ಬೆಳಗಾವಿ : ಅಜ್ಜನ ಜೊತೆ ಈಜು ಕಲಿಯಲು ಹೋಗಿದ್ದ ಬಾಲಕ ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪೇಟೆಬಸವಣ್ಣ ಓಣಿಯ ಸಿದ್ಧಾರೂಢ ಮಂಜುನಾಥ ಗಾಣಗಿ (8) ಮೃತ ಬಾಲಕ.
ಇಂದು ಬೆಳಗಿನ ಜಾವ ಅಜ್ಜನ ಜೊತೆಗೆ ಈಜು ಕಲಿಯಲು ಸಿದ್ಧಾರೂಢ ಹೋಗಿದ್ದನು. ಈ ವೇಳೆ, ಬೆನ್ನಿಗೆ ಪ್ಲಾಸ್ಟಿಕ್ ಡಬ್ಬಿ ಕಟ್ಟಿಕೊಂಡು ಬಾಲಕ ನೀರಿಗೆ ಇಳಿದಿದ್ದನು. ಆದರೆ, ಬಾವಿಯಲ್ಲಿ ಈಜುವಾಗಲೇ ಡಬ್ಬಿ ಕಳಚಿದ್ದರಿಂದ ನೀರಿನಲ್ಲಿ ಮುಳುಗಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಮೃತ ಬಾಲಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಮುರಗೋಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮನೆ ದೇವರ ದರ್ಶನಕ್ಕೆ ತೆರಳಿದ ಯುವಕರಿಬ್ಬರು ಅಪಘಾತದಲ್ಲಿ ದುರ್ಮರಣ..!