದನಕರುಗಳಿಗೆ ಮೇವು ನೀಡಲು ಹೋಗಿ ಬಿಲಿಯಾಯ್ತು ಅಮಾಯಕ ಜೀವ, ಕೃಷ್ಣೆಯ ಪ್ರವಾಹ ಪ್ರಹಾರಕ್ಕೆ ಮೊದಲ ಬಲಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕ ಹುಲಗಬಾಳಿ ಗ್ರಾಮದ ಮಾಂಗ ತೋಟದ ವಸತಿಯಲ್ಲಿ ನಡೆದಿದೆ.

ಮಾರುತಿ ಹರಿಬಾ ಜಾಧವ್ (೫೨) ಮೃತ ವ್ಯಕ್ತಿ,
ನಿನ್ನೆ ಜಾನುವಾರುಗಳನ್ನು ಬಿಟ್ಟು ಕೇವಲ ಮಾರುತಿ ಕುಟುಂಬವನ್ನಷ್ಟೆ ಸ್ಥಳಾಂತರಿಸಿದ್ದ ಜಿಲ್ಲಾಡಳಿತ, ಜಾನುವಾರು ತೋಟದ ವಸತಿಯಲ್ಲೆ ಇದ್ದದ್ದರಿಂದ ತೋಟಕ್ಕೆ ಈಜಿ ಹೋಗಿದ್ದ ಮಾರುತಿ, ಆದರೆ, ನೀರಿನ ರಭಸಕ್ಕೆ ಕೊಚ್ಚಿ ಹೋದ ಮಾರುತಿ ಜಾಧವ್,

ಮಾರುತಿ ಜಾಧವ್ ಕುಟುಂಬಸ್ಥರಿಂದ ಮುಗಿಲು ಮುಟ್ಟಿದ ಆಕ್ರಂದನ, ಮಾರುತಿ ಮೃತ ದೇಹ ಹೊರ ತೆಗೆದ ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ. ಕೃಷ್ಣಾ ನದಿಯಿಂದ ಹೊರ ತೆಗೆದ ದಡಕ್ಕೆ ತಂದ ಗ್ರಾಮಸ್ಥರು.

ಹುಲಗಬಾಳ ಗ್ರಾಮದ ಮಧ್ಯದಲ್ಲಿ ಮಾರುತಿ ಹೆಣ ಇಟ್ಟು ಪ್ರತಿಭಟನೆ. ಪ್ರತಿ ವರ್ಷ ಇದೇ ಗತಿಯಾದರೆ ಯಾರು ಜವಾಬ್ದಾರರು ನಮ್ಮಗೆ ಪರಿಹಾರ ಒದಗಿಸಿ ಕೊಡಿ ಸ್ಥಳಕ್ಕೆ ಬೆಳಗಾವಿ ಡಿಸಿ ಬೊಮ್ಮನಹಳ್ಳಿ ಬರುವವರೆಗೆ ಹೆಣ ಮುಟ್ಟಲು ಬಿಡುವುದಿಲ್ಲ ನಮ್ಮಗೆ 10 ಲಕ್ಷ ಪರಿಹಾರ ನೀಡಬೇಕು ಎಂದು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಬೈಟ್ 1 : ನಾಗರಾಜ ಕಾಂಬಳೆ ಹುಲಗಬಾಳ ಗ್ರಾಮಸ್ಥರು

ಬೈಟ್ 2 : ರಾಜಮಾ ಶೇಖ್ ಹುಲಗಬಾಳ ಗ್ರಾಮಸ್ಥೆ

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.