ಬೆಳಗಾವಿ : ದೆಹಲಿ ಮತ್ತು ಅಹಮದಾಬಾದ್ಗೆ 7 ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಡಿಕೆಯನ್ನು ಮಂಗಳೂರು ವಲಯದ ಅಧಿಕಾರಿಗಳು ನೀಡಿದ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಬೆಳಗಾವಿಯ ಕೇಂದ್ರ ವಾಣಿಜ್ಯ ಮತ್ತು ಅಬಕಾರಿ ಆಯುಕ್ತಾಲಯದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅಡಿಕೆ ಮಾರಾಟದ ಮೇಲೆ ಸರ್ಕಾರ ಶೇ.5ರಷ್ಟು ಜಿಎಸ್ಟಿ ವಿಧಿಸಿದೆ. ಆದರೆ, ಲಾರಿಗಳನ್ನು ತಡೆದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅಡಿಕೆಗೆ ಜಿಎಸ್ಟಿ ಭರಿಸದೇ ಅನಧಿಕೃತವಾಗಿ ಸಾಗಿಸುತ್ತಿರುವುದು ಗಮನಕ್ಕೆ ಬಂದಿದೆ.
ಒಟ್ಟು 7 ಕೋಟಿ ರೂಪಾಯಿ ಮೌಲ್ಯದ ಅಡಿಕೆ ಸಾಗಿಸಲಾಗುತ್ತಿತ್ತು ಎಂದು ಅಂದಾಜಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಿಂದ ಅಡಿಕೆ ತುಂಬಿಸಿಕೊಂಡು ಈ 7 ಲಾರಿಗಳು ದೆಹಲಿ ಮತ್ತು ಅಹಮದಾಬಾದ್ಗೆ ತೆರಳುತ್ತಿದ್ದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬರೋಬ್ಬರಿ 4 ಎಕರೆಯಲ್ಲಿ ತುಳಸಿ ಬೆಳೆದು ಒಳ್ಳೆ ಲಾಭ ಮಾಡ್ತಿರೋ ಮಾದರಿ ರೈತ..