ETV Bharat / state

ಅಂಧತ್ವಕ್ಕೆ ಸವಾಲು ಹಾಕಿ ಜೀವನ ಗೆದ್ದ ಬೆಳಗಾವಿ ಯುವಕ; ಇವರ ಸಾಧನೆಗೆ ನೀವೂ ಹುಬ್ಬೇರಿಸುತ್ತೀರಿ ಖಂಡಿತ! - ಬೆಳಗಾವಿ ಮಹಾನಗರ ಪಾಲಿಕೆ

ಅಂಧತ್ವಕ್ಕೆ ಸವಾಲು ಹಾಕಿ, ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು, ಕಂಪ್ಯೂಟರ್ ಮೇಲೆ ಪ್ರಭುತ್ವ ಸಾಧಿಸುವ ಮೂಲಕ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ ಸುಮಿತ್ ಮೋಟೆಕರ್.

Blind man story
ಅಂಧತ್ವಕ್ಕೆ ಸವಾಲು ಹಾಕಿ ಜೀವನ ಗೆದ್ದ ಬೆಳಗಾವಿ ಯುವಕ
author img

By

Published : Jul 8, 2023, 3:33 PM IST

ಅಂಧತ್ವಕ್ಕೆ ಸವಾಲು ಹಾಕಿ ಜೀವನ ಗೆದ್ದ ಬೆಳಗಾವಿ ಯುವಕ

ಬೆಳಗಾವಿ: ನಿರಂತರ ಪರಿಶ್ರಮ, ಶ್ರದ್ಧೆ ಇದ್ದರೆ 'ಅಂಧತ್ವ' ಅಡ್ಡಿಯಾಗುವುದಿಲ್ಲ. ಎಂತಹ ಸವಾಲುಗಳನ್ನು ಕೊಟ್ಟರೂ ಕೂಡ ಅಂದುಕೊಂಡಿದ್ದನ್ನು ಸಾಧಿಸಬಹುದು. ಈ ಮಾತನ್ನು ಬೆಳಗಾವಿ ಮೂಲದ ಅಂಧ ಯುವಕ ಸಾಬೀತು ಮಾಡಿ ತೋರಿಸಿದ್ದಾರೆ. ಎಲ್ಲ ಅಂಗಾಂಗಗಳು ಸರಿ ಇದ್ದರೂ ಅದೇಷ್ಟೋ ಜನರಿಗೆ ಕಂಪ್ಯೂಟರ್ ನಿರ್ವಹಣೆ ಮಾಡಲು ಬರುವುದಿಲ್ಲ. ಆದರೆ, ಈ ಯುವಕ ಅಂಧತ್ವಕ್ಕೆ ಸವಾಲು ಹಾಕಿ, ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು, ಕಂಪ್ಯೂಟರ್ ಮೇಲೆ ಪ್ರಭುತ್ವ ಸಾಧಿಸುವ ಮೂಲಕ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದಾರೆ.

ಹೌದು. ಕಣ್ಣು ಕಾಣಿಸದಿದ್ದರೂ ಸರಾಗವಾಗಿ ಕಂಪ್ಯೂಟರ್​ನಲ್ಲಿ ಟೈಪಿಂಗ್​ ಮಾಡುತ್ತಾ ಇತರರಿಗೆ ಮಾದರಿಯಾಗಿರುವ ಯುವಕ ಕರದಂಟು ನಾಡು ಗೋಕಾಕಿನ ಸುಮಿತ್ ಮೋಟೆಕರ್. ಬೆಳಗಾವಿ ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ)ರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅಂಧತ್ವಕ್ಕೆ ಸವಾಲು ಹಾಕಿ ಸರ್ಕಾರಿ ನೌಕರಿ ಮಾಡುತ್ತಿದ್ದಾರೆ.

