ಬೆಳಗಾವಿ : ವಾಹನಗಳನ್ನು ಕಳ್ಳತನ ಮಾಡಿ ಅವುಗಳ ಚೆಸ್ಸಿ ಹಾಗೂ ಇಂಜಿನ್ ನಂಬರ್ ಬದಲಾಯಿಸಿ ಮುಗ್ದ ಜನರನ್ನು ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ.
![3 vatical theft arrest](https://etvbharatimages.akamaized.net/etvbharat/prod-images/kn-bgm-05-08-crime-news-ka10029_08122020165602_0812f_1607426762_463.jpg)
ರಾಯಬಾಗ ತಾಲೂಕಿನ ಖಣದಾಳ ಗ್ರಾಮದ ವಾಸುದೇವ ನಾಯಿಕ (34), ಮೂಡಲಗಿಯ ಖಾನಟ್ಟಿಯ ಮಹಾಂತೇಶ ಕರಗಣ್ಣಿ (24) ಹಾಗೂ ರಾಜಾಪೂರ ಗ್ರಾಮದ ವಿವೇಕಾನಂದ ತಳವಾರ (20) ಬಂಧಿತ ಆರೋಪಿಗಳು.
ಬಂಧಿತ ಮೂವರ ಆರೋಪಿಗಳು ಕಳ್ಳತನ ಮಾಡಿದ ಬುಲೆರೊ ವಾಹನವನ್ನು ಘಟಪ್ರಭಾ ಮತ್ತು ರಾಜಾಪೂರ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ ಪೊಲೀಸರು ಅವರೆನ್ನಲ್ಲ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ.
![3 vatical theft arrest](https://etvbharatimages.akamaized.net/etvbharat/prod-images/kn-bgm-05-08-crime-news-ka10029_08122020165602_0812f_1607426762_504.jpg)
ಬಂಧಿತರಿಂದ ಟ್ರಕ್, ಮಹೀಂದ್ರಾ ಬುಲೆರೊ ಪಿಕ್ ಅಪ್ ಗೂಡ್ಸ್ ವಾಹನ, ಮಹೀಂದ್ರ ಬುಲೆರೊ ಜೀಪ್ ಹಾಗೂ ಮಹೀಂದ್ರಾ ಸ್ಕಾರ್ಪಿಯೋ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ವಾಹನಗಳ ಚೆಸ್ಸಿ ನಂಬರ್ ಹಾಗೂ ಇಂಜಿನ್ ನಂಬರ್ ನಂಬರ್ ತಿದ್ದುಪಡಿ ಮಾಡಿ ಮುಗ್ಧ ಜನರಿಗೆ ಮೋಸ ಮಾಡುವ ಮೂಲಕ ಮಾರಾಟದಲ್ಲಿ ತೊಡಗುತ್ತಿದ್ದರು.
ಆರೋಪಿಗಳು ಸಾಕಷ್ಟು ಜನರಿಗೆ ಕದ್ದಿರುವ ವಾಹನಗಳನ್ನು ಮಾರಾಟ ಮಾಡಿದ್ದಾರೆ ಎಂಬ ಮಾಹಿತಿ ಇದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.