ETV Bharat / state

ಕೆಪಿಟಿಸಿಎಲ್ ಪರೀಕ್ಷೆ ಅಕ್ರಮ ಪ್ರಕರಣ : ಮತ್ತೆ ಆರು ಮಂದಿ ಬಂಧನ - gokak KPTCL exam case

ಕೆಪಿಟಿಸಿಎಲ್ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಮತ್ತೆ ಆರು ಜನರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

6-more-arrested-in-kptcl-exam-scam-case
ಕೆಪಿಟಿಸಿಎಲ್ ಪರೀಕ್ಷೆ ಅಕ್ರಮ ಪ್ರಕರಣ : ಮತ್ತೆ ಆರು ಮಂದಿ ಬಂಧನ
author img

By

Published : Oct 21, 2022, 7:09 AM IST

ಬೆಳಗಾವಿ: ಗೋಕಾಕ್ ನಗರದಲ್ಲಿ ನಡೆದಿದ್ದ ಕೆಪಿಟಿಸಿಎಲ್ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗುತ್ತಿರುವ ಆರೋಪಿಗಳ ಸಂಖ್ಯೆ ಏರುತ್ತಲೇ ಇದೆ. ಪ್ರಕರಣ ಸಂಬಂಧ ಮತ್ತೆ ಆರು ಜನ ಆರೋಪಿಗಳನ್ನು ಹೆಡೆಮುರಿಕಟ್ಟಿದ್ದು, ಬಂಧಿತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬಗರನಾಳ ಗ್ರಾಮದ ಈರಣ್ಣ ಬಂಕಾಪೂರ(26), ಶಿವಾನಂದ ಕುಮೋಜಿ(22) ರಾಮದುರ್ಗ ತಾಲೂಕಿನ ಬಟಕುರ್ಕಿ ಗ್ರಾಮದ ಆದಿಲ್ ಶಾ ತಾಸೇವಾಲೆ(23), ಮೂಡಲಗಿ ತಾಲೂಕಿನ ಖಾನಟ್ಟಿ ಗ್ರಾಮದ ಮಹಾಂತೇಶ ಹೊಸಾಪೂರ(22), ನಾಗನೂರ ಗ್ರಾಮದ ಮಹಾಲಿಂಗ ಕುರಿ(30) ಹಾಗೂ ಸವದತ್ತಿ ತಾಲೂಕಿನ ಸುಂದರ ಬಾಳಿಕಾಯಿ(23)ಬಂಧಿತರು. ಬಂಧಿತ ಎಲ್ಲ ಆರೋಪಿಗಳು ಆಗಸ್ಟ್ 7ರಂದು ಗೋಕಾಕ್​ ನಗರದಲ್ಲಿ ನಡೆದಿದ್ದ ಜ್ಯೂನಿಯರ್ ಕೆಪಿಟಿಸಿಎಲ್ ಅಸಿಸ್ಟಂಟ್ ಪರೀಕ್ಷೆಯಲ್ಲಿ ಇಲೆಕ್ಟ್ರಾನಿಕ್ ಮೈಕ್ರೋಚಿಪ್ ಡಿವೈಸ್ ಗಳನ್ನು ತೆಗೆದುಕೊಂಡು ಹೋಗಿ ಪರೀಕ್ಷೆ ಬರೆದಿದ್ದಾರೆ ಎನ್ನಲಾಗಿದೆ.

ಬಂಧಿತರಿಂದ ಇಲೆಕ್ಟ್ರಾನಿಕ್ ಡಿವೈಸ್‌, ಮೈಕ್ರೋಚಿಪ್‌ ಮತ್ತು ಮೊಬೈಲ್‌ ಸೇರಿದಂತೆ ಇತರ ದಾಖಲೆ ಮತ್ತು ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಕೆಪಿಟಿಸಿಎಲ್ ಅಕ್ರಮ ಪ್ರಕರಣ: ಮತ್ತೋರ್ವ ಆರೋಪಿ ಬಂಧನ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.