ಬೆಳಗಾವಿ : ವೀರ ಮದಕರಿ ನಾಯಕನ ಹೆಸರಿರುವ ನಾಮಫಲಕ ಅಳವಡಿಸಿರುವ 30ಕ್ಕೂ ಹೆಚ್ಚು ಯುವಕರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಮಹಾನಗರ ಪೊಲೀಸ್ ಆಯುಕ್ತ ಕೆ ತ್ಯಾಗರಾಜನ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಿನ ಜಾವ ಕೆಲ ಯುವಕರು ನಾಮಫಲಕ ಅಳವಡಿಸಲು ಪ್ರಯತ್ನ ಮಾಡಿದ್ರು. ನಾವು ಹೋಗಿ ಬೋರ್ಡ್ನ ಸೀಜ್ ಮಾಡಿ ವಶಕ್ಕೆ ಪಡೆದಿದ್ದೇವೆ. ಮಹಾನಗರ ಪಾಲಿಕೆ ವತಿಯಿಂದ ಕೇಸ್ ದಾಖಲಿಸಿಕೊಳ್ಳಲಾಗಿದೆ. ಈಗಾಗಲೇ 34 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸಂಬಂಧಿಸಿದವರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.
ಸುಪ್ರೀಂಕೋರ್ಟ್ ಗೈಡ್‌ಲೈನ್ಸ್ ಪ್ರಕಾರ ಸಾರ್ವಜನಿಕರು ಅನುಮತಿ ಇಲ್ಲದೇ ನಾಮಫಲಕ ಹಾಕುವಂತಿಲ್ಲ. ಅನುಮತಿ ಇಲ್ಲದೇ ಹಾಕಲು ಪ್ರಯತ್ನ ಮಾಡಿದ್ರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ರು.
ಕರವೇ ಹಾಗೂ ಮದಕರಿ ನಾಯಕನ ಅಭಿಮಾನಿಗಳಿಂದ ಧರಣಿ : ನಗರದ ಆರ್‌ಪಿಡಿ ವೃತ್ತಕ್ಕೆ ವೀರ ಮದಕರಿ ನಾಯಕನ ಹೆಸರಿರುವ ನಾಮಫಲಕ ತೆರವು ಹಿನ್ನೆಲೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕರವೇ ಹಾಗೂ ವೀರಮದಕರಿ ನಾಯಕನ ಅಭಿಮಾನಿಗಳ ಸಂಘದಿಂದ ಪ್ರತಿಭಟನೆ ನಡೆಸಲಾಗುತ್ತಿದೆ.
ನಗರದ ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿಗೆ ಆಗಮಿಸಿದ ಕರವೇ ಕಾರ್ಯಕರ್ತರು ಹಾಗೂ ವೀರಮದಕರಿ ನಾಯಕನ ಅಭಿಮಾನಿಗಳು, ಪೊಲೀಸ್ ಇಲಾಖೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿ ಕರವೇ ಮುಖಂಡ, ಕನ್ನಡಪರ ಹೋರಾಟಗಾರರು ಹಾಗೂ ವೀರ ಮದಕರಿ ಅಭಿಮಾನಿಗಳು ನಾಮಫಲಕ ಕೂರಿಸಲು ಹೋದಾಗ ಪೊಲೀಸರು ಯುವಕರ ಮೇಲೆ ಲಾಠಿಚಾರ್ಜ್ ಮಾಡುವ ಮೂಲಕ 30ಕ್ಕೂ ಹೆಚ್ಚು ಯುವಕರನ್ನು ಬಂಧನ ಮಾಡಿದ್ದಾರೆ.
ಈ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು. ಆರ್‌ಪಿಡಿ ವೃತ್ತದಲ್ಲಿ ವೀರ ಮದಕರಿ ನಾಮಫಲಕ ಹಾಕಲು ಜಿಲ್ಲಾಡಳಿತ ಅನುಮತಿ ಕೊಡಬೇಕು ಎಂದು ಒತ್ತಾಯ ಮಾಡಿದರು.
ಇದನ್ನೂ ಓದಿ:3 ವರ್ಷದ ಪ್ರೀತಿ 3 ನಿಮಿಷದಲ್ಲಿ ಅಂತ್ಯ : ನೀ ನನಗೇ ಬೇಡ ಎಂದಳಾಕೆ.. ನೇಣಿಗೆ ಕೊರಳೊಡ್ಡಿದ ಪ್ರಿಯಕರ..