‘ನಾನ್ ಡೆಸ್ಕ್ ಟಾಪ್ ವಿಶುವಲ್ ಎಕ್ಸಲ್’ ಎಂಬ ಅಪ್ಲಿಕೇಶನ್ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವ ಸುಮಿತ್, ಕಂಪ್ಯೂಟರ್ ಆನ್ ಮಾಡುವುದು, ಕಡತಗಳನ್ನು ತೆರೆಯುವುದು, ಯಾವ ಕಡತವನ್ನು ಎಡಿಟ್ ಮಾಡಬೇಕು ಎಂಬುದನ್ನು ಅಪ್ಲಿಕೇಶನ್ ಸಹಾಯದಿಂದ ಮಾಡುತ್ತಿದ್ದಾರೆ. ಅವರ ಮೊಬೈಲ್‌ಗೆ ಅಧಿಕಾರಿಗಳು ಕರೆ ಮಾಡಿದರೆ ಯಾವ ಅಧಿಕಾರಿಗಳು ಕರೆ ಮಾಡಿದ್ದಾರೆ ಎಂಬುದನ್ನು ತಿಳಿಯುವುದಕ್ಕೆ ‘ಮೊಬೈಲ್ ಟಾಕ್‌ಬ್ಯಾಕ್‌‘ ಅಪ್ಲಿಕೇಶನ್ ಅಳವಡಿಸಿಕೊಂಡಿದ್ದಾರೆ. ಈ ಆ್ಯಪ್ ಮೂಲಕ ತಮ್ಮ ಮೊಬೈಲ್ ಗೆ ಬಂದ ಕರೆಗಳನ್ನು ಬೇರೆ ಯಾರ ಸಹಾಯ ಪಡೆದುಕೊಳ್ಳದೇ ಸ್ವತಃ ತಾವೇ ಸೇವ್ ಮಾಡಿಕೊಳ್ಳುತ್ತಾರೆ.

ಕಚೇರಿಯ ಪತ್ರಗಳನ್ನು ಟೈಪ್ ಮಾಡುವುದು, ಕಚೇರಿಯ ಇತರ ಆನ್‌ಲೈನ್ ಅಪ್‌ಡೇಟ್ ಕೆಲಸವನ್ನು ಲೀಲಾಜಾಲವಾಗಿ ಮಾಡುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ್ದ ಸುಮಿತ್ ಅವರು, 2021ರಲ್ಲಿ ಎಸ್‌ಡಿಎ ಆಗಿ ನೇಮಕಗೊಂಡಿದ್ದಾರೆ. ಇದಕ್ಕೂ ಮೊದಲು ಬೆಂಗಳೂರಿನಲ್ಲಿ ‘ಕಂಪ್ಯೂಟರ್ ಇನ್ ಅಡ್ವಾನ್ಸ್ ಕೋರ್ಸ್’ ತರಬೇತಿಯಲ್ಲಿ ಕಂಪ್ಯೂಟರ್ ಆಪ್ಲಿಕೇಶನ್ ಬಗ್ಗೆ ತರಬೇತಿ ಪಡೆದಿದ್ದಾರೆ. ಎಕ್ಸ್‌ಎಲ್ ಅಡ್ವಾನ್ಸ್, ಎಂಎಸ್ ವರ್ಡ್​ ಅಡ್ವಾನ್ಸ್, ಇತರ ಅಪ್ಲಿಕೇಶನ್‌ಗಳ ಬಗ್ಗೆ ಆರು ತಿಂಗಳು ತರಬೇತಿ ಪಡೆದಿರುವ ಸುಮಿತ್ ಆರಾಮವಾಗಿ ಕಚೇರಿ ಕೆಲಸ ಮಾಡುತ್ತಾ, ಸ್ವತಂತ್ರವಾಗಿ ತಮ್ಮ ಜೀವನದ ಬಂಡಿ‌ ಸಾಗಿಸುತ್ತಿದ್ದಾರೆ.

