ETV Bharat / state

ಚಿಕ್ಕೋಡಿ: ಸ್ವಂತ ಬಾವಿಯಿಂದ ನೀರು ಸರಬರಾಜು ಮಾಡಿ ಜನರ ದಾಹ ತೀರಿಸುತ್ತಿರುವ ಆಧುನಿಕ ಭಗೀರಥ...! - ನೀರಿನ ಸಮಸ್ಯೆ

ಸುಮಾರು 15 ತಿಂಗಳುಗಳಿಂದ ರೈತರೊಬ್ಬರು ತಮ್ಮ ಜಮೀನಿನ ಬಾವಿಯಿಂದ ಗ್ರಾಮದ ಜನರಿಗೆ ನೀರು ಸರಬರಾಜು ಮಾಡುತ್ತಿದ್ದು, ಗ್ರಾಮದಲ್ಲಿನ ನೀರಿನ ಸಮಸ್ಯೆ ಪರಿಹರಿಸಿದ್ದಾರೆ.

ಆಧುನಿಕ ಭಗೀರಥ
ಆಧುನಿಕ ಭಗೀರಥ
author img

By

Published : Jun 13, 2023, 9:00 AM IST

Updated : Jun 13, 2023, 2:11 PM IST

ಸ್ವಂತ ಬಾವಿಯಿಂದ ನೀರು ಸರಬರಾಜು ಮಾಡುತ್ತಿರುವ ದಾನಿ

ಚಿಕ್ಕೋಡಿ: ಮಳೆಗಾಲ ಆರಂಭವಾದರೂ ಉತ್ತರ ಕರ್ನಾಟದಲ್ಲಿ ಮಾತ್ರ ಬರಗಾಲದ ಛಾಯೆ ಕಾಣ್ತಿದೆ. ಜೀವಜಲಕ್ಕಾಗಿ ಜನರು ಸೇರಿದಂತೆ ಜಾನವಾರುಗಳಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆಗಳಂತೂ ಸಂಪೂರ್ಣವಾಗಿ ಒಣಗಿ ಹೋಗಿ ಮಳೆರಾಯನ ಆಗಮನಕ್ಕಾಗಿ ರೈತಾಪಿ ವರ್ಗ ಎದುರು ನೋಡುತ್ತಿದೆ. ಚಿಕ್ಕೋಡಿ ಉಪವಿಭಾಗದ ಬಹುತೇಕ ಹಳ್ಳಿಗಳಿಗೆ ಬರದ ಛಾಯೆ ಎದ್ದು ಕಾಣ್ತಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಬೆಳೆಗಳು ನಾಶವಾದರೂ ಪರವಾಗಿಲ್ಲ ಆದರೆ, ಊರ ಜನ ಜಾನುವಾರುಗಳಿಗೆ ಯಾವುದೇ ಅನಾನುಕೂಲವಾಗದು ಎಂದು ತಮ್ಮ ಬಾವಿಯ ನೀರನ್ನು ನೀಡಿ ಗ್ರಾಮದ ಜನತೆ ಪಾಲಿಗೆ ಆಧುನಿಕ ಭಗೀರಥ ಆಗಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ರೈತ ಆಶೋಕ ನರೋಟ್ಟಿ ಎಂಬುವವರು ಇಡೀ ಸಂಬರಗಿ ಗ್ರಾಮಕ್ಕೆ ನೀರು ಸರಬರಾಜು ಮಾಡಿ ಆಧುನಿಕ ಭಗೀರಥ ಎನ್ನಿಸಿಕೊಂಡಿದ್ದಾರೆ. ಈಗಾಗಲೇ ಅಥಣಿ ಭಾಗದ ಅನೇಕ ಹಳ್ಳಿಗಳಿಗೆ ಕುಡಿಯಲು ನೀರು ಸಿಗ್ತಿಲ್ಲ. ಹೀಗಾಗಿ ಅಂತಹ ಪರಿಸ್ಥಿತಿ ಸಂಬರಗಿ ಗ್ರಾಮಕ್ಕೆ ಒದಗಬಾರದು ಎಂಬ ಹಿನ್ನೆಲೆಯಲ್ಲಿ ಅಶೋಕ ನರಹಟ್ಟಿ ಅವರು ತಾವು ಬೆಳೆದ ಎರಡು ಎಕರೆ ಪ್ರದೇಶಗಳಲ್ಲಿ ಬೆಳೆದ ಬೆಳೆಗಳನ್ನು ಒಣಗಿಸಿ ಊರಿಗೆ ನೀರು ಸರಬರಾಜು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎನ್ನುತ್ತಿದ್ದಾರೆ ಸಂಬರಗಿ ಗ್ರಾಮಸ್ಥರು.

