ಬೆಳಗಾವಿ: ಕೋವಿಡ್ ಭೀತಿ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಫಲಿತಾಂಶ ಸೋಮವಾರ ಹೊರಬಿದ್ದಿದೆ. ಈ ಪರೀಕ್ಷೆಯಲ್ಲಿ ಶೇ. 48.64 ಅಂಕ ಪಡೆದ ವಿದ್ಯಾರ್ಥಿಗೆ ಬಣ್ಣ ಎರಚಿ, ಶಾಲು ಹೊದಿಸಿ ಭವ್ಯ ಸತ್ಕಾರ ಮಾಡಿರುವ ಘಟನೆ ಇಲ್ಲಿನ ಬಾಂದುರ ಗಲ್ಲಿಯಲ್ಲಿ ನಡೆದಿದೆ.
ತೃತೀಯ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗೆ ಸ್ಥಳೀಯರು ಸತ್ಕಾರ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಳಗಾವಿಯ ಬಾಂದುರ ಗಲ್ಲಿಯ ಸಮರ್ಥ ಗೋವಿಲಕರ್ ಎಂಬ ವಿದ್ಯಾರ್ಥಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 48.64 ಅಂಕ ಗಳಿಸಿ ಉತ್ತೀರ್ಣನಾಗಿದ್ದಾನೆ.
ಈ ಹಿನ್ನೆಲೆಯಲ್ಲಿ ಮರಗಾಯಿ ಗ್ರೂಪ್ ನೇತೃತ್ವದಲ್ಲಿ ಸ್ಥಳೀಯರು ಸೋಮವಾರ ರಾತ್ರಿ ಸಮರ್ಥನಿಗೆ ಸನ್ಮಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕಾಲೋನಿಯಲ್ಲಿ ವಿದ್ಯಾರ್ಥಿಯ ಬ್ಯಾನರ್ ಹಾಕಿ, ಅದರ ಮುಂದೆ ನಿಲ್ಲಿಸಿ ಬಣ್ಣ ಹಚ್ಚಿದ್ದಾರೆ.