ಬಹುಮುಖ ಪ್ರತಿಭೆ: ಎಸ್‌ಡಿಎ ಆಗುವ ಮೊದಲು ಸುಮಿತ್ ಅವರು ಹೈದರಾಬಾದ್ ಹಾಗೂ ದೆಹಲಿಯಲ್ಲಿ ಹಿಂದೂಸ್ತಾನ್ ಕಂಪ್ಯೂಟರ್ ಸೆಂಟರ್ ಲಿಮಿಟೆಡ್‌ನಲ್ಲಿ ಅಸೋಸಿಯೇಟ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ಎರಡು ವರ್ಷ ಮಾನವ ಸಂಪನ್ಮೂಲ (ಎಚ್‌ಆರ್‌ಎ) ವಿಭಾಗದಲ್ಲೂ ಸೇವೆ ಸಲ್ಲಿಸಿದ್ದಾರೆ. ಇನ್ನು ರಾಷ್ಟ್ರಮಟ್ಟ ಮಟ್ಟದ ಅಂಧರ ಕ್ರೀಡಾಕೂಟದಲ್ಲಿ ಎರಡು ಬಾರಿ ಫುಟ್‌ಬಾಲ್ ಪಂದ್ಯಾವಳಿ, ಲಕ್ನೋದಲ್ಲಿ ನಡೆದ ಅಂಧರ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಜುಡೋ (ಮಲ್ಲಯುದ್ಧ)ದಲ್ಲಿ ಕರ್ನಾಕಟ ರಾಜ್ಯ ಪ್ರತಿನಿಧಿಸಿದ್ದ ಹೆಗ್ಗಳಿಕೆ ಇವರದ್ದು. ಸಾಹಿತ್ಯ ಕ್ಷೇತ್ರದಲ್ಲೂ ಆಸಕ್ತಿ ಹೊಂದಿದ್ದು, ಲಲಿತ ಪ್ರಬಂಧ, ಕಥೆ, ಕಾದಂಬರಿ ಬರೆದಿದ್ದಾರೆ. ಅವುಗಳನ್ನು ಪ್ರಕಟಣೆ ಮಾಡುವ ಕನಸು ಕಂಡಿದ್ದಾರೆ.

ಇಂತಹ ವಿಶೇಷ ಚೇತನ ವ್ಯಕ್ತಿ ನಮ್ಮ ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಸಾಮಾನ್ಯರಂತೆ ಕರ್ತವ್ಯ ನಿರ್ವಹಿಸುತ್ತಿರುವುದು ನೋಡಿ ಖುಷಿ ಆಗುತ್ತಿದೆ. ಇನ್ನುಳಿದ ಸಿಬ್ಬಂದಿಗಳಿಗೂ ಅವರು ಪ್ರೇರಣೆ ಎಂದು ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಈಟಿವಿ ಜೊತೆಗೆ ಮಾತನಾಡಿ ಹರ್ಷ ವ್ಯಕ್ತಪಡಿಸಿದರು.

ಸಹೋದ್ಯೋಗಿ ಉಜ್ವಲಾ ಹಂಗರಗೇಕರ್ ಮಾತನಾಡಿ, ಸುಮಿತ್ ಸಾಮಾನ್ಯರಂತೆ ಒಳ್ಳೆಯ ಕೆಲಸ ಮಾಡುತ್ತಾರೆ. ಈ ರೀತಿ‌‌ ಕೆಲಸ ಮಾಡುವುದು ತೀರಾ ಅಪರೂಪ. ಅವರ ಜೊತೆ ಕೆಲಸ ಮಾಡುವುದಕ್ಕೆ ನಮಗೂ ಬಹಳ ಖುಷಿಯಾಗುತ್ತದೆ ಎಂದು ಹೇಳಿದರು. ಬಳಿಕ ಸುಮಿತ್​ ಮಾತನಾಡಿ, ಟೆಕ್ನಾಲಜಿ ಬಹಳ ಬೆಳೆದು ಬಿಟ್ಟಿದೆ. ಟೆಕ್ನಾಲಜಿ ಸಹಾಯದಿಂದ ನನಗೆ ಕೆಲಸ ಮಾಡಲು ಯಾವುದೇ ರೀತಿ ತೊಂದರೆ ಆಗುತ್ತಿಲ್ಲ. ನನ್ನ ಸಹೋದ್ಯೋಗಿಗಳು ಕೂಡ ಒಳ್ಳೆಯ ರೀತಿ ಸಹಕಾರ ಕೊಡುತ್ತಿದ್ದಾರೆ. ಬೆಳಗಾವಿಯಲ್ಲೇ ಮನೆ ಮಾಡಿದ್ದೇನೆ. ನಾನು ಸ್ವತಂತ್ರವಾಗಿ ಓಡಾಡುತ್ತಿದ್ದೇನೆ" ಎಂದರು. ಒಟ್ಟಾರೆಯಾಗಿ ಇವರು ವಿಶೇಷ ರೀತಿಯಲ್ಲಿ ಕೆಲಸ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಇದನ್ನೂ ಓದಿ: ಅಂಧತ್ವ ಮೆಟ್ಟಿ ನಿಂತ ಪಾಕ ಪ್ರವೀಣೆ: ಅಡುಗೆ ಯೂಟ್ಯೂಬ್ ಚಾನೆಲ್ ಆರಂಭಿಸಿದ ದೇಶದ ಮೊದಲ ಅಂಧ ಮಹಿಳೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.