ಚಿಕ್ಕೋಡಿ(ಬೆಳಗಾವಿ): ಚಿಕ್ಕೋಡಿ ಉಪವಿಭಾಗದ ರಾಯಬಾಗ ಹಾಗೂ ಚಿಕ್ಕೋಡಿ ವಲಯಗಳ ವ್ಯಾಪ್ತಿಯಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ಅಕ್ರಮ ಕಳ್ಳಭಟ್ಟಿ ಸಾರಾಯಿ ಸಾಗಾಟ ಹಾಗೂ ದೇಸಿ ದಾರು ಸಂತ್ರಾ ಮಾರಾಟ ಕುರಿತಂತೆ ಎರಡು ಪ್ರತೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಬೆಳಗಾವಿ ಅಬಕಾರಿ ವಿಭಾಗದ ಜಂಟಿ ಆಯುಕ್ತ ಡಾ. ವೈ. ಮಂಜುನಾಥ, ಚಿಕ್ಕೋಡಿ ಅಬಕಾರಿ ಉಪ ಅಧೀಕ್ಷಕರಾದ ವಿಜಯಕುಮಾರ್ ಹಿರೇಮಠ ಹಾಗೂ ಬಸವರಾಜ್ ಕರಾಮಣ್ಣವರ ಅವರು ಅಂದಾಜು 4,00,000 ಮೌಲ್ಯದ ಕಳ್ಳಭಟ್ಟಿ ಹಾಗೂ ಸಂತ್ರಾ ವಶಪಡಿಸಿಕೊಂಡಿದ್ದಾರೆ.
ದಾಳಿ ವೇಳೆ ಆರೋಪಿ ತಪ್ಪಿಸಿಕೊಂಡಿದ್ದು, ದ್ವಿಚಕ್ರ ವಾಹನವೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.