ETV Bharat / state

ಕೊರೊನಾ ಮರಣ ಮೃದಂಗ: ಬೆಳಗಾವಿ ಜಿಲ್ಲೆಯಲ್ಲಿ 57 ಮಂದಿ ಶಿಕ್ಷಕರು ಕೋವಿಡ್​ಗೆ ಬಲಿ! - Belagavi news

ಕೊರೊನಾ ವೈರಸ್​​ನಿಂದಾಗಿ ಮಕ್ಕಳ ಶೈಕ್ಷಣಿಕ ಭವಿಷ್ಯ ಕುಂಠಿತವಾಗಬಾರದು ಎಂಬ ಕಾರಣಕ್ಕೆ ಮಕ್ಕಳ ಹಿತದೃಷ್ಟಿಯಿಂದ ವಿದ್ಯಾಗಮ ಎಂಬ ಯೋಜನೆಯಡಿ ಶಿಕ್ಷಕರು ಕಳೆದೊಂದು ತಿಂಗಳಿನಿಂದ ಪಾಠ ಮಾಡುತ್ತಿದ್ದರು. ಆದರೀಗ ಶಿಕ್ಷಕರ ಸಾವಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಈ ಯೋಜನೆಯಡಿ ಪಾಠ ಮಾಡಲು ಹಿಂಜರಿಯುತ್ತಿದ್ದಾರೆ.

ddpi pundalika
ಡಿಡಿಪಿಐ ಎ.ಬಿ.ಪುಂಡಲೀಕ
author img

By

Published : Oct 9, 2020, 2:28 PM IST

ಬೆಳಗಾವಿ: ವಿದ್ಯಾಗಮ ಯೋಜನೆಯಡಿ ಪಾಠ ಮಾಡುತ್ತಿದ್ದ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 18 ಹಾಗೂ ಚಿಕ್ಕೂಡಿ ಶೈಕ್ಷಣಿಕ ಜಿಲ್ಲೆಯಲ್ಲಿ 04 ಮಂದಿ ಶಿಕ್ಷಕರು ಕೊರೊನಾ‌ ವೈರಸ್​​​ನಿಂದ ಸಾವನ್ನಪ್ಪಿದ್ದಾರೆ.

ಒಟ್ಟು ಇಲ್ಲಿಯವರೆಗೆ ಜಿಲ್ಲೆಯಲ್ಲಿ 22 ಮಂದಿ ವಿದ್ಯಾಗಮ ಯೋಜನೆಯಡಿ ಪಾಠ ಮಾಡುತ್ತಿದ್ದ ಶಿಕ್ಷಕರು ಸಾವನ್ನಪ್ಪಿದ್ದಾರೆ ಎಂಬುದು ಆರೋಗ್ಯ ಇಲಾಖೆ ಮಾಹಿತಿಯಿಂದ ನೀಡಿದೆ.

ಬೆಳಗಾವಿ ಜಿಲ್ಲೆಯಲ್ಲಿ 57 ಮಂದಿ ಶಿಕ್ಷಕರು ಕೊರೊನಾಗೆ ಬಲಿ

ಕೊರೊನಾ ವೈರಸ್​​ನಿಂದಾಗಿ ಮಕ್ಕಳ ಶೈಕ್ಷಣಿಕ ಭವಿಷ್ಯ ಕುಂಠಿತವಾಗಬಾರದು ಎಂಬ ಕಾರಣಕ್ಕೆ ಮಕ್ಕಳ ಹಿತದೃಷ್ಟಿಯಿಂದ ವಿದ್ಯಾಗಮ ಎಂಬ ಯೋಜನೆಯಡಿ ಶಿಕ್ಷಕರು ಕಳೆದೊಂದು ತಿಂಗಳಿನಿಂದ ಪಾಠ ಮಾಡುತ್ತಿದ್ದರು. ಆದರೀಗ ಶಿಕ್ಷಕರ ಸಾವಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಈ ಯೋಜನೆಯಡಿ ಪಾಠ ಮಾಡಲು ಹಿಂಜರಿಯುತ್ತಿದ್ದಾರೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಇಲ್ಲಿವರೆಗೂ ಕೊರೊನಾ ಸೋಂಕಿನಿಂದ 40, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 17 ಶಿಕ್ಷಕರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 57 ಮಂದಿ ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಇವರೆಗೆ ಜಿಲ್ಲೆಯಲ್ಲಿ 3 ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ಸೋಂಕು ತಗುಲಿದೆ ಎಂದು ಹೇಳಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.