ಕಳೆದ ಕೆಲದಿನಗಳಿಂದ‌ ನೀರಿಗಾಗಿ ಜನರು‌‌ ಕಷ್ಟಪಡ್ತಿದ್ದಾರೆ. ಮುಂಗಾರು ಸೇರಿದಂತೆ‌ ಮಳೆರಾಯ ರೈತನ ಕೈಬಿಟ್ಟಿದೆ. ಹೀಗಾಗಿ ಅಥಣಿ ತಾಲೂಕಿನಾದ್ಯಂತ ದನಕರುಗಳಿಗೂ ಸರಿಯಾದ ನೀರು ಸಿಗ್ತಿಲ್ಲ. ಹೀಗಾಗಿ ತಮ್ಮ ಹೊಲದಲ್ಲಿ ಬೆಳೆದಿದ್ದ ಕಬ್ಬು ಸೇರಿದಂತೆ ಇನ್ನಿತರ ಬೆಳೆಗಳು ನಾಶವಾದ್ರೂ ಪರ್ವಾಗಿಲ್ಲ. ಜನ ಜಾನುವಾರುಗಳು ನೀರಿಲ್ಲದೇ ಪರದಾಡುವಂತಾಗಬಾರದು ಎಂಬ ಉದ್ದೇಶದಿಂದ ಅಶೋಕ ನರೋಟ್ಟಿಯವರು ಸಂಬರಗಿ ಗ್ರಾಮಕ್ಕೆ ನೀರು ಒದಗಿಸಿ ಆಧುನಿಕ ಭಗೀರಥ ಆಗಿದ್ದಾರೆ.

ಒಟ್ಟಿನಲ್ಲಿ ಎಲ್ಲವೂ ನನಗೆ ಸಿಗಲಿ. ನಾನೊಬ್ಬನೇ ಚೆನ್ನಾಗಿರಬೇಕು ಎನ್ನುವವರ ಮಧ್ಯದಲ್ಲಿ ತಮ್ಮ ಜಮೀನಿನ ಬೆಳೆಗಳು ಹಾಳಾದರೂ ಪರವಾಗಿಲ್ಲ. ಆದ್ರೆ ಊರ ಜನರು‌ ಮಾತ್ರ ನೀರಿಲ್ಲದೇ ಪರದಾಡಬಾರದು ಎನ್ನುವ ಕಾಳಜಿ ಹೊಂದಿರುವ ಅಶೋಕ ನರೋಟ್ಟಿಯವರಿಗೆ ಮಾನವೀಯ ಕಾರ್ಯಕ್ಕೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಅಶೋಕ್​ ನರೋಟ್ಟಿಯವರು ಮಾತನಾಡಿ, ಊರಲ್ಲಿ ನೀರಿನ ಸಮಸ್ಯೆ ಎದುರಾಗಿದ್ದರಿಂದ ಕಳೆದ ಒಂದುವರೆ ವರ್ಷದಿಂದ ನಮ್ಮ ಜಮೀನ ಬಾವಿಯಿಂದ ಜನರಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಊರಿನಲ್ಲಿ ಧನ ಕರುಗಳಿಗೆ ಕುಡಿಯಲು ನೀರಿಲ್ಲದಂತಾಗಿತ್ತು. ಹಾಗಾಗಿ ನಮ್ಮ ಬಾವಿಯಿಂದ ನೀರು ಕೊಡುತ್ತಿದ್ದೇನೆ. ಇದರಿಂದ ನನಗೆ ಸಂತೋಷವಿದೆ. ಪ್ರತಿಯೊಬ್ಬರು ಈ ರೀತಿ ತಮ್ಮ ಜಮೀನಿನಲ್ಲಿರುವ ಬಾವಿಗಳಲ್ಲಿನ ನೀರು ಕೊಡುವುದರಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದು ಹೇಳಿದರು.

ಈ ಬಗ್ಗೆ ಸ್ಥಳೀಯ ಶಿವಾಜಿ ಸತ್ತಪುತಿ ಮಾತನಾಡಿ, ಸುಮಾರು 15 ತಿಂಗಳಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಇದನ್ನು ಕಂಡ ಅಶೋಕ್​ ಅವರು ನನ್ನ ಜಮೀನಲ್ಲಿರುವ ಕಬ್ಬು ಬೆಳೆಯನ್ನು ಒಣಗಿಸಿ ನೀರುವ ಬಿಡುವುದಾಗಿ ಹೇಳಿದರು. ಇದರಿಂದ ನಿಮಗ ನಷ್ಟ ಸಂಭವಿಸುತ್ತದೆ ಎಂದು ಜನರು ಹೇಳಿದರೆ. ಆದರೆ ಆಗಲಿ ಗ್ರಾಮಕ್ಕೆ ನೀರು ಮುಖ್ಯ ಎಂದು ಹೇಳಿ ಸುಮಾರು 15 ತಿಂಗಳಿಂದ ಗ್ರಾಮದ ಜನರಿಗೆ ನೀರು ಕೊಡುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಿದೆ ಎಂದು ಜನ ಹೇಳಿದ್ದಾರೆ

ಇದನ್ನೂ ಓದಿ: ಬಂಟ್ವಾಳದಲ್ಲೊಬ್ಬ ಭಗೀರಥ: ಏಕಾಂಗಿಯಾಗಿ 24 ಅಡಿ ಬಾವಿ ಕೊರೆದು ನೀರು ತಂದ 17ರ ಪೋರ!

Last Updated : Jun 13, 2023, 2:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.